Saturday, July 20, 2024

Latest Posts

Police: ದಲಿತರ ಭೂಮಿಯ ಮೇಲೆ ಸವರ್ಣಿಯರಿಗೆ ಯಾಕಿಷ್ಟು ಕಣ್ಣು..!

- Advertisement -

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು  ಹೋಬಳಿಯ ಬೀರ್ತಮ್ಮನಹಳ್ಳಿ ಗ್ರಾಮದಲ್ಲಿ ದಲಿತ ವರ್ಗಕ್ಕೆ ಸೇರಿದವರ ಜಮೀನನ್ನು ಸವರ್ಣಿಯರು ಅಕ್ರಮವಾಗಿ ಉಳುಮೆ ಮಾಡುತ್ತಿರುವ ಘಟನೆ ನಡೆದಿದೆ.

ವೆಂಕಟೇಶ್ ತಂದೆ ದಿ:ಕುಳ್ಳಯ್ಯ ಎನ್ನುವವರಿಗೆ ಸೇರಿದ ಸರ್ವೇ ನಂಬರ್ 51 ರಲ್ಲಿರುವ 3 ಎಕರೆ 38 ಗುಂಟೆ ಜಮೀನಿನಲ್ಲಿ ತಮ್ಮೇಗೌಡರ ಕುಟುಂಬದವರು ತಮ್ಮ ಹೆಸರಿನಲ್ಲಿ ಯಾವುದೇ ದಾಖಲೆಗಳಿಲ್ಲದಿದ್ದರೂ ಅಕ್ರಮವಾಗಿ ದಲಿತರ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ ಹಾಗೂ ಪೊಲೀಸರನ್ನು ಕರೆಸಿ ಬೆದರಿಕೆ ಹಾಕುವ ಕುತಂತ್ರ ನಡೆಸುತಿದ್ದಾರೆ ಎನ್ನಲಾಗುತ್ತಿದೆ.

ತಮ್ಮೇ ಗೌಡರ ಹೆಸರಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಅಕ್ರಮವಾಗಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ  ವಿಷಯ ಗೊತ್ತಿದ್ದರೂ  ಪೊಲೀಸರು ದಲಿತ ಜನಾಂಗದವರ ಮೇಲೆ ದರ್ಪ ತೋರಿಸಿ ಬೆದರಿಕೆ ಹಾಕಿದ್ದಾರಂತೆ ಹಾಗಿದ್ದರೆ ತಮ್ಮೇ ಗೌಡರಿಂದ ಪೋಲಿಸರು ಲಂಚ ತೆಗೆದುಕೊಂಡು ದಲಿತರಿಗೆ ಬೆದರಿಕೆ ಹಾಕಿದ್ದಾರಾ?ಎನ್ನುವ ಅನುಮಾನ ಎದುರಾಗಿದೆ.

ಈ ಹಿಂದೆ ಉಪ ವಿಭಾಗದ ಅಧಿಕಾರಿಗಳು ನ್ಯಾಯಲಯದಲ್ಲಿ ವಿಚಾರಣೆ  ಮಾಡಿ ಸರಿಯಾದ ತೀರ್ಪು ನೀಡಿದ್ದರು. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಜಮೀನಿನ ಮಾಲೀಕರು ಬೇಸರ ವ್ಯಕ್ತಪಡಿಸಿದರು.

Lad Foundation ಲಾಡ್ ಫೌಂಡೇಶನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ..!

Jagadish Shetter: ಚೀಟಿ ಎತ್ತಿಯಾದ್ರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ;

Tractor Driver: ಟ್ರ್ಯಾಕ್ಟರ್ ರಿವರ್ಸ್ ಚಲಾಯಿಸಿ ಯಲ್ಲಮ್ಮನ ಗುಡ್ಡಕ್ಕೆ ಹೋದ ಯುವಕ..!

- Advertisement -

Latest Posts

Don't Miss