Saturday, March 2, 2024

Latest Posts

ಕಾರು ಡಿಕ್ಕಿ- ನ್ಯಾಷನಲ್ ಲೆವಲ್ ಹಾಕಿಪಟು ದುರ್ಮರಣ

- Advertisement -

ಧಾರವಾಡ: ರಸ್ತೆ ದಾಟುತ್ತಿದ್ದ ವೇಳೆ ಕಾರ್ ಡಿಕ್ಕಿ ಹೊಡೆದು ರಾಷ್ಟ್ರಮಟ್ಟದ ಹಾಕಿ ಪ್ಲೇಯರ್ ಸುಜಾತಾ ಕೆರಳ್ಳಿ (೧೭) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಲೂಕಿನ ಮಾದನಬಾವಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಈ ಅಪಘಾತ ನಡೆದಿದ್ದು ಸುಜಾತಾ ತಮ್ಮತಂದೆಯೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ  ಎಮ್ ಎಚ್ 44 ಎ ಎಲ್  6977 ನಂಬರ್ ನ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸುಜಾತ ಸ್ಥಳದಲ್ಲೇ ಸಾವನ್ನಪ್ಪಿದ್ರೆ ಅವರ ತಂದೆ ಮಲ್ಲಿಕಾರ್ಜುನ ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಕೂಡಲೇ ಕಾರು ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದು . ಈ ಕುರಿತು ಗರಗ ನಗರ ಠಾಣವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ಹಾಕಿ ಪಟು ಸುಜಾತಾ ಕೆರಳ್ಳಿ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ.

- Advertisement -

Latest Posts

Don't Miss