Monday, September 25, 2023

Latest Posts

4 ಮಂದಿಗಾಗಿ 144 ಸೆಕ್ಷನ್ ಜಾರಿ ಮಾಡಿದ್ರು- ಬಿಜೆಪಿ ಮೇಲೆ ಜೆಡಿಎಸ್ ಶಾಸಕ ಆಕ್ರೋಶ

- Advertisement -

ಬೆಂಗಳೂರು: ಅತೃಪ್ತ ಶಾಸಕರನ್ನು ಭೇಟಿ ಮಾಡುವ ಸಲುವಾಗಿ ಮುಂಬೈಗೆ ತೆರಳಿದ್ದ ನಮಗೆ ಹೋಟೆಲ್ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ನಾವು ನಾಲ್ಕು ಮಂದಿಯ ಸಲುವಾಗಿ ಹೋಟೆಲ್ ಎದುರು 144 ಸೆಕ್ಷನ್ ಜಾರಿ ಮಾಡಿದ್ರು ಅಂತ ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹರಿಹಾಯ್ದರು.

ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ನಮ್ಮನ್ನು ಹೋಟೆಲ್ ಒಳಗೆ ಪ್ರವೇಶಿಸಲು ತಡೆಯಲಾಯಿತು. ಸಾರ್ವಜನಿಕರ ಸೇವೆಗೆಂದು ತೆರೆದಿರುವ ಹೋಟೆಲ್ ನೊಳಗೆ ಹೋಗಲು ಬಿಡಲಿಲ್ಲ. ಕೊನೆಗೆ ಸುರಿಯುತ್ತಿರುವ ಮಳೆಯಲ್ಲೇ ತಿಂಡಿ ತಿಂದೆವು. ಇಬ್ಬರು ಕ್ಯಾಬಿನೆಟ್ ಸಚಿವರು ಮತ್ತು ಇಬ್ಬರು ಎಂಎಲ್ ಎಗಳನ್ನು ಸರಿಯಾಗಿ ನಡೆಸಿಕೊಳ್ಳದೆ ಅಲ್ಲಿ ಆಡಳಿತದಲ್ಲಿರೋ ಬಿಜೆಪಿ ಸರ್ಕಾರ ಅವಮಾನ ಮಾಡಿದೆ ಅಂತ ಶಿವಲಿಂಗೇಗೌಡ ಕಿಡಿ ಕಾರಿದ್ರು.

ಇನ್ನು ಈ ನಡು ರಸ್ತೆಯಲ್ಲಿ ಜನಪ್ರತಿನಿಧಿಗಳು ಕುಳಿತಿದ್ದಾಗ ಸೌಜನ್ಯಕ್ಕಾದ್ರೂ ಅಲ್ಲಿನ ಗೃಹಸಚಿವರು ಭೇಟಿಯಾಗಲಿಲ್ಲ. ಶಾಸಕರು ನಮ್ಮನ್ನು ಬನ್ನಿ ಅಂತ ಹೇಳಿದ್ದಕ್ಕೇ ನಾವು ಮುಂಬೈಗೆ ತೆರಳಿದ್ದೆವು ಅಂತ ಶಿವಲಿಂಗೇಗೌಡ ಹೇಳಿದ್ರು. ಇನ್ನು ಆ ಹೋಟೆಲ್ ನಲ್ಲಿ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಸಚಿವರು- ಶಾಸಕರು, ಗೂಂಡಾಳಿದ್ದರು. ಹೀಗಾಗಿ ನಮಗೆ ಪ್ರವೇಶ ನಿರ್ಬಂಧಿಸಲಾಗಿತ್ತು ಎಂದರು. ಇನ್ನು ರಸ್ತೆಯಲ್ಲೇ ನಾವು ಕುಳಿತಿದ್ದರಿಂದ ಅಲ್ಲಿನ ಸರ್ಕಾರ 144 ಸೆಕ್ಷನ್ ಜಾರಿ ಮಾಡಿದ್ರು. ಕೇವಲ ನಾವು ನಾಲ್ಕು ಮಂದಿಯ ಸಲುವಾಗಿ ನಿಷೇಧಾಜ್ಞೆ ಜಾರಿ ಮಾಡಿದು ಅಂತ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಶಿವಲಿಂಗೇಗೌಡ ಇದೇ ವೇಳೆ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು.

- Advertisement -

Latest Posts

Don't Miss