Saturday, July 27, 2024

Latest Posts

3.40 ಕೋಟಿ ರೂ.ಗೆ ಆರ್ ಸಿಬಿ ಪಾಲಾದ ಸ್ಮೃತಿ ಮಂಧಾನ!

- Advertisement -

sports news

ಬೆಂಗಳೂರು(ಫೆ.13):ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್​ಗಳಲ್ಲಿ ಸ್ಮೃತಿ ಮಂಧಾನ ಕೂಡ ಒಬ್ಬರು. ಈ ಆಟಗಾರ್ತಿ ಇದುವರೆಗು ಆಡಿರುವ 112 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 27.32 ಸರಾಸರಿಯಲ್ಲಿ 2651 ರನ್ ಗಳಿಸಿದ್ದಾರೆ. ಇದೀಗ ಈ ಆಟಗಾರ್ತಿ ಅವರು 3.40 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ.

ಸ್ಮೃತಿ ಅವರನ್ನು ಖರೀದಿಸಲು ಮುಂಬೈ ಮತ್ತು ಆರ್‌ಸಿಬಿ ನಡುವೆ ತೀವ್ರ ಫೈಪೋಟಿ ನಡೆಯಿತು. ಅಂತಿಮವಾಗಿ ಮಂಧಾನ ಅವರನ್ನು 3.40 ಕೋಟಿ ರೂ.ಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು. ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ಇಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್​ನಲ್ಲಿ ನಡೆಯಿತು.

ಸ್ಮೃತಿ ಅವರನ್ನು ಖರೀದಿಸಲು ಮುಂಬೈ ಮತ್ತು ಆರ್ ಸಿಬಿ ನಡುವೆ ತೀವ್ರ ಫೈಪೋಟಿ ನಡೆಯಿತು. ಅಂತಿಮವಾಗಿ ಮಂಧಾನ ಅವರನ್ನು 3.40 ಕೋಟಿ ರೂ.ಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು. 20 ಅರ್ಧಶತಕಗಳು ಸೇರಿದ್ದು, ಅಂತಾರಾಷ್ಟ್ರೀಯ ಟಿ20ಯಲ್ಲಿ ಮಂಧಾನ ಸ್ಟ್ರೈಕ್ ರೇಟ್ 123ಕ್ಕಿಂತ ಹೆಚ್ಚಿದೆ.

ಸ್ಮೃತಿ ಮಂಧಾನ ಕೂಡ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಲೀಗ್‌ನಲ್ಲಿ ಈ ಆಟಗಾರ್ತಿ 38 ಪಂದ್ಯಗಳಲ್ಲಿ 784 ರನ್ ಗಳಿಸಿದ್ದಾರೆ. ಮಂಧಾನ ಸ್ಟ್ರೈಕ್ ರೇಟ್ 130ಕ್ಕಿಂತ ಹೆಚ್ಚಿದೆ. ಇದಲ್ಲದೆ ದಿ ಹಂಡ್ರೆಡ್​ನಲ್ಲೂ ಮಂಧಾನ ಆಡಿದ್ದಾರೆ. ಅಲ್ಲಿಯೂ ಅವರ ಬ್ಯಾಟ್‌ನಿಂದ ರನ್‌ಗಳು ಹರಿದು ಬಂದಿವೆ. ದಿ ಹಂಡ್ರೆಡ್ 2022 ರಲ್ಲಿ ಸದರ್ನ್ ಬ್ರೇವ್ ಪರ ಆಡಿದ ಮಂಧಾನ 8 ಪಂದ್ಯಗಳಲ್ಲಿ 211 ರನ್ ಗಳಿಸಿದ್ದರು. ಈ ಸಮಯದಲ್ಲಿ, ಅವರ ಸ್ಟ್ರೈಕ್ ರೇಟ್ 151 ಕ್ಕಿಂತ ಹೆಚ್ಚಿತ್ತು. WPL 2023 ಹರಾಜಿನಲ್ಲಿ ಸ್ಮೃತಿ ಮಂಧಾನಾ ಮೇಲೆ ಹಣದ ಸುರಿಮಳೆಯಾಗಲು ಅವರ ಆಟವೇ ಕಾರಣ.

- Advertisement -

Latest Posts

Don't Miss