Saturday, May 25, 2024

Latest Posts

Narendra Modi : ಮೋದಿ ಮಹಾ ಮೋಸ.! : ದಕ್ಷಿಣ ಭಾರತದ ಕಥೆ ಮುಗೀತಾ.?

- Advertisement -

Special News : ಭಾರತ.. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ವಿವಿಧತೆಯಲ್ಲಿ ಏಕತೆಯನ್ನ ಸಾಧಿಸಿರೋ ರಾಷ್ಟ್ರ ನಮ್ಮ ಹೆಮ್ಮೆಯ ಭಾರತ. ಒಕ್ಕೂಟ ವ್ಯವಸ್ಥೆಯಲ್ಲಿ ನಿರ್ಮಾಣ ಆಗಿರೋ ಭಾರತದ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ವಿಶೇಷತೆ ಇದೆ..

ತಾಲೂಕಿಂದ ತಾಲೂಕಿಗೆ, ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯದಲ್ಲಿ ಹಲವು ವಿಶೇಷತೆಗಳನ್ನ ಹೊಂದಿರೋ ದೇಶ ನಮ್ಮ ಭಾರತ.. ನಾವೆಲ್ಲಾ ಒಂದೇ.. ನಾವೆಲ್ಲಾ ಭಾರತಾಂಬೆಯ ಮಕ್ಕಳು ಅನ್ನೋ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲೂ ಇದೆ.. ಆದ್ರೂ, ಕೆಲವೊಮ್ಮೆ ಕಿಡಿಗೇಡಿಗಳು ಆಗಾಗ ಭಾರತೀಯರನ್ನ ಬೇರೆ ಬೇರೆ ಮಾಡೋ ರೀತಿಯಲ್ಲಿ, ಭಾರತವನ್ನೇ ವಿಭಜಿಸೋ ರೀತಿಯಲ್ಲಿ ಮಾತ್ನಾಡಿದ್ದು, ಕಿಡಿಗೇಡಿತನ ಮಾಡಿದ್ದೂ ಇದೆ.. ಉತ್ತರ ಭಾರತ, ದಕ್ಷಿಣ ಭಾರತ, ಈಶಾನ್ಯ ಭಾರತ ಹೀಗೆ ಬೇರೆ ಬೇರೆ ಪ್ರಾಂತ್ಯಗಳಿಂದ ಕರೆದ್ರೂ ನಾವೆಲ್ಲಾ ಭಾರತೀಯರೇ..

ಆದ್ರೆ, ಇದೀಗ ಮತ್ತೊಂದು ರೀತಿಯ ಹೊಸ ಚಾಲೆಂಜ್ ಭಾರತಕ್ಕೆ ಎದುರಾಗಿದೆ. ಈ ಚಾಲೆಂಜ್ ಹೊರ ದೇಶಗಳಿಂದ ಬಂದಿರೋದು ಅಲ್ಲ. ಬದಲಿಗೆ ಆಂತರಿಕೆ ಸವಾಲು.. ಅದೇನಪ್ಪ ಅಂದ್ರೆ, ಮತ್ತೊಮ್ಮೆ ಭಾರತದಲ್ಲಿ ಪ್ರಾದೇಶಿಕ ಯುದ್ಧ ನಡೆಯೋ ಸಾಧ್ಯತೆ ಕೇಳಿ ಬರ್ತಿದೆ. ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ. ಯೆಸ್, ಇದಕ್ಕೆ ಕಾರಣ ಆಗ್ತಿರೋದು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ..

ಯೆಸ್, ಉತ್ತರದ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯು ದಕ್ಷಿಣ ಭಾರತಕ್ಕಿಂತ ವೇಗವಾಗಿದೆ. ತುಲನಾತ್ಮಕವಾಗಿ ಕಡಿಮೆ ಜನಸಂಖ್ಯೆಯ ಬೆಳವಣಿಗೆಯ ಪರಿಣಾಮವಾಗಿ, ಡಿಲಿಮಿಟೇಶನ್ ನಂತರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಕೆಲವು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಅಂತ ಹೇಳಲಾಗ್ತಿದೆ.

2024 ರ ಲೋಕಸಭಾ ಚುನಾವಣೆಯ ನಂತರದಲ್ಲೇ ಜನಗಣತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆಯ ಕೆಲಸ ಆರಂಭವಾಗಲಿದೆ ಅಂತ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಸಾರಥ್ಯದಲ್ಲಿ ಡಿಲಿಮಿಟೇಶನ್‌ ಆಯೋಗವು ಈ ಕಾರ್ಯ ಕೈಗೆತ್ತಿಕೊಳ್ಳಲಿದೆ. ಲೋಕಸಭೆ ಚುನಾವಣೆಯ ನಂತರ ತಕ್ಷಣವೇ ಜನಗಣತಿ ಮತ್ತು ಡಿಲಿಮಿಟೇಶನ್‌ ನಡೆಯಲಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಜನಗಣತಿ ಬಳಿಕ 2026 ರಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಮುಗಿಯಬಹುದು. ಇದರಿಂದಾಗಿ ಉತ್ತರ ಪ್ರದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದ್ದು, ಕಾರ್ನೆಗೀ ವರದಿಯ ಪ್ರಕಾರ, ತಮಿಳುನಾಡು ಪ್ರಸ್ತುತ ಜನಸಂಖ್ಯೆಯ ಬೆಳವಣಿಗೆಯ ಪಥವನ್ನು ಅನುಸರಿಸಿದರೆ 31 ಲೋಕಸಭಾ ಸ್ಥಾನಗಳಿಗೆ ಎಂಟು ಸ್ಥಾನಗಳ ಇಳಿಕೆಯಾಗಬಹುದು ಎನ್ನಲಾಗಿದೆ.

ಡಿಲಿಮಿಟೇಶನ್ ಅನ್ನೋದು ಜನಸಂಖ್ಯೆಯ ಆಧಾರದ ಮೇಲೆ ಸಂಸತ್ತಿನ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಪುನರ್ ರೂಪಿಸುವ ಪ್ರಕ್ರಿಯೆ. ಸಂಸತ್ತು ಮತ್ತು ರಾಜ್ಯ ಅಸೆಂಬ್ಲಿಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಪ್ರತಿ ಕ್ಷೇತ್ರವು ಸರಿ ಸುಮಾರು ಒಂದೇ ಸಂಖ್ಯೆಯ ಮತದಾರರನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳುವುದು ಇದರ ಪ್ರಾಥಮಿಕ ಉದ್ದೇಶ. ಉತ್ತರದ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯು ದಕ್ಷಿಣ ಭಾರತಕ್ಕಿಂತ ವೇಗವಾಗಿದೆ. ತುಲನಾತ್ಮಕವಾಗಿ ಕಡಿಮೆ ಜನಸಂಖ್ಯೆಯ ಬೆಳವಣಿಗೆಯ ಪರಿಣಾಮವಾಗಿ, ಡಿಲಿಮಿಟೇಶನ್ ನಂತರ, ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಕೆಲವು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ.

ಉತ್ತರ ಪ್ರದೇಶವು ಪ್ರಸ್ತುತ 80 ಸ್ಥಾನಗಳನ್ನು ಹೊಂದಿದೆ. 543 ಕ್ಷೇತ್ರಗಳೇ ಉಳಿದ್ರೆ, ಉತ್ತರ ಪ್ರದೇಶದ ಸಂಸದೀಯ ಸ್ಥಾನಗಳು ಡಿಲಿಮಿಟೇಶನ್ ನಂತರ 11 ಸ್ಥಾನ ಹೆಚ್ಚಾಗಿ, 80ರಿಂದ 91 ಕ್ಕೆ ಏರುವ ನಿರೀಕ್ಷೆಯಿದೆ. ಇನ್ನೂ ತಮಿಳುನಾಡಿನ ಸಂಖ್ಯೆಯು ಪ್ರಸ್ತುತ 39 ರಿಂದ 31 ಕ್ಕೆ ಇಳಿಯಬಹುದು ಎಂದು ಹೇಳಲಾಗಿದೆ. ಅಲ್ಲದೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಒಟ್ಟು 42 ಸ್ಥಾನಗಳನ್ನು ಹೊಂದಿದ್ದು, ಅದು 34 ಕ್ಕೆ ಇಳಿಯಬಹುದು ಮತ್ತು ಕೇರಳದ ಬಲವೂ 20 ರಿಂದ 12 ಕ್ಕೆ ಇಳಿಯುವ ಮೂಲಕ ಎಂಟು ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಈಗಿನ 28ರಿಂದ 26ಕ್ಕೆ ಅಂದ್ರೆ ಎರಡು ಸ್ಥಾನಗಳನ್ನು ಕಳೆದುಕೊಳ್ಳಲಿದೆ.. ಇದೆಲ್ಲವೂ ಈಗಿರೋ 543 ಕ್ಷೇತ್ರಗಳನ್ನೇ ಉಳಿಸಿಕೊಂಡ್ರೆ ಮಾತ್ರ. ಒಂದ್ವೇಳೆ 543 ಕ್ಷೇತ್ರಗಳ ಬದಲು 748 ಅಥವಾ 780 ಅಥವಾ 888 ಕ್ಷೇತ್ರಗಳಾದ್ರೆ, ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಬಹುದು. ಆದ್ರೆ, ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಬದಲಾವಣೆ ಆಗಲ್ಲ.

ವರದಿಯ ಪ್ರಕಾರ, ಉತ್ತರ ಪ್ರದೇಶವು ಎಲ್ಲಕ್ಕಿಂತ ಕಡಿಮೆ ಪ್ರಾತಿನಿಧ್ಯ ಹೊಂದಿರುವ ರಾಜ್ಯವಾಗಿದ್ದು, ಪ್ರತಿ ಸಂಸದರಿಗೆ ಜನಸಂಖ್ಯೆಯ ದೃಷ್ಟಿಯಿಂದ ತಮಿಳುನಾಡು ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದೆ. ಉತ್ತರ ಪ್ರದೇಶದ ಸಂಸದರು ಸರಾಸರಿ 3 ಮಿಲಿಯನ್ ಅಂದ್ರೆ 30 ಲಕ್ಷ ನಿವಾಸಿಗಳನ್ನು ಪ್ರತಿನಿಧಿಸಿದ್ರೆ, ತಮಿಳುನಾಡಿನಲ್ಲಿ 1.8 ಮಿಲಿಯನ್‌ ಅಂದ್ರೆ 18 ಲಕ್ಷಕ್ಕೆ ಹೋಲಿಸಿದರೆ, ಪ್ರತಿ ಕ್ಷೇತ್ರಕ್ಕೆ ನೋಂದಾಯಿತ ಮತದಾರರ ಸಂಖ್ಯೆ ಒಂದೇ ಆಗಿರುತ್ತದೆ ಎಂದು ವರದಿ ಹೇಳಿದೆ. ಆದ್ರೆ, ವಿಚಿತ್ರ ಏನಪ್ಪ ಅಂದ್ರೆ 2014 ರಲ್ಲಿ ಉತ್ತರ ಪ್ರದೇಶಕ್ಕಿಂತ ತಮಿಳುನಾಡಿನಲ್ಲಿ ಪ್ರತಿ ಕ್ಷೇತ್ರಕ್ಕೆ ಸ್ವಲ್ಪ ಹೆಚ್ಚು ಮತದಾರರು ಮತದಾನ ಮಾಡಿದ್ದಾರೆ ಎಂದು ವರದಿ ಹೇಳಿದೆ.

1976 ರಲ್ಲಿ, ಸರ್ಕಾರವು 2000 ದವರೆಗೆ ಡಿಲಿಮಿಟೇಶನ್ ತಡೆಹಿಡಿಯಿತು. ಆದರೆ, 2001 ರಲ್ಲಿ, 2026 ರವರೆಗೆ ತಡೆಹಿಡಿಯಲಾಯಿತು. ಈಗ, 2026 ರ ನಂತರ ಮೊದಲ ದಶವಾರ್ಷಿಕ ಜನಗಣತಿಯ ನಂತರ ಡಿಲಿಮಿಟೇಶನ್ ನಡೆಯುತ್ತದೆ. ಡಿಲಿಮಿಟೇಶನ್‌ನಲ್ಲಿನ ಸ್ಥಗಿತವು ಸಂಸತ್ತಿನಲ್ಲಿ ಪ್ರಾತಿನಿಧ್ಯವನ್ನು ಸೃಷ್ಟಿಸಿದೆ. 2001 ರ ಜನಗಣತಿಯ ಆಧಾರದ ಮೇಲೆ ತಮಿಳುನಾಡು 7 ಕಡಿಮೆ ಲೋಕಸಭಾ ಸ್ಥಾನಗಳನ್ನು ಹೊಂದಬೇಕಿತ್ತು ಮತ್ತು ಉತ್ತರ ಪ್ರದೇಶವು 7 ಹೆಚ್ಚು ಗಳಿಸಬೇಕಿತ್ತು ಎಂದು ರಾಜಕೀಯ ತಜ್ಞರ ಲೆಕ್ಕಾಚಾರ.

ಕಾರ್ನೆಗೀ ವರದಿಯ ಪ್ರಕಾರ, ಡಿಲಿಮಿಟೇಶನ್ ನಂತರ, ಉತ್ತರದ ನಾಲ್ಕು ರಾಜ್ಯಗಳು (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ) ಒಟ್ಟಾರೆಯಾಗಿ 22 ಸ್ಥಾನಗಳನ್ನು ಗಳಿಸಿದರೆ, ದಕ್ಷಿಣ ಐದು ರಾಜ್ಯಗಳು, ( ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತೆಲಂಗಾಣ ಮತ್ತು ತಮಿಳುನಾಡು) 19 ಸ್ಥಾನಗಳನ್ನು ಕಳೆದುಕೊಳ್ಳುತ್ತವೆ.

ಈಗಿನ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಈಗ ಇರುವ ಜನಸಂಖ್ಯೆ ಆಧಾರದಲ್ಲಿ ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ 753 ಸ್ಥಾನಗಳು ಅತ್ಯಗತ್ಯ. ಅಂದರೆ ಭಾರತದಲ್ಲಿ ಈಗ ಇರುವ 543 ಲೋಕಸಭಾ ಕ್ಷೇತ್ರಗಳನ್ನು 753ಕ್ಕೆ ಏರಿಸಬೇಕಿದೆ. ಹಾಗಾದರೆ 753ಕ್ಕೆ ಲೋಕಸಭಾ ಕ್ಷೇತ್ರಗಳು ಏರಿಕೆ ಕಂಡರೆ ಕರ್ನಾಟಕಕ್ಕೆ ಎಷ್ಟು ಸ್ಥಾನಗಳು ಸಿಗಲಿದೆ? ತಮಿಳುನಾಡಿಗೆ ಎಷ್ಟು? ಕೇರಳಕ್ಕೆ ಎಷ್ಟು ಲೋಕಸಭಾ ಸ್ಥಾನ ಸಿಗಬಹುದು? ಈ ಸ್ಥಾನ ಹಂಚಿಕೆ ನಂತರ ಆಂಧ್ರಪ್ರದೇಶ ಮತ್ತು ತೆಲಂಗಾಣ ಸ್ಥಿತಿ ಏನಾಗಬಹುದು? ಅನ್ನೋ ಕುತೂಹಲವೂ ಇದೆ..

ಭಾರತ ಸ್ವಾತಂತ್ರ್ಯ ಪಡೆದ ತಕ್ಷಣ ಭಾರತದ ಒಕ್ಕೂಟಕ್ಕೆ ಸೇರಲು ಮುಂದಾದ ಮೊದಲನೇ ಸಂಸ್ಥಾನ ಮೈಸೂರು ಅಂದರೆ ಈಗಿನ ಕರ್ನಾಟಕ. ಆದರೆ ಕನ್ನಡಿಗರಿಗೆ ಪ್ರತಿಬಾರಿ ಕೇಂದ್ರ ಅನ್ಯಾಯ ಮಾಡುತ್ತಿದೆ ಎಂಬ ಆರೋಪವೂ ಇದೆ. ಏಕೆಂದರೆ ಕನ್ನಡಿಗರ ಬಳಿ ಇರುವುದು ಕೇವಲ 28 ಲೋಕಸಭಾ ಕ್ಷೇತ್ರಗಳು. ಆದ್ರೆ ಇದೀಗ ಕೇಂದ್ರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ, 2026ರಲ್ಲಿ 28ರಿಂದ 36ಕ್ಕೆ ಏರಿಕೆಯಾಗಲಿದೆ. ಅರೆ ಇದು ಕನ್ನಡ ನಾಡಿಗೆ ಲಾಭ ಅಲ್ವಾ? ಅನ್ನಬೇಡಿ, ಇದು ಕನ್ನಡಿಗರಿಗೆ ಆಗೋ ಅತೀ ದೊಡ್ಡ ಅನ್ಯಾಯ. ಅಂದಹಾಗೆ ಭಾರತದಲ್ಲಿ ಈಗ ಇರುವ 543 ಲೋಕಸಭಾ ಕ್ಷೇತ್ರಗಳನ್ನು 753ಕ್ಕೆ ಏರಿಸಿದರೆ ಇದು ಕರ್ನಾಟಕಕ್ಕೆ ದೊಡ್ಡ ಅನ್ಯಾಯ. ಏಕೆಂದರೆ ಕನ್ನಡಿಗರು ಜನಸಂಖ್ಯೆ ವಿಚಾರದಲ್ಲಿ ಶಿಸ್ತು ಪಾಲಿಸಿಕೊಂಡು ಬಂದಿದ್ದಾರೆ. ಹೀಗಿದ್ದಾಗ ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ಏರಿಕೆ ವಿಚಾರದಲ್ಲಿ ಮುಂದೆ ಇವೆ. 2026ರ ಡಿಲಿಮಿಟೇಶನ್ ಬಳಿಕ ಕರ್ನಾಟಕ ರಾಜ್ಯದ ಲೋಕಸಭೆ ಬಲ 28 ಸ್ಥಾನಗಳಿಂದ 36ಕ್ಕೆ ಏರಿಕೆ ಕಂಡರೆ, ಅದೇ ಉತ್ತರ ಪ್ರದೇಶದಲ್ಲಿ 80 ಸ್ಥಾನದಿಂದ ಬರೋಬ್ಬರಿ 128 ಸ್ಥಾನಕ್ಕೆ ಏರಿಕೆ ಕಾಣಲಿದೆ.

ಕರ್ನಾಟಕದ ರೀತಿಯಲ್ಲೇ ದಕ್ಷಿಣ ಭಾರತದ ತೆಲಂಗಾಣಕ್ಕೂ ಪುಡಿಗಾಸು ಸಿಗಲಿದೆ. ಹೀಗಾಗಿ ತೆಲಂಗಾಣದಲ್ಲಿ ಈಗ ಇರುವ ಲೋಕಸಭೆ ಕ್ಷೇತ್ರಗಳ ಪೈಕಿ 17ರಿಂದ 20ಕ್ಕೆ ಏರಿಕೆಯಾಗುತ್ತೆ. ಹಾಗೇ ಆಂಧ್ರ ಪ್ರದೇಶದ 25 ಸ್ಥಾನಗಳು 28ಕ್ಕೆ ಏರಿಕೆ ಕಾಣಲಿವೆ. ಇನ್ನು ತಮಿಳುನಾಡಿನ ಈಗಿನ 39 ಲೋಕಸಭೆ ಸ್ಥಾನಗಳು ಕೇವಲ 41ಕ್ಕೆ ಏರಿಕೆ ಕಾಣಬಹುದು. ಅದ್ರಲ್ಲೂ ನೆರೆಯ ರಾಜ್ಯ ಕೇರಳ ಪರಿಸ್ಥಿತಿ ಇನ್ನೂ ಭೀಕರವಾಗಲಿದ್ದು, ಇಡೀ ದೇಶದಲ್ಲಿ ಜನಸಂಖ್ಯೆ ಕಡಿಮೆ ಮಾಡಿದ ಕೀರ್ತಿ ಪಡೆದಿರುವ ಕೇರಳ ರಾಜ್ಯದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ 20ರಿಂದ 19ಕ್ಕೆ ಕುಸಿದು ಬೀಳಲಿದೆ.

ಹಾಗೇ ಇದೀಗ ಕೇವಲ 29 ಸ್ಥಾನ ಹೊಂದಿರುವ ಮಧ್ಯಪ್ರದೇಶಕ್ಕೆ ಜಾಕ್‌ಪಾಟ್ ಸಿಗಲಿದ್ದು, 47 ಸ್ಥಾನಕ್ಕೆ ಮಧ್ಯಪ್ರದೇಶದ ಲೋಕಸಭಾ ಬಲ ಏರಿಕೆ ಕಾಣಲಿದೆ. ಇನ್ನು ಮಹಾರಾಷ್ಟ್ರದ ಲೋಕಸಭಾ ಸ್ಥಾನಗಳು 48ರಿಂದ 68ಕ್ಕೆ ಏರಿಕೆ ಕಾಣಬಹುದು. ರಾಜಸ್ಥಾನದಲ್ಲಿ ಒಟ್ಟಾರೆ 25 ಲೋಕಸಭಾ ಸ್ಥಾನಗಳು ಈಗ ಇದ್ದು ಈ ಸಂಖ್ಯೆ 44ಕ್ಕೆ ಏರಿಕೆ ಕಾಣುವ ಸಾಧ್ಯತೆ ಇದೆ. ಹಾಗಾದರೆ ಇದು ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಕಂಟಕ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೇಂದ್ರ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ? ಅಂತಾ ಕಾದು ನೋಡಬೇಕು.

Chandrababu Naidu : ಚಂದ್ರಬಾಬು ನಾಯ್ಡುಗೆ ಮತ್ತೆ 2 ದಿನ ನ್ಯಾಯಾಂಗ ಬಂಧನ

Ajith Pawar : ಎನ್ ಸಿ ಪಿ ಶಾಸಕ ಅನರ್ಹಕ್ಕೆ ಅಜಿತ್ ಪವಾರ್ ಅರ್ಜಿ

Supreme Coart : ಉದಯನಿಧೀಗೆ ನೋಟೀಸ್ ನೀಡಿದ ಸುಪ್ರೀಂಕೋರ್ಟ್​

 

- Advertisement -

Latest Posts

Don't Miss