Sunday, May 26, 2024

Latest Posts

ಕೋವಿಡ್ ಲಸಿಕೆ ಪಡೆದ ವ್ಯಕ್ತಿಯಿಂದ ನಮ್ಮ ಮಗುಗೆ ರಕ್ತದಾನ ಬೇಡವೆಂದು ಪೊಷಕರು ಒತ್ತಾಯ

- Advertisement -

ಕೋವಿಡ್ 19 ವಿರುದ್ಧ ಲಸಿಕೆ ಪಡೆದ ವ್ಯಕ್ತಿಯ ರಕ್ತವನ್ನು ಬಳಸಿಕೊಂಡು ಹೃದಯ ಶಸ್ತ್ರ ಚಿಕಿತ್ಸೆ ನಡೆಸುವ ವೈದ್ಯರ ನಿರ್ಧಾರಕ್ಕೆ ಪೋಷಕರು ನೀರಾಕರಿಸುತ್ತಿದ್ದಾರೆ. ಕೋವಿಡ್ ಲಸಿಕೆ ಹಾಕದ ವ್ಯಕ್ತಿಯೇ ರಕ್ತದಾನ ಮಾಡಬೇಕು, ಇಲ್ಲವಾದರೆ ನನ್ನ ಮಗನ ಹೃದಯ ಶಸ್ತ್ರ ಚಿಕಿತ್ಸೆಯೇ ಬೇಡ ಎಂದು ಪೋಷಕರು ಪಟ್ಟು ಹಿಡಿದು ಕುಳಿತಿರುವ ಘಟನೆ ನ್ಯೂಜಿಲೆಂಡ್​ನಲ್ಲಿ ನಡೆದಿದೆ. ಇದೀಗ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. 6 ತಿಂಗಳ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ತುರ್ತು ಶಸ್ತ್ರ ಚಿಕಿತ್ಸೆ ನಡೆಸುವ ಅವಶ್ಯವಿದ್ದು, ಆದರೆ ಪೋಷಕರು ಕೋವಿಡ್ ಲಸಿಕೆ ಪಡೆದ ವ್ಯಕ್ತಿ ರಕ್ತ ಮಗುವಿಗೆ ಬೇಡ ಎಂದು ಪಟ್ಟು ಹಿಡಿದಿದ್ದರು.

ಇಂದು ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕಾರ

ಇದೀಗ ಕೋರ್ಟ್​ ತೀರ್ಪು ನೀಡಿದ್ದು, ಮಗುವಿನ ಶಸ್ತ್ರ ಚಿಕಿತ್ಸೆಯ ಆರಂಭದ ಹಂತದಿಂದ  ಚೇತರಿಸಿಕೊಳ್ಳುವವರೆಗೂ ನ್ಯಾಯಾಲಯದ ಪಾಲನೆಯಲ್ಲಿರುತ್ತದೆ ಎಂದು ಹೇಳಿದೆ. ಈ ಪ್ರಕರಣಕ್ಕಾಗಿಯೇ ನ್ಯಾಯಾಲಯವು ಇಬ್ಬರು ವೈದ್ಯರನ್ನು ನೇಮಿಸಿದೆ. ಮಗುವಿಗೆ ಓಪನ್ ಹಾರ್ಟ್​ ಸರ್ಜರಿಯ ಅಗತ್ಯವಿದೆ. ಆದರೆ ಕೋವಿಡ್ 19 ವಿರುದ್ಧ ಲಸಿಕೆ ಹಾಕದ ದಾನಿಗಳ ರಕ್ತವನ್ನು ಮಾತ್ರ ಬಳಸಬೇಕು ಎಂದು ಪೋಷಕರು ಒತ್ತಾಯಿಸಿದ್ದರಿಂದ ಶಸ್ತ್ರ ಚಿಕಿತ್ಸೆ ವಿಳಂಬವಾಗಿತ್ತು. ಇದೀಗ ಶಸ್ತ್ರ ಚಿಕಿತ್ಸೆ ನಡೆದಿದ್ದು, ಮಗು ಸುರಕ್ಷಿತವಾಗಿದೆ, ಚೇತರಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಾವು ಸೂಚಿಸುವ ವ್ಯಕ್ತಿಗಳಿಂದಲೇ ನೀವು ರಕ್ತವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಆದರೆ ಇದಕ್ಕೆ ಆಸ್ಪತ್ರೆಯ ಆಡಳಿತ ನಿರಾಕರಿಸಿತ್ತು. ಲಸಿಕೆ ಹಾಕಿದ ಹಾಗೂ ಲಸಿಕೆ ಹಾಕದ ದಾನಿಗಳ ನಡುವೆ ರಕ್ತದಲ್ಲಿ ವ್ಯತ್ಯಾಸ ಇರುವುದಿಲ್ಲ ಎಂದು ಹೇಳಿದೆ.

ಶತಕೋಟಿ ಮೌಲ್ಯದ 500 ವಿಮಾನಗಳ ಖರೀದಿಗೆ ಸಜ್ಜಾದ ಏರ್ ಇಂಡಿಯಾ

ನ್ಯೂಜಿಲೆಂಡ್​ನಲ್ಲಿ ಬಹುತೇಕ ಎಲ್ಲರೂ ಕೋವಿಡ್ ಲಸಿಕೆಗಳನ್ನು ಪಡೆದಿದ್ದಾರೆ, ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 12 ಅಥವಾ ಅದಕ್ಕಿಂತ ಹೆಚ್ಚಿನವರು ಶೇ.90ರಷ್ಟು ಕೋವಿಡ್ ಲಸಿಕೆಯ ಎರಡು ಡೋಸ್​ಗಳನ್ನು ಪಡೆದಿದ್ದಾರೆ. ಶೇ.70ರಷ್ಟು ಮಂದಿ ಮೊದಲ ಬೂಸ್ಟರ್​ ಡೋಸ್​ಗಳನ್ನು ಪಡೆದಿದ್ದಾರೆ.

ಮಳೆಯಿಂದಾಗಿ ಚಿಕ್ಕಬಳ್ಳಾಪುರದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲುತ್ತದೆ : ಹೆಚ್.ಡಿ.ಕುಮಾರಸ್ವಾಮಿ

- Advertisement -

Latest Posts

Don't Miss