Tuesday, November 12, 2024

Latest Posts

‘ನಿಖಿಲ್ ಸಿನಿಮಾದಲ್ಲಿ ಮಾತ್ರ ರಾಜಕಾರಣ’- ಕೇಂದ್ರ ಸಚಿವ ವ್ಯಂಗ್ಯ

- Advertisement -

ಬೆಂಗಳೂರು: ಮಧ್ಯಂತರ ಚುನಾವಣೆ ಯಾವಾಗ ಬೇಕಾದ್ರೂ ಎದುರಾಗಬಹುದು ಅನ್ನೋ ನಿಖಿಲ್ ಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿವಿಎಸ್, ಮಧ್ಯಂತರ ಚುನಾವಣೆ ಬಗ್ಗೆ ನಿಖಿಲ್ ಕುಮಾರ್ ಹೇಳಿಕೆ ನೀಡಿದ್ದು ನೋಡಿ, ನಿಖಿಲ್ ಇಷ್ಟು ದೊಡ್ಡ ರಾಜಕಾರಣಿ ಆದ್ರಲ್ಲಿ ಅಂತ ನನಗೆ ಆಶ್ಚರ್ಯವಾಯ್ತು. ನಿಖಿಲ್ ಕುಮಾರ್ ಮೊನ್ನೆ ಮೊನ್ನೆ ರಾಜಕಾರಣಕ್ಕೆ ಬಂದಂತವರು, ಅವರು ಬರೀ ಸಿನಿಮಾದಲ್ಲಿ ರಾಜಕಾರಣ ಮಾಡಿರಬಹುದು ಅಂತ ಸದಾನಂದಗೌಡ ಲೇವಡಿ ಮಾಡಿದ್ರು. ಅಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಗಾಳಿ ಎಷ್ಟು ಹೊಲಸು ಅನ್ನೋದಕ್ಕೆ ಇದು ಸಾಕ್ಷಿ ಅಂತ ಮೈತ್ರಿ ಸರ್ಕಾರವನ್ನು ಜರಿದ್ರು.

ಕೆವೈಸಿ ಇಲ್ಲದಿದ್ರೆ ರೇಷನ್ ಸಿಗೋದೇ ಇಲ್ಲ… ಕೆವೈಸಿ ಅಂದರೆ ಏನು…? ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್

- Advertisement -

Latest Posts

Don't Miss