Saturday, October 5, 2024

Latest Posts

ಬೆಳಗಾವಿಗೆ ತೆರಳಿದ ರಮೇಶ್ ಜಾರಕಿಹೊಳಿ- ಸಾಹುಕಾರ್ ಮುಂದಿನ ಪ್ಲಾನ್ ಏನು?

- Advertisement -

ಬೆಂಗಳೂರು: ರಾಜ್ಯ ಸಂಪುಟದಿಂದ ವಜಾಗೊಂಡು ತೀವ್ರ ಅಸಮಾಧಾನಗೊಂಡಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೀಗ ತಮ್ಮ ನಿಲುವು ಬದಲಿಸಿದಂತಿದೆ. ಹೌದು, ಕಳೆದ 4 ದಿನಗಳಿಂದಲೂ ಬೆಂಗಳೂರಿನಲ್ಲಿ ಆಪ್ತರೊಂದಿಗೆ ತಂಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಳಗ್ಗೆ ಗೋಕಾಕ್ ಗೆ ತೆರಳಿದ್ದಾರೆ. ತಾವೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಪ್ತ ಶಾಸಕರಿಂದಲೂ ರಾಜೀನಾಮೆ ಕೊಡಿಸ್ತೇನೆ ಅಂತ ಪಟಾಲಂ ಕಟ್ಟಲು ತಯಾರಿದ್ದ ಜಾರಕಿಹೊಳಿ, ಸದ್ಯ ಆಪರೇಷನ್ ಕಾಂಗ್ರೆಸ್ ಗೆ ಅಂತ್ಯ ಹಾಡಿದ್ರಾ ಅನ್ನೋ ಪ್ರಶ್ನೆ ಮೂಡ್ತಿದೆ. ಇನ್ನು ಗುಂಪು ರಾಜೀನಾಮೆಗೆ ತಮ್ಮ ಆಪ್ತರನ್ನ ಒಗ್ಗೂಡಿಸೋ ನಿಟ್ಟಿನಲ್ಲಿ ಮೊನ್ನೆಯಷ್ಟೇ ತಮ್ಮ ಆಪ್ತರಾದ ಮಹೇಶ್ ಕುಮಟಳ್ಳಿ, ಪಕ್ಷೇತರ ಶಾಸಕ ಆರ್. ಶಂಕರ್, ಸಂಸದ ಬಿ.ವಿ.ನಾಯಕ್ ಜೊತೆ ಚರ್ಚೆ ನಡೆಸಿದ್ರು. ಆದ್ರೆ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಳ್ಳಲು ಬಿ.ನಾಗೇಂದ್ರ, ಭೀಮಾನಾಯ್ಕ್, ಶ್ರೀಮಂತ ಪಾಟೀಲ್, ಪ್ರತಾಪ್ ಗೌಡ ಪಾಟೀಲ್ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇಷ್ಟೆಲ್ಲಾ ಬೆಳವಣಿಗಗಳ ನಡುವೆ ರಮೇಶ್ ಜಾರಕಿಹೊಳಿ ದಿಢೀರ್ ಬೆಳಗಾವಿಗೆ ತೆರಳಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

- Advertisement -

Latest Posts

Don't Miss