Saturday, July 27, 2024

Latest Posts

ಗಣರಾಜ್ಯೋತ್ಸವದ ಸ್ತಬ್ದ ಚಿತ್ರ ಪ್ರದರ್ಶನದಲ್ಲಿ ರಾರಾಜಿಸಲಿದ್ದಾರೆ ಕರುನಾಡ ರತ್ನ ಅಣ್ಣಾವ್ರು…

- Advertisement -

ಭಾರತಕ್ಕೆ ಸಂವಿಧಾನ ಜಾರಿಯಾದ ಜನವರಿ 26ರ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಕೊರೋನಾ ನಡುವೆಯೂ ಕೆಲ ನಿಯಮಗಳನ್ನು ಅನುಸರಿಸಿ ಗಣರಾಜ್ಯೋತ್ಸ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ. ಅದ್ರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸುವ ಪದ್ಧತೆ ಬೆಳೆದುಕೊಂಡು ಬಂದಿದೆ. ದೆಹಲಿಯಲ್ಲಿ ನಡೆಯಲಿರುವ ಗಣರೋಜ್ಯೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಸ್ತಬ್ದ ಚಿತ್ರ.

ಗಣರಾಜ್ಯೋತ್ಸವದ ದಿನದಂದು ವಿವಿಧ ರಾಜ್ಯಗಳು ತಮ್ಮ ನಾಡಿದ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಬಿಂಬಿಸುವ ಸ್ತಬ್ಧ ಚಿತ್ರವನ್ನು ಮೆರವಣಿಗೆಯಲ್ಲಿ ಪ್ರದರ್ಶನ ಮಾಡುತ್ತವೆ. ಈ ಬಾರಿ ನಮ್ಮ ರಾಜ್ಯದಿಂದ ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ‘ ಹಂಪಿ – ವಿಜಯದ ನಗರ ‘ ಸ್ತಬ್ಧ ಚಿತ್ರವನ್ನು ಪ್ರದರ್ಶನವನ್ನು ಮಾಡಲಾಗುತ್ತಿದೆ. ಇದರಲ್ಲಿ ವಿಶೇಷವೊಂದಿದೆ.

ಸ್ತಬ್ಧ ಚಿತ್ರದಲ್ಲಿ, ವಿಜಯನಗರ ಸಾಮ್ರಾಜ್ಯದ ಅಪ್ರತಿಮ ವೀರ ಕೃಷ್ಣದೇವರಾಯ ಸಿಂಹಾಸನದಲ್ಲಿ ಕೃಷ್ಣದೇವರಾಯ ಮಹಾರಾಜರ ರೂಪದಲ್ಲಿ ಮೇರುನಟ ಡಾ.ರಾಜ್‌ಕುಮಾರ್ ಪ್ರತಿಮೆ ಕೂರಿಸಿರುವುದು ಸ್ತಬ್ಧಚಿತ್ರದ ವಿಶೇಷ ಆಕರ್ಷಣೆಯಾಗಿದೆ. ಅಷ್ಟಕ್ಕೂ ಕೃಷ್ಣದೇವರಾಯರ ಬದಲಾಗಿ ಡಾ,ರಾಜ್ ಅವರ ಪ್ರತಿಮೆ ಕುರಿಸಲು ಕಾರಣವೊಂದಿದೆ. ಅದೇನಪ್ಪ ಅಂದ್ರೆ ಕೃಷ್ಣದೇವರಾಯನ ಕುರಿತ ಕನ್ನಡ ಚಲನಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರು ತಮ್ಮ ನಟನೆಯಿಂದಲೇ ಕರುನಾಡಿನ ಮನೆ ಗೆದ್ದವರು ರಾಜ್. ಹೀಗಾಗಿ ಆ ಸ್ಥಾನದಲ್ಲಿ ರಾಜ್ ಪ್ರತಿಮೆ ಇಡಲಾಗಿದೆಯಂತೆ. ಈ ಮೂಲಕ ರಾಜರತ್ನ ಅಣ್ಣಾವ್ರಿಗೆ ಒಂದು ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

- Advertisement -

Latest Posts

Don't Miss