Saturday, July 27, 2024

Latest Posts

Fund discrimination: ಅನುದಾನ ಹಂಚಿಕೆಯಲ್ಲಿ ತಾರತಮ್ಯ.! ಕೋರ್ಟ್ ಮೆಟ್ಟಿಲೇರಲು ಸಿದ್ಧ..!

- Advertisement -

ಹುಬ್ಬಳ್ಳಿ: ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕಾರಣ ಮಾಡುವುದು ಸಹಜ. ಆದರೆ ಚುನಾಯಿತರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದ ವಿರುದ್ಧ ಚುನಾಯಿತ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ‌ ದೂರು ಸಲ್ಲಿಸಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಆರೋಪವೊಂದು ಗಂಭೀರವಾಗಿ ಕೇಳಿಬಂದಿದೆ. ಹೌದು.. ಬಿಜೆಪಿ ತೆಕ್ಕೆಯಲ್ಲಿರೋ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅನುದಾನ ತಾರತಮ್ಯ ಕೇಳಿ ಬಂದಿದ್ದು, 15 ನೇ ಹಣಕಾಸಿನಲ್ಲಿ ಬಿಡುಗಡೆಯಾದ ಬರೋಬ್ಬರಿ 40 ಕೋಟಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆಯಂತೆ. ಬಿಜೆಪಿ ಪಾಲಿಕೆ ಸದಸ್ಯರಿಗೆ ಹೆಚ್ಚು ಅನುದಾನ ನೀಡಿರೋ ಆಡಳಿತ ಪಕ್ಷ. ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ಅನುದಾನ ತಾರತಮ್ಯ ಮಾಡಿರುವ ಬಗ್ಗೆ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಇನ್ನೂ ಪಾಲಿಕೆ ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ ವಿರೋಧ ಪಕ್ಷದ‌ ನಾಯಕರು,‌ ಅವಳಿ‌ನಗರದ ಅಭಿವೃದ್ದಿಗಾಗಿ 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರೋ 40 ಕೋಟಿ ಅನುದಾನದಲ್ಲಿ ಪಾಲಿಕೆ ಸದಸ್ಯರಿಗೆ ಅನ್ಯಾಯವಾಗಿದೆಯಂತೆ. ಬರೋಬ್ಬರಿ 40 ಕೋಟಿ ಅನುದಾನದಲ್ಲಿ ಬೆರಳೆಣಿಕೆ ಅಂಕಿಯ ಅನುದಾನ ಹಂಚಿಕೆ ಮಾಡಿದ್ದು,‌ಸರಿಸಮವಾಗಿ ಅನುದಾನ‌ ಹಂಚಿಕೆ ಮಾಡದೇ ಅನ್ಯಾಯ ಮಾಡಿರೋದಾಗಿ ಆರೋಪಿಸಿರುವ ಸದಸ್ಯರು ಧಾರವಾಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಮೇಯರ್ ಮಾತ್ರ ಅನುದಾನ ಹಂಚಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಿನಲ್ಲಿ ಪಾಲಿಕೆ ಅಂಗಳದಲ್ಲಿ ಅನುದಾನ ಹಂಚಿಕೆಯ ತಾರತಮ್ಯ ಆರೋಪ ಸಾಕಷ್ಟು ಸದ್ದು ಮಾಡಿದ್ದು, ಸರಿಯಾಗಿ ಅನುದಾನ ಹಂಚಿಕೆ ಮಾಡದೆ ಹೋದರೆ ನ್ಯಾಯಾಲಯದ ಮೊರೆ ಹೋಗಲು ಪಾಲಿಕೆ ಕಾಂಗ್ರೆಸ್ ಸದಸ್ಯರು ನಿರ್ಧಾರ ಮಾಡಿದ್ದಾರೆ.

Anganavadi Warden: ಗ್ರಾಮಸ್ಥರ ವಿರುದ್ದ ಅಂಗನವಾಡಿ ಕಾರ್ಯಕರ್ತೆಯ ದರ್ಪ

For Money: ಕತ್ತರಿಯಿಂದ ಬೆನ್ನಿಗೆ ಇರಿದು ಪರಾರಿ

Viral video: ಯುವಕನ ಬೆತ್ತಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ಬಾಯಿ ಮುಚ್ಚಿಸಿದ್ರಾ ಪ್ರಭಾವಿಗಳು…?

- Advertisement -

Latest Posts

Don't Miss