Friday, May 17, 2024

Latest Posts

ಕನ್ನಡ ರಾಜ್ಯೋತ್ಸವದಂದು ಉಚಿತ ಹಚ್ಚೆ ಹಾಕುತ್ತಿರುವ ಕನ್ನಡಿಗ ಟ್ಯಾಟು ಕಲಾವಿದ..!

- Advertisement -

ಮೈಸೂರು : ಮೈಸೂರಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವದ ಮತ್ತೊಂದು ವಿಶೇಷ ಅಂತ ಹೇಳಿದರೆ ಕನ್ನಡ ಪದಗಳ ಉಚಿತ ಟ್ಯಾಟು. ಹೌದು ಮೈಸೂರಿನ ಟ್ಯಾಟು (ಹಚ್ಚೆ) ಕಲಾವಿದ ಸುನಿಲ್ ಅವರು ಕುವೆಂಪುನಗರದಲ್ಲಿರುವ ತಮ್ಮ ಟ್ಯಾಟೂ ಇಂಪ್ಯಾಕ್ಟ್ ಸ್ಟುಡಿಯೋದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಕನ್ನಡಿಗರು ಕನ್ನಡ ಪ್ರೇಮಿಗಳಿಗಾಗಿ ಉಚಿತವಾಗಿ ಕನ್ನಡ ಪದಗಳ ಟ್ಯಾಟು ಹಾಕಿಕೊಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ರಾತ್ರಿ 7:00 ವರೆಗೂ ಬರುವ ಎಲ್ಲರಿಗೂ ಆಯ್ದ ಕೆಲ ಕನ್ನಡ ಪದಗಳ ಟ್ಯಾಟೂ ಉಚಿತವಾಗಿ ಹಾಕಿ ಕೊಡುತ್ತಾರೆ‌. ಕನ್ನಡಿಗ, ಕನ್ನಡ, ಕನ್ನಡತಿ ಕರ್ನಾಟಕ ಕರ್ನಾಟಕದ ಬಾವುಟ ಸೇರಿ ಹಲವು ಟ್ಯಾಟುಗಳು ಉಚಿತವಾಗಿ ಹಾಕಿಕೊಡಲಾಗುತ್ತದೆ. ಇದು ಒಬ್ಬ ಟ್ಯಾಟು ಕಲಾವಿದನಾಗಿ ಕನ್ನಡಕ್ಕಾಗಿ ಸಲ್ಲಿಸುತ್ತಿರುವ ಅಳಿಲುಸೇವೆ ಅನ್ನೋದು ಕಲಾವಿದ ಸುನಿಲ್ ಅವರ ಮಾತು.

ಮರಾಠ ಮೀಸಲಾತಿಗಾಗಿ ಬಸ್ಸುಗಳಿಗೆ ಕಲ್ಲು ತೂರಾಟ..!

ಮುಂದುವರಿದ ಹುಲಿ ಉಗುರು ಕಾರ್ಯಚರಣೆ; ಹುಬ್ಬಳ್ಳಿಯ ಉದ್ಯಮಿಗಳ ಮನೆಯಲ್ಲಿ ಶೋಧಕಾರ್ಯ..!

ಗಣಿ ನಾಡಿನಲ್ಲಿ ನೀರಿಗಾಗಿ ಆಹಾಕಾರ;ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ..!

- Advertisement -

Latest Posts

Don't Miss