ಬೆಂಗಳೂರು: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ದವಾಗಲಿವೆ ಎಂದು ಬಿಡಿಎ ಅಧ್ಯಕ್ಷರೂ ಮತ್ತು ತಿರುಪತಿ ತಿರುಮಲ ಮಂಡಳಿಯ ಸದಸ್ಯ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಿರುಮಲದಲ್ಲಿ ಕರ್ನಾಟಕದ ಭಕ್ತಾಧಿಗಳು ಬಂದು ವಾಸ್ತವ್ಯ ಹೂಡಲು...