Thursday, May 30, 2024

Latest Posts

BEO Clerk: ಬಿಇಒ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ..!ಯಾಕೆ?

- Advertisement -

ಹಾಸನ: ಜಿಲ್ಲೆಯ ಹೊಳೆನರಸೀಪುರ ಗ್ರಾಮದಲ್ಲಿ ಸರ್ಕಾರಿ ನೌಕರ ಹೃದಯಾಘಾತದಿಂದ ಮರಣ ಹೊಂದಿದ್ದೂ ಕಛೇರಿ ಮುಂದೆ ಮೃತದೇಹವಿಟ್ಟು ಗ್ರಾಮಸ್ಥರು ಪ್ರತಿಭಟನೆ  ಮಾಡಿತ್ತಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಹೋಬಳಿಯ ಲಕ್ಷ್ಮೀಪುರದ ಕಿರಣ್ ಎನ್ನುವ (35) ವ್ಯಕ್ತಿ  ಹೊಳೆನರಸೀಪುರದ ಬಿಇಒ ಕಛೇರಿಯಲ್ಲಿ ಎಸ್ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಗೆ ಕಚೇರಿಯ ಬಿಇಒ ಅಧಿಕಾರಿಗಳಾದ ಭ್ಯಾಗ್ಯಮ್ಮ ಮತ್ತು ಸುನೀಲ್ ಎನ್ನುವವರಿಂದ ಕಿರುಕುಳಕ್ಕೆ ಒಳಗಾಗಿದ್ದಾನೆ  ಹಿರಿಯ ಅಧಿಕಾರಿಗಳು ಪದೇ ಪದೇ ಕಿರುಕುಳ ನೀಡಿ ಹೊಳೆನರಸೀಪುರದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾದ ಕಿರಣ್ ಹೃದಯಾಘಾತದಿಂದ ಸಾವನ್ನೊಪ್ಪಿದ್ದಾನೆ ಎಂದು ಗ್ರಾಮಸ್ಥರು ಭ್ಯಾಗ್ಯಮ್ಮ ಮತ್ತು ಸುನೀಲ್ ವಿರುದ್ದ ಆರೋಪ ಮಾಡುತ್ತಿದ್ದಾರೆ.

ಕೀರುಕುಳ ನೀಡಿದ್ದಕ್ಕಾಗಿ ಖಿನ್ನತೆಗೆ ಒಳಾಗಾಗಿ ಹೃದಯಾಘಾತದಿಂದ ಮರಣ ಹೊಂದಿದ ಕಿರಣ್ ಮೃತದೇಹವನ್ನು ಬಿಇಒ ಕಛೇರಿ ಎದುರು ಇಟ್ಟುಕೊಂಡು ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಗ್ರಹಿಸುತ್ತಿದ್ದಾರೆ. ಈ ವೇಳೆ ಕಚೇರಿ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Police: ದಲಿತರ ಭೂಮಿಯ ಮೇಲೆ ಸವರ್ಣಿಯರಿಗೆ ಯಾಕಿಷ್ಟು ಕಣ್ಣು..!

Empty Lake: ಖಾಲಿಯಿರುವ ಕೆರೆ ತುಂಬಿಸಲು ಗ್ರಾಮಸ್ಥರು ಆಗ್ರಹ..!

Tractor Driver: ಟ್ರ್ಯಾಕ್ಟರ್ ರಿವರ್ಸ್ ಚಲಾಯಿಸಿ ಯಲ್ಲಮ್ಮನ ಗುಡ್ಡಕ್ಕೆ ಹೋದ ಯುವಕ..!

- Advertisement -

Latest Posts

Don't Miss