Sunday, May 26, 2024

Latest Posts

ಐಷಾರಾಮಿ ಜೀವನ ನಡೆಸಲು ದೇವಸ್ಥಾನದ ಹುಂಡಿ ಕದಿಯುತ್ತಿದ್ದ ಸರ್ಕಾರಿ ಶಿಕ್ಷಕನ ಬಂಧನ

- Advertisement -

ಕಾರವಾರ: ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಗ್ರಾಮದ ಶ್ರೀ ಮಹಾಗಜಲಕ್ಷ್ಮೀ ದೇವಸ್ಥಾನ ಮತ್ತು ಗುಳ್ಳಾಪುರದ ಶ್ರೀ ಶಿವವ್ಯಾಘ್ರೇಶ್ವರ ದೇವಸ್ಥಾನದಲ್ಲಿ ದೇವರ ಹುಂಡಿಯನ್ನು ಕದ್ದಿದ್ದು, ಯಲ್ಲಾಪುರ ಪೊಲೀಸ್ ಸಿಪಿಐ ಸುರೇಶ್ ಯಲ್ಲೂರು ನೇತೃತ್ವದ ತಂಡ ದರೋಡೆಕೋರನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವಸಂತ್ ಕುಮಾರ್ ಎಂಬುವರು ದರೋಡೆ ಮಾಡಿ ಪೊಲೀಸರ ಅತಿಥಿ ಆಗಿದ್ದಾರೆ.

65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ದಿವ್ಯಾ ಟಿಎಸ್

ವಸಂತ್ ಕುಮಾರ್ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯವರಾಗಿದ್ದು, ಇತನ ಸ್ನೇಹಿತ ಸಲೀಂ ರಾಣೆಬೆನ್ನೂರಿನ ಗುಡ್ಡದಬೇವಿನಹಳ್ಳಿಯವನು. ಶ್ರೀಮಂತಿಕೆ ಮತ್ತು ಐಷಾರಾಮಿ ಜೀವನ ನಡೆಸಲು ಶಿಕ್ಷಕ ಯಲ್ಲಾಪುರ, ಅಂಕೋಲಾ, ಶಿರಸಿ ಗ್ರಾಮೀಣ, ಬನವಾಸಿ, ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ, ಹೊಸನಗರ, ಹಾವೇರಿ ಜಿಲ್ಲೆಯ ಹಂಸಬಾವಿ, ಹಿರೇಕೆರೂರ ಸೇರಿ ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ 18ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದಾರೆ.

ಕಾಂಗ್ರೆಸ್ ಸಂಸದರು ಉದ್ದೇಶಪೂರ್ವಕವಾಗಿ ಲೋಕಸಭೆಯ ಪ್ರಶ್ನೋತ್ತರ ವೇಳೆ ಅಡ್ಡಿಪಡಿಸಿದ್ದಾರೆ : ಕೇಂದ್ರ ಸಚಿವ ಅಮಿತ್ ಶಾ

ಐಷಾರಾಮಿ ಜೀವನದ ಆಸೆಗೆ ಬಿದ್ದು ಕಳೆದ ಮೂರ್ನಾಲ್ಕು ವರ್ಷದಿಂದ ಕಳ್ಳತನ ಮಾಡುತ್ತಿದ್ದ ಶಿಕ್ಷಕ ಮತ್ತು ಆತನ ಸ್ನೇಹಿತನ್ನು ಬಂಧಿಸಿದ್ದಾರೆ. ಒಟ್ಟು₹ 19,20,285 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

14 ವರ್ಷದ ಬಾಲಕಿ ಮೇಲೆ ಸಾಮೂಹಿತ ಅತ್ಯಾಚಾರ : ಮೂವರ ಬಂಧನ

ಭಾರತ-ಚೀನಾ ಘರ್ಷಣೆ : ತವಾಂಗ್‌ನಲ್ಲಿ ನಡೆದ ಘರ್ಷಣೆ ಕುರಿತು ಅರುಣಾಚಲ ಸಂಸದ ಮಾಹಿತಿ

- Advertisement -

Latest Posts

Don't Miss