Saturday, July 27, 2024

Latest Posts

KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.

- Advertisement -

ಕೋಲಾರ.ಕೆಸಿ ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯ ಅಂತರ್ಜಲ ವಿಷವಾಗುತ್ತಿದೆ ಎಂದು  ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್  ಆರೋಪ ಕುರಿತು, ಕೋಲಾರದ ಶಾಸಕರ ಕೊತ್ತೂರು ಜಿ ಮಂಜುನಾಥ್ ಪ್ರತಿಕ್ರಿಯೆ  ನೀಡಿದ್ದಾರೆ.

ಎರಡು ಬಾರಿ ಶುದ್ದೀಕರಿಸಿ ಕೋಲಾರ‌ ಜಿಲ್ಲೆಯ ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ಹರಿಸಲಾಗ್ತಿದೆ, ಇದೆ ಕೆಸಿ ವ್ಯಾಲಿ ನೀರು ಶುದ್ದಿಕರಿಸದೇ ತಮಿಳು ನಾಡಿಗೆ ಹರಿಯುತ್ತಿದೆ ಅಲ್ಲಿ ಸಾವಿರಾರು ಎಕರೆಯಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ,ತಮಿಳುನಾಡಿನಲ್ಲಿ‌ ಕೆಸಿ ವ್ಯಾಲಿ ನೀರಿನಿಂದ ಬೆಳೆದ ಬೆಲೆಗಳಿಗೆ ಯಾವುದೇ ಹಾನಿಯಾಗುತ್ತಿಲ್ಲ, ಶುದ್ದೀಕರಿಸದೇ ತಮಿಳು ನಾಡಿಗೆ ಹರಿಯುತ್ತಿರುವ ನೀರೆ ಚೆನ್ನಾಗಿದೆ ಅನಿಸ್ತಿದೆ, ಲಾರಕ್ಕೆ ಎರಡು ಬಾರಿ ಶುದ್ದೀಕರಿಸಿ ಹರಿಸ್ತಿರೋದೆ ತಪ್ಪಾ,

ಕೆಸಿ ವ್ಯಾಲಿ ನೀರು ಕೋಲಾರಕ್ಕೆ ಬರದಂತೆ ತಮಿಳು ನಾಡಿನವರು ನಾನಾ ಪ್ರಯತ್ನ ಮಾಡ್ತಿದ್ದಾರೆ, ೩೦ ಸಾವಿರಕ್ಕೂ ಎಕರೆ ಪ್ರದೇಶದಲ್ಲಿ ತಮಿಳುನಾಡಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ,ಹಣಕೊಟ್ಟು ಕೆಸಿ ವ್ಯಾಲಿ ಯೋಜನೆಯ ಮಷೀನ್ಸ್ ಅನ್ನು ಕೆಡಿಸಲು  ತಮಿಳುನಾಡಿನವರು ಮುಂದಾಗುತ್ತಿದ್ದಾರೆ, ಇಷ್ಟೆಲ್ಲಾ ಪ್ಲಾನ್ಸ್ ಅವ್ರು ಸುಮ್ಮನೆ ಮಾಡುತ್ತಿದ್ದಾರಾವಿಜ್ಞಾನಿಗಳು ಸಹ ಕೆಸಿ ವ್ಯಾಲಿ ನೀರನ್ನ ಟೆಸ್ಟ್ ಮಾಡಿದ್ದಾರೆ, ಇದರಿಂದ ಏನು ತೊಂದ್ರೆ ಇಲ್ಲ ಅಂತ ಹೇಳಿದ್ದಾರೆ, ಪಲ್ಯೋಷನ್ ಬೋರ್ಡ್ ನವರು ಸಹ ಎನ್.ಓ.ಸಿ ಕೊಟ್ಟಿದ್ದಾರೆ

ಕೆಸಿ ವ್ಯಾಲಿ‌ ಬಗ್ಗೆ ಮಾತನಾಡೋರು ನೂರು ಮಾತನಾಡುತ್ತಾರೆ, ರಾಜಕೀಯ ಉದ್ದೇಶದಿಂದ ಕೆಸಿ ವ್ಯಾಲಿ ಬಗ್ಗೆ ಮಾತನಾಡುತ್ತಿದ್ದಾರೆ. ತಮಿಳುನಾಡಿಗೆ ಹೋಗ್ತಿರುವ ನೀರು ಇಲ್ಲಿಗೆ ಬರ್ತಿರುವ ನೀರು ಎರಡನ್ನೂ ಚೆಕ್ ಮಾಡಿ ೧೦೦% ಪಲ್ಯೋಟೆಡ್ ನೀರು ತಮಿಳುನಾಡಿಗೆ ಹರಿಯುತ್ತಿದೆ, ಲೆಕ್ಕಕ್ಕೆ ಮಾತ್ರ ಪಲ್ಯೋಟೆಡ್ ವಾಟರ್ ಅದ ನೀರಿನಿಂದ ಬೆಳೆಯುತ್ತಿರುವ ತರಕಾರಿಗಳಿಗಳು ಬೆಂಗಳೂರಿಗೆ ಬರುತ್ತಿದೆ ಕೆಸಿ ವ್ಯಾಲಿಯಿಂದ ಅತಂರ್ಜಲ ಸುಧಾರಿಸಿದೆ ಒಳ್ಳೆಯ ಯೋಜನೆ ಇದು ಕೆಸಿ ವ್ಯಾಲಿಯಿಂದಲೇ ಟಮೋಟೋ ಬೆಳೆಗೆ ತೊಂದರೆ ಹಾಗಿದೆ ಅನ್ನೋದಾದ್ರೆ

ಮುಳಬಾಗಿಲಿನ ನಂಗ್ಲಿ ಕಡೆ ಕೆಸಿ ವ್ಯಾಲಿ ನೀರು ಹರಿದಿಲ್ಲ ಅಲ್ಲಿ ರೋಗಗಳು ಬಂದಿದೆ  ಇದಕ್ಕೆ ಏನು ಕಾರಣ, ಕೆಸಿ ವ್ಯಾಲಿಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದ ಕೊತ್ತೂರು ಮಂಜುನಾಥ್ ನೀಡಿದರು

 

- Advertisement -

Latest Posts

Don't Miss