Wednesday, June 12, 2024

Latest Posts

College: ಕಾಲೇಜುಗಳಲ್ಲಿ ಡ್ರಗ್ಸ್ ವ್ಯವಹಾರ, ಬಸವನಗುಡಿ ಪೋಲಿಸರ ವಶಕ್ಕೆ

- Advertisement -

ಮೈಸೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಾಲೆಗೆ ಹೋಗಿ ಅಕ್ಷರಾಭ್ಯಾಸ ಮಾಡುವುದಕ್ಕಿಂತ  ಅವ್ಯವಹಾರ ಮತ್ತು ಕೆಟ್ಟ ಚಟಗಳಿಗೆ ದಾಸರಾಗುವುದನ್ನು ಕಲಿಯುತ್ತಿದ್ದಾರೆ. ಈ ರೀತಿ ಚಟಗಳು ಅವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿರುವುದು  ನಗರಗಳಲ್ಲಿರುವ ಖಾಸಗಿ ಕಾಲೇಜುಗಳಲ್ಲಿ. ಆದರೆ ಇವೆಲ್ಲವನ್ನು ಮಟ್ಟ ಹಾಕಲೆಂದೇ ಪೋಲಿಸರು ಹಲವಾರು ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಇದೇ ರೀತಿ  ಶೋಧ ನಡೆಸುವ ವೇಳೆ ಮೈಸೂರು ರಸ್ತೆಯ ಕಾಲೇಜ್ ಒಂದರಲ್ಲಿ ಬೆಂಗಳೂರು ದಕ್ಷಿಣ ವಿಭಾಗದ  ಪೋಲಿಸರಿಗೆ   ಡ್ರಗ್ಸ್ ಪೆಡ್ಲಿಂಗ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. 

ಮೈಸೂರು ರಸ್ತೆಯ ಕೆಲ ಕಾಲೇಜುಗಳಲ್ಲಿ ಡ್ರಗ್​ ಮಾರಾಟ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಹಿನ್ನಲೆ ದಾಳಿ ಮಾಡಿದ್ದರು. ಈ ವೇಳೆ ಕಾಲೇಜು ವಿದ್ಯರ‍್ಥಿಯಿಂದಲೇ ಇತರ ವಿದ್ಯರ‍್ಥಿಗಳಿಗೆ ಡ್ರಗ್ ಮಾರಾಟವಾಗುತ್ತಿರುವುದು ತಿಳಿದು ಬಂದಿದೆ. ಅದರಂತೆ ಕೇರಳ ಮೂಲದ ಪೆಡ್ಲರ್ ಆಗಿರುವ ಖಾಸಗಿ ಕಾಲೇಜಿನ ವಿದ್ಯರ‍್ಥಿ ಬಿಸ್ಟೀನ್ ರಾಯ್ ಎಂಬಾತ ಬಸವನಗುಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಇನ್ನು ಆರೋಪಿ ಬಂಧನದ ವೇಳೆ ೨೦ ಲಕ್ಷ ರೂ ಮೌಲ್ಯದ ಡ್ರಗ್ ಪತ್ತೆಯಾಗಿದೆ.

ಇನ್ನು ತಮ್ಮದೇ ಟೀಮ್ ಹೊಂದಿದ್ದ ಬಂಧಿತ ಆರೋಪಿಯ ಗುಂಪು. ಪ್ರತಿಷ್ಠಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಹೊರಗಿನಿಂದ ಡ್ರಗ್ ತರಿಸಿಕೊಂಡು, ತಮ್ಮ ಕಾಲೇಜಿನ ವಿದ್ಯರ‍್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಸದ್ಯ ರ‍್ವನನ್ನ ಬಂಧಿಸಿದ ಬಸವನಗುಡಿ ಪೊಲೀಸರು. ಆತನ ಬಂಧನದ ಬಳಿಕ ಉಳಿದ ಏಳು ಮಂದಿ ನಾಪತ್ತೆಯಾಗಿದ್ದು, ಇದೀಗ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇನ್ನು ಇದೇ ರೀತಿ ಮುಂದುವರಿದರೆ ಮಕ್ಕಳನ್ನು ಶಾಲೆಗೆ ಕಳಿಸುವುದಾ ಅಥವಾ ಬೇಡ ತಿಳಿಯದಂತಾಗಿದೆ.

Krishna River : ಕೃಷ್ಣೆಯ ಒಡಲು ಸೇರುತ್ತಿದೆ ಧಾರಾಕಾರ ನೀರು…!

Siddaramaiah : ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂಧಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ

ಡಿಕೆಶಿ ಭೇಟಿಯಾದ ನಟ ವಿಜಯರಾಘವೇಂದ್ರ ದಂಪತಿ

- Advertisement -

Latest Posts

Don't Miss