Thursday, June 13, 2024

Latest Posts

ಕಾರಿಗೆ ಡಿಕ್ಕಿ ಹೊಡೆದನೆಂದು ರಾಶಿ ರಾಶಿ ಪಪ್ಪಾಯಿ ರೋಡಿಗೆಸೆದ ಮಹಿಳೆ: ವೀಡಿಯೋ ವೈರಲ್..!

- Advertisement -

ಭೋಪಾಲ್: ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ, ಮಹಿಳೆಯೊಬ್ಬಳ ಕಾರಿಗೆ ಪಪ್ಪಾಯಿ ಹಣ್ಣು ಮಾರುವವನ ಗಾಡಿ ಡಿಕ್ಕಿ ಹೊಡೆಯಿತೆಂದು, ಆತನ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣನ್ನು ಆ ಮಹಿಳೆ ಒಂದೊಂದಾಗಿ ರೋಡಿಗೆ ಎಸೆದಿದ್ದಾಳೆ.

ಭೋಪಾಲದ ಅಯೋಧ್ಯಾ ನಗರದಲ್ಲಿ ಈ ಘಟನೆ ಜರುಗಿದ್ದು, ಸ್ಥಳದಲ್ಲಿದ್ದ ಯಾರೋ ಒಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್‌ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಮತ್ತು ಈ ವೀಡಿಯೋ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು, ಮಹಿಳೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸ್ಥಳೀಯ ಪ್ರೈವೇಟ್ ಕಾಲೇಜಿನಲ್ಲಿ ಪ್ರಾಂಶುಪಾಲಕಿಯಾಗಿದ್ದು, ತನ್ನ ಕಾರಿಗೆ ಪಪ್ಪಾಯಿ ಮಾರುವವನ ಗಾಡಿ ತಾಗಿದ್ದಕ್ಕಾಗಿ, ಸಿಟ್ಟಿಗೆದ್ದು, ಆತನ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣನ್ನ ರೋಡಿಗೆಸೆದಿದ್ದಾಳೆ. ಈ ಪರಿಣಾಮವಾಗಿ ಆ ಪಪ್ಪಾಯಿ ಹಣ್ಣಲ್ಲಿ ಕೆಲವು ಪಪ್ಪಾಯಿ ಹಣ್ಣುಗಳು ನುಜ್ಜುಗುಜ್ಜಾಗಿ ಹೋಗಿದೆ. ಇದನ್ನು ನೋಡಿದ ಪಪ್ಪಾಯಿ ಮಾರಟಗಾರನಿಗೂ ಕೋಪ ಬಂದು ಇಬ್ಬರ ನಡುವೆ ಜಗಳವಾಗಿದೆ.

ಈ ವೇಳೆ ಸಿಟ್ಟಿಗೆದ್ದ ವ್ಯಾಪಾರಿ ಬೇಸರ ವ್ಯಕ್ತಪಡಿಸಿದ್ದಾನೆ. ಈ ವೇಳೆ ರಸ್ತೆಹೋಕರು ಆತನ ಪರ ಮಾತನಾಡಿದ್ದು, ನೀವು ಇಷ್ಟು ದೊಡ್ಡವರಾಗಿ ಇಂಥ ಕೆಲಸ ಮಾಡಿದ್ದು ತಪ್ಪು, ಬಡವನ ಮೇಲೆ ನೀವು ಈ ರೀತಿ ದೌರ್ಜನ್ಯ ಮಾಡಬಾರದಿತ್ತು. ನಿಮ್ಮ ಮಕ್ಕಳಿಗೂ ದೇವರು ಇದೇ ರೀತಿ ಶಿಕ್ಷೆ ನೀಡಲಿ ಎಂದು ಶಾಪ ಹಾಕಿದ್ದಾರೆ.

ಈ ವೇಳೆ ರಸ್ತೆಯಲ್ಲಿ ಹೋಗುತ್ತಿರುವ ವ್ಯಕ್ತಿಯೋರ್ವ, ನೀವು ಮಾಸ್ಕ್ ಹಾಕದೇ, ವ್ಯಾಪಾರಿಯ ಜೊತೆ ಜಗಳವಾಡುತ್ತಿದ್ದೀರಿ. ಈ ವೇಳೆ ಮಾಸ್ಕ್ ಇಲ್ಲದೇ ಓಡಾಡುವುದು ತಪ್ಪು ಎಂದು ಹೇಳಿದ್ದಾರೆ. ಅದಕ್ಕೆ ಆಕೆ ನಾನು ಈಗಷ್ಟೇ ಮನೆಯಿಂದ ಕೆಳಗೆ ಇಳಿದು ಬಂದಿದ್ದು, ನನ್ನ ಮನೆ ಇಲ್ಲೆ ಇದೆ. ಅದಕ್ಕೆ ನಾನು ಮಾಸ್ಕ್ ಹಾಕಿಲ್ಲ ಎಂದಿದ್ದಾಳೆ. ಈಕೆಯ ಎಡವಟ್ಟಿನಿಂದ ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಕೂಡ ಏರ್ಪಟ್ಟಿತ್ತು.

- Advertisement -

Latest Posts

Don't Miss