Saturday, July 27, 2024

Latest Posts

ಸಂಕಷ್ಟ ಚತುರ್ಥಿ ದಿನ ಗಣೇಶನ ಅನುಗ್ರಹಕ್ಕಾಗಿ ಹೀಗೆ ಮಾಡಿ..!

- Advertisement -

Devotional:

ಹಿಂದೂ ಧರ್ಮದ ಪ್ರಕಾರ ಸಂಕಷ್ಟ ಚತುರ್ಥಿಗೆ ಬಹಳ ಆದ್ಯತೆ ಇದೆ. ಈ ಪವಿತ್ರವಾದ ದಿನ ವಿನಾಯಕನಿಗೆ ಅರ್ಪಿಸಲಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದಲ್ಲಿ ಸಂಕಷ್ಟ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಯನ್ನು ಆಚರಿಸಲಾಗುತ್ತದೆ . ಈ ಹಿನ್ನೆಲೆಯಲ್ಲಿ ಈ ಬಾರಿ ನವೆಂಬರ್ 12ರಂದು ಶನಿವಾರ ಸಂಕಷ್ಟ ಚತುರ್ಥಿ ಬಂದಿದೆ. ಈ ಪವಿತ್ರವಾದ ದಿನದ ವಿನಾಯಕ ನ ಭಕ್ತರು ಉಪವಾಸ ಮಾಡುವುದರಿಂದ ತಮ್ಮ ಜೀವನದಲ್ಲಿನ ಅಡೆ ತಡೆಗಳನ್ನೆಲ್ಲ ಗಣೇಶನು ತೆಗೆದುಹಾಕುತ್ತಾನೆ ಎಂದು ನಂಬಲಾಗಿದೆ . ಅಲ್ಲದೆ ಈದಿನ ಉಪವಾಸ ವ್ರತವನ್ನು ಆಚರಿಸುವುದರಿಂದ ಸಂಪತ್ತು, ಬುದ್ಧಿವಂತಿಕೆ, ಐಶ್ವರ್ಯಸಿಗುತ್ತದೆ ಎಂದು ಹೇಳಲಾಗಿದೆ ಈ ಸಂದರ್ಭದಲ್ಲಿ ಸಂಕಷ್ಟ ಚತುರ್ಥಿ ಶುಭ ಸಮಯ, ಪೂಜಾ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಶುಭ ಮುಹೂರ್ತ:
ಚತುರ್ಥಿ ತಿಥಿ 11 ನವೆಂಬರ್ 2022 ಶುಕ್ರವಾರ ರಾತ್ರಿ 8:17 ಗಂಟೆಯಿಂದ ಪ್ರಾರಂಭ ವಾಗಿ. 12 ನವೆಂಬರ್ 2022 ಶನಿವಾರ ರಾತ್ರಿ 10:25 ಗಂಟೆಗೆ ಕೊನೆಗೊಳ್ಳುತ್ತದೆ. ಸಂಕಷ್ಟ ಚತುರ್ಥಿ ದಿನ ಚಂದ್ರೋದಯ 12 ಶನಿವಾರ 2022 ರಾತ್ರಿ 8:21 ಗಂಟೆಗೆ

ಪೂಜಾ ವಿಧಾನ:
ಸಂಕಷ್ಟ ಚತುರ್ಥಿ ದಿನದಂದು ಮುಂಜಾನೆ ಸೂರ್ಯೋದಯಕ್ಕೆ ಮೊದಲೇ ಸ್ನಾನ ಮಾಡಬೇಕು, ನಂತರ ಮನೆಯೆಲ್ಲ ಗಂಗಾಜಲವನ್ನು ಹಾಕಿ ಶುಚಿ ಮಾಡಬೇಕು, ಪೂಜಾ ಮಂದಿರದಲ್ಲಿ ವಿನಾಯಕನ ಮೂರ್ತಿ ಅಥವಾ ಫೋಟೋವನ್ನು ಅಲಂಕರಿಸಿ ದೀಪಾರಾಧನೆ ಮಾಡಬೇಕು. ನಂತರ ಹೂವುಗಳನ್ನು ಸಲ್ಲಿಸಬೇಕು. ಈ ಪವಿತ್ರವಾದ ದಿನ ನಿಮ್ಮ ಮನೆಯಲ್ಲಿ ತಯಾರಿಸಿದ ಲಡ್ಡೂ, ಮೋದಕಗಳನ್ನು ಗಣಪತಿಗೆ ಪ್ರಸಾದವಾಗಿ ಸಲ್ಲಿಸಬೇಕು. ಪೂಜೆ ಮಾಡಿದ ನಂತರ ಹಾರತಿ ಬೆಳಗಿ ಪೂಜೆಯಲ್ಲಿ ಏನಾದರೂ ತಪ್ಪುಮಾಡಿದರೆ ಕ್ಷಮಿಸಬೇಕೆಂದು ಕೋರಬೇಕು .

ಸಂಕಷ್ಟ ಚತುರ್ಥಿ ಮಹತ್ವ:
ಪುರಾಣಗಳ ಪ್ರಕಾರ, ವಿನಾಯಕನು ಪಾರ್ವತೀಪರಮೇಶ್ವರರ ದೊಡ್ಡ ಮಗ. ನಮ್ಮ ಹಿಂದೂ ಪುರಾಣಗಳಲ್ಲಿ ಗಣೇಶನಿಗೆ ಮೊದಲಪೂಜೆಗಳನ್ನು ಮಾಡುವ ಪದತ್ತಿ ಇದೆ. ಸಂಕಷ್ಟ ಚತುರ್ಥಿಯ ಪವಿತ್ರವಾದ ದಿನ ಉಪವಾಸ ಇರುವುದರಿಂದ ವಿನಾಯಕನ ಅನುಗ್ರಹ ಸಿಗುತ್ತದೆ ಎಂದು ನಂಬುತ್ತಾರೆ. ಅಲ್ಲದೆ ತಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆ ತಡೆಗಳು ತೊಲಗಿಹೋಗುತ್ತದೆ, ತಾವು ಕೋರಿದ ಬಯಕೆಗಳೆಲ್ಲವೂ ಈಡೇರುತ್ತದೆ ಎಂದು ಬಹಳ ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ದಿನ ಉಪವಾಸ ಇರಬೇಕು ಎಂದು ನಂಬುತ್ತಾರೆ .

ನವೆಂಬರ್ 24ರಂದು ಗುರುವಿನ ನೇರ ನಡೆಯಿಂದ ಈ 3ರಾಶಿಯವರಿಗೆ ಭಾರೀ ಅದೃಷ್ಟ..!

ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 2

ನಿಮ್ಮ ಮನೆಯ ವಾಸ್ತು ಟಿಪ್ಸ್ ..!

 

- Advertisement -

Latest Posts

Don't Miss