Saturday, July 27, 2024

Latest Posts

Prabhakar Kulal : ಯುವ ಜನತೆ ನಮ್ಮ ನೆಲದ ಸಂಸ್ಕೃತಿ ಅರಿತುಕೊಳ್ಳುವಂತಾಗಬೇಕು : ಪ್ರಭಾಕರ ಕುಲಾಲ್

- Advertisement -

Karkala News : ಆಟಿ ಆಚರಣೆಯಿಂದ ಇಂದಿನ ಯುವ ಜನತೆಗೆ ನಮ್ಮ ನೆಲದ ಮಣ್ಣಿನ ಸಂಸ್ಕೃತಿಯನ್ನು ಅರಿತುಕೊಳ್ಳುವಂತಾಗಬೇಕು. ಪ್ರಕೃತಿದತ್ತ ಆಹಾರವನ್ನು ಸೇವಿಸುತ್ತ ನಮ್ಮ ಹಿರಿಯರು ಆರೋಗ್ಯವಂತ ಬದುಕು ಕಟ್ಟಿಕೊಂಡಿದ್ದರು ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹೇಳಿದರು.

ಅವರು ಭಾನುವಾರ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ಸಂಘದ ಸಭಾ ಭವನದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಜಯ ಮೂಲ್ಯ ದಂಪತಿಯನ್ನು ಗೌರವಿಸಿದರು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯ ಗರಿಷ್ಠ ಅಂಕ ಗಳಿಸಿದ ಸಾಧಕರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಕುಶ ಆರ್.ಮೂಲ್ಯ ಅಧ್ಯಕ್ಷತೆ ವಹಿಸಿದ್ದರು, ಮಂಗಳೂರಿನ ಉದ್ಯಮಿ ಅಶೋಕ್ ಕುಲಾಲ್, ತೋಕೂರು ಕುಲಾಲ ಸಂಘದ ಅಧ್ಯಕ್ಷ ಶ್ರೀಧರ ಬಂಗೇರಾ, ಬೋಳ ಕುಲಾಲ ಸಂಘದ ಅಧ್ಯಕ್ಷ ಗಣೇಶ್ ಕುಲಾಲ್, ಸಂಘದ ಮಾಜಿ ಅಧ್ಯಕ್ಷ ಮಂಜಪ್ಪ ಮೂಲ್ಯ, ಕಾರ್ಯದರ್ಶಿ ಆಶಾ ವರದರಾಜ್, ಕೋಶಾಧಿಕಾರಿ ಸುಧಾಕರ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ ಶ್ರೀಧರ ಕುಲಾಲ್, ಯುವ ವೇದಿಕೆಯ ಅಧ್ಯಕ್ಷ ದೀಪಕ್ ಬೆಳ್ಮಣ್, ಬೊಗ್ಗು ಮೂಲ್ಯ ಬೇಲಾಡಿ, ಜಗನ್ನಾಥ ಮೂಲ್ಯ ಬೆಳ್ಮಣ್, ಸಾಂತೂರು ರಾಜೇಶ್ ಕುಲಾಲ್, ಅಗರಟ್ಟ ಸಂತೋಷ್ ಕುಲಾಲ್, ಪವಿತ್ರಾ ಅಶೋಕ್ ಕುಲಾಲ್, ಸಂಕಲಕರಿಯ ಸುಧಾಕರ ಸಾಲ್ಯಾನ್, ಚೈತ್ರೇಶ್, ಅರುಣಾ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Tomato : ಟೊಮೆಟೋ ದರ ಭಾರೀ ಕುಸಿತ…! ಆತಂಕದಲ್ಲಿ ರೈತರು…!

Layout visit: ಶಿವರಾಂ ಕಾರಂತ ಬಡಾವಣೆ ವೀಕ್ಷಣೆ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್

School : ಸುಳ್ಯ ತಾಲೂಕಿನಲ್ಲಿ ಸರ್ಕಾರಿ ಶಾಲೆಗೆ ಇದೆಂತಹ ಅವಸ್ಥೆ..?!

- Advertisement -

Latest Posts

Don't Miss