Saturday, July 27, 2024

Latest Posts

ಸಂಘ ಪ್ರಚಾರಕ ಸ್ಥಾನದಿಂದ ರಾಜ್ಯಾಧ್ಯಕ್ಷ ಪಟ್ಟದ ವರೆಗೆ : ನಳಿನ್ ಹಾದಿ

- Advertisement -

ಸಂಘ ಪ್ರಚಾರಕ ಹುದ್ದೆಯಿಂದ ರಾಜ್ಯಾಧ್ಯಕ್ಷ ಪಟ್ಟದವರೆಗೆ..!

ಕರ್ನಾಟಕ ಟಿವಿ : ಅಚ್ಚರಿಯ ಬೆಳವಣೆಗೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬಿಎಸ್ ವೈ ಅರವಿಂದ ಲಿಂಬಾವಳಿಯನ್ನ ನೇಮಕ ಮಾಡಲು ಉತ್ಸುಕರಾಗಿದ್ರು. ಆದ್ರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಳಗ್ಗೆಯಷ್ಟೆ ಸಂಪುಟ ವಿಸ್ತರಣೆಯಲ್ಲಿ ಬಿಎಸ್ ವೈಗೆ  ಶಾಕ್ ಕೊಟ್ಟಿದ್ರು ಸಂಜೆ ವೇಳೆಗೆ ನಳೀನ್ ಕುಮಾರ್ ಕಟೀಲ್ ನೇಮಕ ಮಾಡುವ ಮೂಲಕ ಮತ್ತೊಂದು ಶಾಕ್ ಕೊಟ್ಟಿದ್ದಾರೆ.

https://www.facebook.com/karnatakatv.net/

ನಳೀನ್ ಕುಮಾರ್ ಚಿಕ್ಕಂದಿನಿಂದಲೂ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ರು. ನಳೀನ್ ತನ್ನ 18ನೇ ವಯಸ್ಸಿನಲ್ಲೇ ಸಂಘದ ಪೂರ್ಣಾವಧಿಯ ಪ್ರಚಾರಕ್ ಆಗಿ 12 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ರು.. ತನ್ನ ತಂದೆಯ ಸಾವಿನ ನಂತರ ಪ್ರಚಾರಕ್ ಕಾರ್ಯದಿಂದ ಮನೆಗೆ ವಾಪಸ್ ಆಗುವ ಕಟೀಲ್ ಕುಟುಂಬ ನಿರ್ವಹಣೆಯ ಜೊತೆ ಗುತ್ತಿಗೆದಾರ ಕೆಲಸ ಮಾಡ್ತಾರೆ. ಇದೇ ವೇಳೆ ಬಿಜೆಪಿ ಸೇರ್ಪಡೆಯಾಗುವ ನಳೀನ್ ಕುಮಾರ್ 2004ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಳ್ತಾರೆ..

ಇನ್ನು 2009ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಮಂಗಳೂರು ಸಂಸದರಾಗಿದ್ದ ಡಿವಿ ಸದಾನಂದಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ವಲಸೆ ಬರ್ತಾರೆ.. ಈ ವೇಳೆ ದಕ್ಷಿಣ ಕನ್ನಡ ಕ್ಷೇತ್ರಕ್ಕೆ ನಳೀನ್ ಕುಮಾರ್ ಕಟೀಲ್ ಕಮಲ ಪಕ್ಷದ ಅಭ್ಯರ್ಥಿಯಾಗಿ ಜನಾರ್ದನ ಪೂಜಾರಿ ವಿರುದ್ಧ ಜಯಗಳಿಸ್ತಾರೆ.. ಹೀಗೆ 2009ರಲ್ಲಿ ಗೆಲುವು ಸಾಧಿಸುವ ನಳೀನ್ ಕುಮಾರ್ ಕಟೀಲ್ 2014ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಪೂಜಾರಿಯನ್ನ ಮತ್ತೆ ಸೋಲಿಸುವ ಮೂಲಕ ಎರಡನೇ ಬಾರಿ ಸಂಸತ್ ಪ್ರವೇಶ ಮಾಡ್ತಾರೆ. ಮತ್ತೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಿಥುನ್ ರೈ ಸೋಲಿಸುವ ಮೂಲಕ ಮೂರನೇ ಬಾರಿ ನಳೀನ್ ಕುಮಾರ್ ಕಟೀಲ್ ಸುಲಭವಾಗಿ ಸಂಸತ್ ಪ್ರವೇಶ ಮಾಡ್ತಾರೆ.

ರಾಜ್ಯದಲ್ಲಿ ಉತ್ತಮ ಸಂಸತ್ ಸದಸ್ಯ ಅಂತ ಕರೆಸಿಕೊಳ್ಳುವ ನಳೀನ್ ಕುಮಾರ್ ಕಟೀಲ್ ಕೇರಳಾದಲ್ಲಿ ಬಿಜೆಪಿ ಸಂಘಟನೆಯ ಜವಾಬ್ದಾರಿ ಹೊತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ನಳೀನ್ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರೆ ಅನ್ನುವ ಮಾತು ಕೇಳಿ ಬರ್ತಿತ್ತು. ಅದು ಅಧಿಕೃತವಾಗಿ ಅಮಿತ್ ಶಾ ನೇಮಕಗೊಳಿಸಿ ಕಟೀಲ್ ಗೆ ಕರ್ನಾಟಕದಲ್ಲಿ ಕಮಲ ಪಕ್ಷವನ್ನ ಸಮರ್ಥವಾಗಿ ಕಟ್ಟುವ ಜವಾಬ್ದಾರಿ ನೀಡಿದ್ದಾರೆ.. ಪಕ್ಷ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಒಟ್ಟಿಗೆ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಕಟೀಲ್ ಹೇಗೆ ಪಕ್ಷವನ್ನ ರಾಜ್ಯದಲ್ಲಿ ಬಲಪಡಿಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

- Advertisement -

Latest Posts

Don't Miss