Sunday, May 26, 2024

Latest Posts

ಸಿ ಎಂ ಪರಿಹಾರ ನಿಧಿಯಿಂದ ಕ್ರೈಸ್ತ ಮಿಷನರಿಗಳಿಗೆ ಲಕ್ಷಾಂತರ ರೂ ಪರಿಹಾರ ದೇಣಿಗೆ

- Advertisement -

ಸಿ ಎಂ ಪರಿಹಾರ ನಿಧಿ ಎನ್ನುವುದು ಒಂದಲ್ಲಾ ಒಂದು ಸಾಮಾಜಿಕ ಕಾರ್ಯಗಳಿಗೆ ಉಪಯೋಗವಾಗುವಂತದ್ದು. ಯಾರು ಕಷ್ಟದಿಂದ ಬಳಲುತ್ತಿರುತ್ತಾರೋ ಅಂತವರಿಗೆ ಸಿ ಎಂ ಪರಿಹಾರ ನಿಧಿಯಿಂದ ಮುಖ್ಯಮಂತ್ರಿಗಳು ನೆರೆವನ್ನು ನೀಡುತ್ತಾರೆ. ಈ ನಿಟ್ಟಿನಲ್ಲಿ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಮುಂದಾಗಿದ್ದಾರೆ. ನವೀನ್​ ಪಟ್ನಾಯಿಕ್ ಅವರು (Odisha CM Naveen Patnaik) ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅಂದಾಜು 80 ಲಕ್ಷ ರೂಪಾಯಿಯನ್ನು ಕ್ರೈಸ್ತರ ಮಿಷನರೀಸ್​ ಆಫ್​ ಚಾರಿಟೀಸ್​ಗೆ ತುರ್ತು ಪರಿಹಾರ ಕೊಡುಗೆ ನೀಡಿದ್ದಾರೆ.

ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಗೆ ಅನುಸಾರವಾಗಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಒಡಿಶಾ ರಾಜ್ಯದಲ್ಲಿ ನೆಲೆಸಿರುವ ಕ್ರೈಸ್ತ ಮಿಷನರಿಗಳಿಗೆ ತಮ್ಮ ನೋಂದಣಿಯನ್ನು ನವೀಕರಣಗೊಳಿಸಲು ನಿರಾಕರಿಸಲಾಗಿತ್ತು. ಹೀಗಾಗಿ ಒಡಿಶಾದ ಕ್ರೈಸ್ತ ಮಿಷನರಿಗಳಿಗೆ ಹಣಕಾಸಿನ ಮುಗ್ಗಟ್ಟು ತಲೆದೋರಿತ್ತು. ಈ ಹಂತದಲ್ಲಿ ನೆರವಿನ ಹಸ್ತ ಚಾಚಿದ ರಾಜ್ಯದ ಮುಖ್ಯಮಂತ್ರಿ ನವೀನ್​ ಪಟ್ನಾಯಿಕ್ ಅವರು ತಕ್ಷಣಕ್ಕೆ 78.76 ಲಕ್ಷ ರೂಪಾಯಿಗಳನ್ನು ತಮ್ಮ ಸಿಎಂ ಫಂಡ್​ನಿಂದ ಬಿಡುಗಡೆ ಮಾಡಿದ್ದಾರೆ.

- Advertisement -

Latest Posts

Don't Miss