Wednesday, June 19, 2024

Latest Posts

ಕೈತಪ್ಪಿಹೋದ ಆಫರ್ ಮತ್ತೆ ಕೈಸೇರಿದೆ..!

- Advertisement -

www.karnatakatv.net: ಸಮಂತಾ ಜೀವನವು ಸಾಕಷ್ಟು ಸುದ್ದಿಯಲ್ಲಿದ್ದರೂ ಕೂಡಾ ಅವರು ತಮ್ಮ ವೃತ್ತಿಯನ್ನು ಮಾತ್ರ ಬಿಟ್ಟಿಲ್ಲ ತಮ್ಮ ಸಿನಿಮಾಗಳ ಕೆಲಸವನ್ನು ತೊರೆದಿಲ್ಲ. ಇತ್ತಿಚ್ಚೆಗೆ ಅವರು ಚಿತ್ರರಂಗದಲ್ಲಿ ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇದರ ನಡುವೆ ಸಮಂತಾ ಅವರಿಗೆ ಸಿಕ್ಕಿದ್ದ ಆಫರ್ ಕೂಡಾ ತಪ್ಪಿ ಹೋಗಿತ್ತು, ಆದರೆ ಅದು ಈಗ ಮರಳಿ ಸಮಂತಾ ಕೈಸೇರಿದೆ ಎನ್ನಲಾಗಿದೆ.

ಹೌದು.. ಸಮಂತಾ ಮತ್ತು ನಾಗಚೈತನ್ಯ ಅವರ ದಾಂಪತ್ಯ ಜೀವನದಲ್ಲಿ ನಡೆದ ಬಿರುಕು ಎಲ್ಲರಿಗೂ ಗೋತ್ತಿರುವ ವಿಚಾರವಾಗೆದೆ. ಅದರಿಂದ ಸ್ವಲ್ಪ ದಿನಗಳ ವರೆಗೆ ಸಮಂತಾ ಎಲ್ಲದರಿಂದಲೂ ದೂರ ಉಳಿದಿದ್ರು ಆಗ ಕೈ ತಪ್ಪಿ ಹೋದ ಸಿನಿಮಾ ಆಫರ್ ಈಗ ಮತ್ತೆ ಅವರ ಕೈಸೇರಿದ್ದು ಕೇಳಿ ಅಭಿಮಾನಿಗಳು ಸಖತ್ ಖುಷಿ ಪಡುತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಬಾಲಿವುಡ್ ನಟ ಶಾರುಖ್ ಖಾನ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರಾ ನಾಯಕಿ. ಆದರೆ ಅವರಿಗಿಂತಲೂ ಮುಂಚೆ ಸಮಂತಾಗೆ ಆಫರ್ ನೀಡಲಾಗಿತ್ತು. ನಟನೆಗೆ ಕೊಂಚ ಬ್ರೇಕ್ ನೀಡಿ ನಾಗ ಚೈತನ್ಯ ಜೊತೆ ಮಗು ಪಡೆಯಬೇಕು ಎಂದು ಸಮಂತಾ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಅವರು ಶಾರುಖ್ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದರು. ಆದರೆ, ಆ ಸಂದರ್ಭದಲ್ಲೇ ಅವರ ಕುಟುಂಬದಲ್ಲಿ ಬಿರುಗಾಳಿ ಬೀಸಿತ್ತು. ಸಮಂತಾ ಮತ್ತು ನಾಗ ಚೈತನ್ಯ ಬೇರಾದರು. ಸಮಂತಾಗೆ ಈ ಆಫರ್ ತಪ್ಪೋಕೆ ನಾಗ ಚೈತನ್ಯ ಅವರೇ ನೇರ ಕಾರಣ ಎಂದು ಅನೇಕರು ದೂರಿದ್ದರು. ಅಚ್ಚರಿ ಎಂಬoತೆ ಈಗ ಈ ಆಫರ್ ಮರಳಿ ಸಮಂತಾ ಬಳಿ ಬಂದಿದೆ.

ಎಲ್ಲರಿಗೂ ಗೊತ್ತಿರುವಂತೆ ನಯನತಾರಾಗೆ ಶೀಘ್ರವೇ ಮದುವೆ ಆಗುತ್ತಿದ್ದು, ಬಹುಕಾಲದ ಗೆಳೆಯ, ನಿರ್ದೇಶಕ ವಿಘ್ನೇಶ್ ಶಿವನ್ ಜತೆ ಅವರು ಹಸೆಮಣೆ ಏರುತ್ತಿದ್ದಾರೆ. ಇದಕ್ಕೆ ಅವರು ಎಲ್ಲಾ ತಯಾರಿಯನ್ನು ನಡೆಸಿದ್ದಾರೆ. ಶೂಟಿಂಗ್ ಮುಗಿದ ನಂತರ ಸಮಂತಾ ಹಸೆಮಣೆ ಏರಬೇಕಿತ್ತು ಆದರೆ ಅದಕ್ಕೆ ಈಗ ಶೂಟಿಂಗ್ ಸ್ವಲ್ಪ ಹೋತ್ತು ಡಿಲೇ ಆಗಿದ್ದು ನಾಯಕ ಶಾರುಖ್ ಖಾನ್ ಮಗ ಆರ್ಯನ್ ಅವರನ್ನು ಜೈಲಿನಿಂದ ಕೊರ ತರುವ ಪ್ರಯತ್ನದಲ್ಲಿದ್ದಾರೆ ಆದಕಾರಣ ಶೂಟಿಂಗ್ ಕೊಂಚ ಡಿಲೇ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಈಗ ನಿರ್ದೇಶಕರು ಮತ್ತೆ ಸಮಂತಾ ಬಳಿಯೇ ತೆರಳಿದ್ದು ಇದಕ್ಕೆ ಮರುಮಾತಿಲ್ಲದೆ ಈ ಆಫರ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss