Saturday, July 27, 2024

Latest Posts

ಪಾಕ್ ಗೆ ಅಘಾತ ತಂದ ಟೀಮ್ ಇಂಡಿಯಾ ಸೋಲು..!

- Advertisement -

ಕ್ರೀಡೆ : ಕಡೆಗೂ ಪಾಕ್ ಅಭಿಮಾನಿಗಳ ಆಶಯ ಈಡೇರಲಿಲ್ಲ. ಇಂಗ್ಲೆಂಡ್ ಎದುರು ಭಾರತ, ಗೆಲುವು ಕಾಣಲಿ ಅನ್ನೋ ಅವರ ಬೇಡಿಕೆ, ಕಡೆಗೂ ಕೈಗೂಡಲಿಲ್ಲ. ಹೌದು ನಿನ್ನೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ, ಇಂಗ್ಲೆಂಡ್ ವಿರುದ್ಧ 31 ರನ್ನುಗಳ ಸೋಲನುಭವಿಸಿತು. ಪರಿಣಾಮವಾಗಿ ಪಾಕ್ ಪಡೆಯ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಯಿತು. ಈ ಮೂಲಕ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸುವ ಕನಸನ್ನ ಜೀವಂತವಾಗಿಟ್ಟುಕೊಂಡಿತು.

ಗೆಲ್ಲಲು 338 ರನ್ ಗುರಿ ಬೆನ್ನತ್ತಿದ ಭಾರತ ನಿಗಧಿತ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 306 ರನ್ ಗಳನ್ನಷ್ಟೇ ಗಳಿಸಿತು. ಪರಿಣಾಮವಾಗಿ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಪಡೆ, ಮೊದಲ ಸೋಲು ಅನುಭವಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಂಗ್ಲ ಪಡೆ, ಉತ್ತಮ ಆರಂಭ ಪಡೆಯಿತು. ಓಪನರ್ ಬ್ಯಾಟ್ಸ್ ಮನ್ ಗಳಾದ ಜೇಸನ್ ರಾಯ್ ಮತ್ತು ಜಾನಿ ಬೇರ್ ಸ್ಟೋ ಮೊದಲ ವಿಕೆಟಿಗೆ ಬರೋಬ್ಬರಿ 160 ರನ್ ಕಲೆಹಾಕಿದ್ರು. ಪರಿಣಾಮವಾಗಿ ಇಂಗ್ಲೆಂಡ್ ದೊಡ್ಡ ಮೊತ್ತ ಕಲೆಹಾಕಿತು. ಒಂದು ಹಂತದಲ್ಲಿ 400ಕ್ಕೂ ಅಧಿಕ ರನ್ ಕಲೆ ಹಾಕುವ ನಿರೀಕ್ಷೆ ಮೂಡಿಸಿದ್ದ ಇಂಗ್ಲೆಂಡ್ ಆರ್ಭಟಕ್ಕೆ ವೇಗಿ ಮೊಹಮ್ಮದ್ ಶಮಿ ಬ್ರೇಕ್ ಹಾಕಿದ್ದರು. ಪರಿಣಾಮವಾಗಿ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು.337 ರನ್ ಕಲೆಹಾಕಿತು.

ಇಂಗ್ಲೆಂಡ್ ನೀಡಿದ್ದ ಬೃಹತ್ ಮೊತ್ತ ಬೆನ್ನತ್ತಿದ ಭಾರತಕ್ಕೆ, ಆರಂಭದಲ್ಲೇ ಶಾಕ್ ಕಾದಿತ್ತು. ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ ರೋಹಿತ್-ರಾಹುಲ್ ಜೋಡಿ, 8 ರನ್ ಆಗುವಷ್ಟರಲ್ಲಿ ಮುರಿದು ಬಿತ್ತು. ಕನ್ನಡಿಗ ರಾಹುಲ್ ಶೂನ್ಯಕ್ಕೆ ಔಟ್ ಆದ್ರು. ನಂತರ ಜೊತೆಯಾದ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಮರು ಹೋರಾಟ ಸಂಘಟಿಸಿದರು. ಶತಕದ ಜೊತೆಯಾಟವಾಡಿದ ಈ ಜೋಡಿ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ರೋಹಿತ್ ಶರ್ಮಾ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿದ್ರೆ, ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವಕಪ್ ನಲ್ಲಿ ಸತತ 5ನೇ ಅರ್ಧ ಶತಕ ಸಿಡಿಸಿದ್ರು. ಇನ್ನೂ ಮಿಡಲ್ ಆರ್ಡರ್ ನಲ್ಲಿ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿದರಾದ್ರು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಎಡವಿದ್ರು. ಅಂತಿಮ ಹಂತದಲ್ಲಿ ಎಂ.ಎಸ್.ಧೋನಿ 42 ರನ್ ಕಲೆಹಾಕಿದ್ರು. ಕೊನೆಯ ಸ್ಲಾಗ ಓವರ್ ಗಳಲ್ಲಿ ಸಿಕ್ಸರ್ ,ಬೌಂಡರಿಗಳು ಸಿಡಿಯದ ಕಾರಣ, ಭಾರತ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ.. ಹಾಗೆ ಪಾಕಿಸ್ತಾನ, ಬಾಂಗ್ಲಾ ವಿರುದ್ಧ ಪಂದ್ಯ ಜಯಗಳಿಸಿದರೆ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದಿತ್ತು. ಆದರೆ ಈಗ ಇಂಗ್ಲೆಂಡ್ ಅಂಕಪಟ್ಟಿಯ ನಾಲ್ಕನೇಯ ಸ್ಥಾನಕ್ಕೆ ಏರಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನಕ್ಕೆ ತಲಾ ಒಂದು ಪಂದ್ಯ ಬಾಕಿ ಇದೆ. ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಜಯಗಳಿಸಿದರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಲಿದೆ.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss