Thursday, June 13, 2024

Latest Posts

ಪ್ರಿಯತಮೆಯನ್ನು ಕೊಲೆ ಮಾಡಿ ಢಾಬಾ ಫ್ರಿಡ್ಜ್ ನಲ್ಲಿಟ್ಟ ಪಾಪಿ…!

- Advertisement -

crime news

ಬೆಂಗಳೂರು(ಫೆ.15): ಕಳೆದ ಬಾರಿ ದೆಹಲಿಯಲ್ಲಿ ನಡೆದ ಶ್ರದ್ದಾ ಎಂಬ ಯುವತಿಯ ಕೊಲೆ ಪ್ರಕರಣ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ದೆಹಲಿಯಲ್ಲಿ ಆಫ್ತಾಬ್ ಪೂನಾವಾಲಾ ಎಂಬಾತ ತಾನು ಪ್ರೀತಿಸುತ್ತಿದ್ದ ಶ್ರದ್ಧಾ ಎಂಬಾಕೆಯನ್ನು ಕೊಲೆ ಮಾಡಿ, ಫ್ರಿಡ್ಜ್ ನಲ್ಲಿ ಇರಿಸಿ, ಪಾಪ ಕೃತ್ಯವನ್ನು ಎಸಗಿದ್ದ ಸುದ್ದಿಯಾಗಿತ್ತು.

ಇದೀಗ ಅದೇ ರೀತಿ ದೆಹಲಿಯಲ್ಲಿ ಮತ್ತೊಂದು ಘೋರ ಕೃತ್ಯ ನಡೆದಿದೆ. ತನ್ನ ಪ್ರಿಯತಮೆಯನ್ನು ಕೊಂದು ಢಾಬಾದ ಫ್ರಿಡ್ಜ್ ನಲ್ಲಿಟ್ಟಿರುವ ಸುದ್ದಿ ಎಲ್ಲರಿಗೂ ಗಾಬರಿ ಹುಟ್ಟಿಸಿದೆ. ಈ ಕುರಿತಾಗಿ ದಹಲಿಯ ಬಾಬಾ ಹರಿದಾಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು ಸಾಹಿಲ್ ಗೆಹ್ಲೋಟ್ ಎಂದು ಗುರುತಿಸಲಾಗಿದೆ. ಪೊಲೀಸರು ಬಾಲಕಿಯ ಮೃತದೇಹವನ್ನು ಫ್ರಿಡ್ಜ್‌ನಿಂದ ಹೊರತೆಗೆದಿದ್ದಾರೆ.

ಪ್ರಕರಣ ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿ ತನ್ನ ಸಂಗಾತಿಯನ್ನು ಕೊಲೆ ಮಾಡಿ ದೇಹವನ್ನು ಹಾಸಿಗೆಯೊಳಗೆ ತುಂಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಆರೋಪಿ ಮಧ್ಯಪ್ರದೇಶದ ನಗ್ಡಾದಲ್ಲಿ ರೈಲಿನಲ್ಲಿ ತಪ್ಪಿಸಿಕೊಳ್ಳುವ ಯತ್ನಿಸಿದಾಗ ರೈಲ್ವೇ ರಕ್ಷಣಾ ಪಡೆಯ ಸಿಬ್ಬಂದಿ ಹಿಡಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Latest Posts

Don't Miss