Saturday, May 25, 2024

Latest Posts

ವ್ಯಾಪಕ ಭ್ರಷ್ಟಾಚಾರ ಆರೋಪ: ಒಂದೇ ಇಲಾಖೆಯ ನಾಲ್ವರು ಅಧಿಕಾರಿಗಳ ಎತ್ತಂಗಡಿ

- Advertisement -

ಹುಬ್ಬಳ್ಳಿ: ಅದು ರಾಜ್ಯದ ಎರಡನೇ ದೊಡ್ಡ ಪಾಲಿಕೆ. ಆ ಪಾಲಿಕೆಯಲ್ಲಿ ಹಗರಣಕ್ಕೇನೂ ಕಡಿಮೆ ಇಲ್ಲ. ಪಾಲಿಕೆಯಲ್ಲಿ ಖಾಸಿಲ್ಲದೆ ಯಾವುದೇ ಕೆಲಸ ಆಗೋದಿಲ್ಲ ಅನ್ನೋ ಅಲಿಖಿತ ನಿಯಮವೂ ಇದೆ. ಇದೀಗ ಪಾಲಿಕೆಯ ಒಂದೇ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.

ಆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಹಲವರು ಪಾಲಿಕೆ ಆಯುಕ್ತರಿಗೆ ದೂರು ಕೊಟ್ಟಿದ್ದರು. ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ನೋಟಿಸ್ ಕೊಟ್ಟರು ಬದಲಾಗಿರಲಿಲ್ಲ. ಹೀಗಾಗಿ ಪಾಲಿಕೆ ಆಯುಕ್ತರು ಆ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ನಾಲ್ವರಿಗೆ ಗೇಟ್ ಪಾಸ್ ನೀಡಿದ್ದಾರೆ. ಹಾಗಾದರೆ ಎತ್ತಂಗಡಿ ಆದ ಅಧಿಕಾರಿಗಳು ಯಾರೂ, ಯಾವ ಇಲಾಖೆ ಇಲ್ಲಿದೆ ಮಾಹಿತಿ.

ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ. ಇದು ರಾಜ್ಯದ ಎರಡನೇ ದೊಡ್ಡ ಪಾಲಿಕೆ. ಈ ಪಾಲಿಕೆ ಎಷ್ಟು ದೊಡ್ಡದಿದೆಯೋ ಅಷ್ಟೇ ಪಾಲಿಕೆಯಲ್ಲಿ ನಡೆಯುವ ಅವ್ಯವಹಾರ, ಭ್ರಷ್ಟಾಚಾರದ ವಿಷಯವಾಗಿ ಪಾಲಿಕೆ ಸದಾ ಸುದ್ದಿಯಲ್ಲಿರತ್ತೆ. ಇದೀಗ ಪಾಲಿಕೆ ಮತ್ತೊಂದು ವಿಷಯವಾಗಿ ಸುದ್ದಿಯಾಗಿದೆ. ಹೌದು ಪಾಲಿಕೆಯ ಒಂದೇ ಇಲಾಖೆಯ ನಾಲ್ವರು ಅಧಿಕಾದರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಪಾಲಿಕೆಯ ನಗರ ಯೋಜನಾ ಘಟಕದ ನಾಲ್ವರು ಅಧಿಕಾರಿಗಳನ್ನು ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ವರ್ಗಾವಣೆ ಮಾಡಿದ್ದಾರೆ.

ಪಾಲಿಕೆಯ ನಗರ ಯೋಜನಾ ಘಟಕದ ಅಧಿಕಾರಿಗಳಾದ ಭಾಗ್ಯಶ್ರೀ ಎಮ್.ಎನ್.ಲತಾರಾಣಿ ಜಿಎಮ್.ಬಸವಂತಿ ಪಾಟೀಲ್, ವಿಲಾಸ್, ಮಂಜುಳಾ ನಾಟೇಕರ್ ಸೇರಿ 7 ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ 4 ಯೋಜನಾ ಘಟಕದ ಅಧಿಕಾರಿಗಳೇ. ನಾಲ್ವರನ್ನು ವರ್ಗಾವಣೆ ಮಾಡೋಕೆ ಅಸಲಿ ಕಾರಣ ಭ್ರಷ್ಟಾಚಾರ.

ಲಂಚ ಕೊಡದೆ ಹೋದರೆ ಯಾವುದೇ ಪ್ರಮಾಣ ಪತ್ರ ನೀಡದೆ ಸತಾಯಿಸುತ್ತಿದ್ದರು. ಅಲ್ಲದೇ ಕೆಲವರ ಕೈಗೊಂಬೆಯಾಗಿ ಅಧಿಕಾರಿಗಳು ವರ್ತನೆ ಮಾಡ್ತಿದ್ದರಂತೆ. ಕಟ್ಟಡ ಪರವಾನಿಗೆ, ಮುಕ್ತಾಯ ಪ್ರಮಾಣ ಪತ್ರದಲ್ಲಿ ಅವ್ಯವಹಾರ ಮಾಡಿದ್ದಾರೆಂದು ಹಲವರು ಪಾಲಿಕೆ ಆಯುಕ್ತರಿಗೆ ದೂರು ಕೊಟ್ಟಿದ್ದರು. ಸ್ವತಃ ಪಾಲಿಕೆ ವಿಪಕ್ಷ ನಾಯಕಿ ನಗರ ಯೋಜನಾ ಘಟಕದ ಅಧಿಕಾರಿಗಳ ವಿರುದ್ದ ಗಂಭೀರ ಆರೋಪ‌ ಮಾಡಿದ್ದರು. ಇದೀಗ ಯೋಜನಾ ಘಟಕದ ನಾಲ್ವರನ್ನು ಎತ್ತಂಗಡಿ‌ ಮಾಡಲಾಗಿದೆ.

ಹು-ಧಾ ಮಾಹನಗರ ಪಾಲಿಕೆಯಲ್ಲಿರೋ ನಗರ ಯೋಜನಾ ಘಟಕದಲ್ಲಿ ಈ ಅಧಿಕಾರಿಗಳು‌ಕಳೆದ ಕೆಲ ವರ್ಷಗಳಿಂದ‌ ಇಲ್ಲೆ ಬೀಡು ಬಿಟ್ಟಿದ್ದರು. ರಾಜಕಾರಣಿಗಳಿಗೆ ಒತ್ತಡ ಹಾಕಿ ಒಂದೆ ಇಲಾಖೆಯಲ್ಲಿ ಕೆಲಸ‌ ಮಾಡುತ್ತಿದ್ದರು. ಇಂತಹವರ ವಿರುದ್ದ ಕೆಲವರು ಲೋಕಾಯುಕ್ತಕ್ಕೆ ದೂರು‌ ಸಲ್ಲಿಕೆ ಮಾಡಿದ್ದರು. ಕೆಲವರು ಮೌಖಿಕವಾಗಿ ಈಶ್ವರ ಉಳ್ಳಾಗಡ್ಡಿ ಅವರ ಗಮನಕ್ಕೂ ಕೂಡಾ ತಂದಿದ್ದರು.

ಕೆಲ ದಿನ ಆಯುಕ್ತರು ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ತಿದ್ದಿ ಕೊಳ್ಳುವಂತೆ ವಾರ್ನ್ ಮಾಡಿದ್ದರು. ಆದರೆ ಅಧಿಕಾರಿಗಳು ತಮ್ಮ ಹಳೇ ಚಾಳಿ ಬಿಡದೆ ಮತ್ತೆ ಅದೇ ಚಾಳಿ‌‌ ಮುಂದುವರೆಸಿದ್ದರು. ಹೀಗಾಗಿ ಪಾಲಿಕೆ ಆಯುಕ್ತರು ಇದೀಗ ಹುಬ್ಬಳ್ಳಿ ಪಾಲಿಕೆ ನಗರ ಯೋಜನಾ ಘಟಕದಿಂದ ನಾಲ್ವರಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ. ಅಧಿಕಾರಿಗಳ ಲಂಚದಿಂದ ಬೇಸತ್ತ ಜನರಿಗೆ ಇದು ಖುಷಿಯ ಸಂಗತಿಯಾಗಿದ್ದು, ಕೇವಲ ಒಂದು ಇಲಾಖೆ ಅಲ್ಲ, ಎಲ್ಲ ಇಲಾಖೆಯಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಕೆಲವರು ಪ್ರಮೋಷನ್ ಆದರೂ ಕೂಡಾ ಹೋಗಿಲ್ಲ ಅಂತವರ ಮೇಲೂ ಆಯುಕ್ತರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಕಳೆದ ಕೆಲ ವರ್ಷಗಳಿಂದ ಒಂದೇ ಇಲಾಖೆಯಲ್ಲಿ ಬೀಡು ಬಿಟ್ಟಿದ್ದ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಖಾಸು ಕೊಟ್ಟರೆ ಮಾತ್ರ ಕೆಲಸ ಅನ್ನೋ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ಬಿಸಿ ಮುಟ್ಟಿಸಿದ್ದು, ಇದು ಕೇವಲ ಒಂದು‌‌ ಇಲಾಖೆಗೆ ಸೀಮಿತವಾಗದೆ, ಬಹುತೇಕ ಪಾಲಿಕೆಯ ಎಲ್ಲ‌ ಇಲಾಖೆಯಲ್ಲಿ ಲಂಚ ಕೊಟ್ಟರೆ ಕೆಲಸ ಮಾಡುವ ಅಧಿಕಾರಿಗಳೇ ಹೆಚ್ಚು. ಅಂತಹವರ ವಿರುದ್ದವೂ ಆಯುಕ್ತರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಐಎಎಸ್‌ ಅಧಿಕಾರಿಯ ದೌಲತ್ತು! ಜನಸ್ಪಂದನದಲ್ಲಿ ಮೊಬೈಲ್‌ ಆಟ; ಕೇಳೋರಿಲ್ಲ ಜನರ ಸಂಕಟ

ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಸಚಿವರ ಹಸ್ತಕ್ಷೇಪ: ಸತೀಶ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ದೂರು

ನವಿಲು ಗರಿ ಬಳಸಬಹುದು ಎಂದ ಈಶ್ವರ ಖಂಡ್ರೆ; ದರ್ಗಾ, ಮಸೀದಿಗಳಿಗಿಲ್ಲ ಕಾನೂನು ತೊಡಕು

- Advertisement -

Latest Posts

Don't Miss