ಯಾರಾದರೂ ನಾನು ಇಲ್ಲಿತನಕಾ ಸುಳ್ಳೇ ಹೇಳಲಿಲ್ಲಾ ಅಂತಾ ಹೇಳಿದ್ರೆ, ಅಥವಾ ನಾನು ಯಾವಾಗಲೂ ಸತ್ಯಾನೇ ಮಾತಾಡ್ತೀನಿ ಅಂತಾ ಹೇಳಿದ್ರೆ, ಅಂಥವರಿಗೆ ಹೌದೌದು ನೀನು ಸತ್ಯ ಹರಿಶ್ಚಂದ್ರನ ಮೊಮ್ಮಗ ನೋಡು ಅಂತಾ ಹೇಳ್ತಾರೆ. ಯಾಕಂದ್ರೆ ಹರಿಶ್ಚಂದ್ರ ತನ್ನ ಜೀವನದಲ್ಲಿ ಎಂದಿಗೂ ಸುಳ್ಳು ಹೇಳಿದವನೇ ಅಲ್ಲ. ಆತ ಎಂಥ ಕಷ್ಟ ಬಂದರೂ ಸತ್ಯವಂತನಾಗಿದ್ದ. ಆದರೆ ಅವನ ಸತ್ಯ...