Sunday, May 26, 2024

Latest Posts

ಅಪ್ಪು ಅಂತಿಮ ದರ್ಶನ ಪಡೆದ ಗೆಹ್ಲೋಟ್..!

- Advertisement -

www.karnatakatv.net: ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ಇನ್ನು ನೆನಪು ಮಾತ್ರ, ಅಪ್ಪು ಅವರ ಅಂತಿಮ ದರ್ಶನಕ್ಕೆ ನಾಡಿನಾದ್ಯಂತ ಮೂಲೆ ಮೂಲೆಯಿಂದ ಜನರು ಬರುತ್ತಿದ್ದಾರೆ. ಹಾಗೇ ಇಂದು ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲರಾದ ಗೆಹ್ಲೋಟ್, ಸಚಿವ ಅರಗ ಜ್ಞಾನೇಂದ್ರ ಅಂತಿಮ ನಮನವನ್ನು ಸಲ್ಲಿಸಿದ್ರು.

ಹಾಗೇ ಪುನೀತ್ ಕುಟುಂಬಕ್ಕೆ ರಾಜ್ಯಪಾಲರು ಸಾಂತ್ವಾನವನ್ನು ಹೇಳಿದ್ದರು. ನಂತರ ಗೆಹ್ಲೋಟ್ ಅವರು ಮಾತನಾಡಿ, ಸಿನಿಮಾ ಜಗತ್ತಿನಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಪುನೀತ್ ರಾಜ್ ಕುಮಾರ್ ಇನ್ನು ನಮ್ಮ ಜೊತೆ ಇಲ್ಲ, ಪುನೀತ್ ಅವರು ಬಾಲ್ಯದಿಂದಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಮಹಾನ್ ಕಲಾವಿದ, ಅಷ್ಟೇ ಅಲ್ಲದೇ ಸಣ್ಣ ವಯಸ್ಸಿನಲ್ಲೆ ಪ್ರಶಸ್ತಿ ಪುರಸ್ಕಾರ ಸಿಕ್ಕಿತ್ತು. ಇವರು ಸಾಮಾಜಿಕ ಸೇವೆಯನ್ನೂ ಸಹ ಮಾಡಿದ್ದರು. ಇವರ ಈ ಅಕಾಲಿಕ ಮರಣದಿಂದ ಸಿನಿಮಾ ಸಮಾಜಕ್ಕೆ ಮತ್ತು ದೇಶಕ್ಕೆ ಭಾರಿ ನಷ್ಟವಾಗಿದೆ ಅವರಿಗೆ ಶ್ರದ್ಧಾಂಜಲಿ ಕೋರುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಹೇಳಿದರು.

- Advertisement -

Latest Posts

Don't Miss