Sunday, March 3, 2024

Latest Posts

ಸಂಸತ್ತಿನಲ್ಲಿ ಮೋದಿ-ಶಾ ಇದ್ದಾಗ ಕಾಶ್ಮೀರದಲ್ಲಿ ಅಜಿತ್ ಧೋವಲ್ ಮಾಡಿದ್ದೇನು..?

- Advertisement -

ಕರ್ನಾಟಕ ಟಿವಿ : ಕಾಶ್ಮೀರದಲ್ಲಿ ಇದ್ದಕ್ಕಿದ್ದಂತೆ ಕರ್ಫ್ಯೂ, ಲಕ್ಷಾಂತ ಸೈನಿಕರ ನಿಯೋಜನೆ.. ಇದೆಲ್ಲವನ್ನ ನೋಡಿದ ವಿಪಕ್ಷಗಳು ಲಾಲ್ ಚೌಕ್ ನಲ್ಲಿ ಮೋದಿ ಬಾರಿ ಧ್ವಜಾರೋಹಣ ಮಾಡ್ತಾರೆ. ಹೀಗಾಗಿ ಸೇನೆ ನಿಯೋಜನೆ ಮಾಡ್ತಿದ್ದಾರೆ ಅಂತ.. ಮೊಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾರನ್ನ ರಾತ್ರೋರಾತ್ರಿ ಗೃಹಬಂಧನದಲ್ಲಿರಿಸುತ್ತಿದ್ದಂತೆ ಮೋದಿ ಮತ್ತೆ ಏನಾದರೂ ಪಾಕಿಸ್ತಾನ ಮೇಲೆ ಯುದ್ಧ ಸಾರಿಬಿಟ್ರಾ ಅನ್ನೋ ಚರ್ಚೆ ಸಹ ಶುರುವಾಯ್ತು.. ಆದ್ರೆ, ಅಮಿತ್ ಶಾ ರಾಜ್ಯಸಭೆಗೆ ಎಂಟ್ರಿಕೊಟ್ಟ ಕೆಲವೇ ನಿಮಿಷಗಳಲ್ಲಿ ಆರ್ಟಿಕಲ್ 370, 35ಎ ರದ್ದು ಮಾಡಿವ ಮಸೂದೆ ಮಂಡಿಸಿದ್ರು.. ಒಂದು ಕ್ಷಣ ಕಕ್ಕಾಬಿಕ್ಕಿಯಾದ ವಿಪಕ್ಷಗಳು ಗಲಾಟೆ ಮಾಡಲು ಶುರು ಮಾಡಿದ್ರು. ಇನ್ನೂ ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡ್ತಾರೆ ಅಂತ ಲ್ರೂ ಭಾವಿಸಿದ್ರು. ಆದ್ರೆ, ಅದು ಸಾಧ್ಯವಾಗಲೇ ಇಲ್ಲ.. ಇನ್ನು ಜಮ್ಮು ಕಾಶ್ಮೀರ ಕೂಡ ಹೊತ್ತಿಉರಿಯುತ್ತೆ ಅಂತ ಭಾವಿಸಲಾಗಿತ್ತು ಆದ್ರೆ ಅದೂ ಆಗಲಿಲ್ಲ. ಬದಲಾಗಿ ಅಲ್ಲಿ ಆಗಿದ್ದೇ ಬೇರೆ..

ಡೇಂಜರ್ ಪ್ರದೇಶದಲ್ಲಿ ಬ್ರೇಕ್ ಫಾಸ್ಟ್ ಮಾಡಿ ಟೀ ಕುಡಿದ ಜೇಮ್ಸ್ ಬಾಂಡ್..!

https://www.facebook.com/karnatakatv.net/videos/383362002299888/?t=7

ಈ ನಡುವೆ ಮೋದಿಯ ಮಾಸ್ಟರ್ ಮೈಂಡ್ ಅಜಿತ್ ಧೋವಲ್ ಎಲ್ಲಿದ್ದಾರೆ ಅಂತ ಎಲ್ರೂ ತಲೆಕರೆಡಿಸಿಕೊಂಡಿದ್ರು.. ಕಾಶ್ಮೀರದಲ್ಲಿ ಗಲಾಟೆಯಾಗದಂತೆ ಅಜಿತ್ ಧೋವಲ್ ದೆಹಲಿಯಲ್ಲಿ ಮೀಟಿಂಗ್ ಮಾಡ್ತಿದ್ದಾರೆ ಅಂತ ದಷ್ಟು ನ್ಯೂಸ್ ಚಾನಲ್ ಗಳು ಪುಂಕಾನುಪುಂಕವಾಗಿ ಬ್ರೇಕಿಂಗ್ ನ್ಯೂಸ್ ಪ್ರಕಟ ಮಾಡಿದ್ರು. ಹೌದು ನ್ಯೂಸ್ ಚಾನಲ್ ಗಳು ಹೇಳಿದಂತೆ ಅಜಿತ್ ಧೋವಲ್ ಮೀಟಿಂಗ್ ಮಾಡ್ತಿದ್ರು, ಆದ್ರೆ, ದೆಹಲಿಯಲ್ಲಿ ಎಸಿ ರೂಂ ನಲ್ಲಿ ಕೂತು ಅಧಿಕಾರಿಗಳ ಜೊತೆಯಲ್ಲಿ ಅಲ್ಲ.. ಬದಲಾಗಿ ಕಾಶ್ಮೀರದಲ್ಲಿ ನಿರಂತರ ಹಿಂಸಾಚಾರಕ್ಕೆ, ಸೇನೆಯ ಮೇಲೆ ಕಲ್ಲುತೂರಾಟಕ್ಕೆ ಕಾರಣವಾಗಿದ್ದ ಸ್ಥಳದಲ್ಲೇ ಅಜಿತ್ ಧೋವಲ್ ಸ್ಥಳೀಯ ಮುಸ್ಲಿಂ ಸಮುದಾಯದವರಿಗೆ ಧೈರ್ಯ ತುಂಬುತ್ತಿದ್ರು.. ಮುಂದೆ ಹೇಗೆ ಕಾಶ್ಮೀರ ಉದ್ಧಾರ ಆಗುತ್ತೆ ಅಂತ ಎಳೆಎಳೆಯಾಗಿ ಅಲ್ಲಿದ್ದಮುಸ್ಲಿಂ ಸಮುದಾಯದವರಿಗೆ ಮನವರಿಕೆ ಮಾಡಿಕೊಡ್ತಿದ್ರು.. ಅಜಿತ್ ಧೋವಲ್ ಪಾಕಿಸ್ತಾನಕ್ಕೆ ಹೋಗಿ ಬಹಳ ವರ್ಷಗಳ ಕಾಲ ರಾ ಏಜೆಂಟ್ ಆಗಿ ಕಾರ್ಯನಿರ್ವಹಿಸಿ ಭಾರತ ಬಂದಿದ್ದ ಸ್ಟೋರಿ ಕೇಳಿ ಎಲ್ಲರಿಗೂ ಮೈ ಜುಮ್ ಅನ್ನಿಸ್ತಿತ್ತು. ಇದೀಗ ಸೇನಿಕರ ಮೇಲೆ ಕಲ್ಲು ತೂರಾಟ ಮಾಡೋರ ಮಧ್ಯೆ ಹೋಗಿಅಭಿವೃದ್ಧ ಬಗ್ಗೆ ಪಾಠ ಮಾಡಿರುವ ಅಜಿತ್ ಧೋವಲ್ ನಿಜವಾಗಿಯೂ ಭಾರತೀಯರ ಪಾಲಿನ ಜೇಮ್ಸ್ ಬಾಂಡ್ ಅಂದ್ರೆ ತಪ್ಪಾಗಲ್ಲ..   

- Advertisement -

Latest Posts

Don't Miss