Wednesday, June 19, 2024

Latest Posts

ಕುಂಬಳಕಾಯಿ ಒಡೆದ ಹೊಸತನದ ‘ಧೀರ ಸಾಮ್ರಾಟ್’

- Advertisement -

ಕನ್ನಡ ಚಿತ್ರರಂಗದಲ್ಲಿ ಹೊಸಬರ ಹೊಸ ಪ್ರಯತ್ನಗಳ ಸಿನಿಮಾಗಳು ಬರ್ತಾವೆ..ಹೋಗ್ತಾವೆ. ಈ ಸಿನಿಮಾಗಳ ಪೈಕಿ ಕೆಲ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿದ್ರೆ, ಮತ್ತೆ ಕೆಲ ಸಿನಿಮಾ ಸೆಟ್ಟೇರಿದ ದಿನದಿಂದಲ್ಲೂ ಸುದ್ದಿಯಲ್ಲಿ ಇರ್ತಾವೆ. ಈ ಪೈಕಿ ಧೀರಾ ಸಾಮ್ರಾಟ್ ಸಿನಿಮಾ ಕೂಡ ಒಂದು. ಕಳೆದ ಜನವರಿಯಲ್ಲಿ ಮಹೂರ್ತ ನೆರವೇರಿಸಿದ್ದ ಧೀರ ಸಾಮ್ರಾಟ್ ಶೂಟಿಂಗ್ ಈ ವರ್ಷದ ಜನವರಿಯಲ್ಲಿ ಕಂಪ್ಲೀಟ್ ಆಗಿದೆ. ಚಿತ್ರೀಕರಣದ ಮುಗಿಸಿರೋ ಧೀರ ಸಾಮ್ರಾಟ್ ಮತ್ತೊಮ್ಮೆ ಸುದ್ದಿಯಲ್ಲಿದೆ.  ಖಾಸಗಿ ವಾಹಿನಿಯಲ್ಲಿ ನಿರೂಪಕನಾಗಿ ಸಾಕಷ್ಟು ಅನುಭವ ಹೊಂದಿರುವ ಪವನ್ ಕುಮಾರ್ (ಪಚ್ಚಿ ) ಆಕ್ಷನ್ ಕಟ್ ಹೇಳಿರುವ ಧೀರ ಸಾಮ್ರಾಟ್ ಸಿನಿಮಾ ಕುಂಬಳಕಾಯಿ ಒಡೆದು 45 ದಿನಗಳ ಚಿತ್ರೀಕರಣಕ್ಕೆ ತೆರೆ ಎಳೆದಿದೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳ ಚಿತ್ರೀಕರಣ ನಡೆಸಿದೆ ಚಿತ್ರತಂಡ. ನಗರದ ಹೊರ ಭಾಗದಲ್ಲಿ ನಡೆದ ಕೊನೆ ದಿನದ ಚಿತ್ರೀಕರಣದಲ್ಲಿ ಸಿನೆಮಾದ ನಾಯಕನ ತಂಡ ಮತ್ತು ಖಳನಾಯಕನ ಮಧ್ಯೆ ಜಿದ್ದಾಜಿದ್ದಿನ ಸಾಹಸ ದೃಶ್ಯಗಳು ಮೈ ಜುಮ್ಮೆನಿಸುತ್ತೆ .

ತನ್ವಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉತ್ತರ ಕರ್ನಾಟಕದ ಗುರು ಬಂಡಿಯವರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಹೊಸಬರ ತಂಡದ ಪ್ರಯತ್ನಕ್ಕೆ ದೊಡ್ಡ ಮಟ್ಟದ ಸಾಥ್ ಕೊಡುತ್ತಿದ್ದಾರೆ.  ಹಾಡುಗಳ ಚಿತ್ರೀಕರಣ ಸಹ ಮುಗಿದಿದ್ದು, ಮುರಳಿ ಮಾಸ್ಟರ್ ಮತ್ತು ಕಿಶೋರ್ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.  ಮೊದಲ ಭಾಗದ ಚಿತ್ರೀಕರಣದಲ್ಲಿ ವೀರೇಶ್ ಎನ್ ಟಿ ಎ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದರೆ, ಎರಡನೇ ಭಾಗದ ಚಿತ್ರೀಕರಣ ಕ್ಕೆ ಅರುಣ್ ಸುರೇಶ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಎ ಆರ್ ಸಾಯಿರಾಂ ಸಂಭಾಷಣೆ ಬರೆದಿರೋ ಈ ಸಿನಿಮಾದಲ್ಲಿ ನಿರ್ದೇಶಕ ಪವನ್ ಕುಮಾರ್ ಸಹ ಮುಖ್ಯ ಖಳನಟನಾಗಿ ಮಿಂಚಿದ್ದಾರೆ.

ಆಕ್ಷನ್ ಪ್ರಿನ್ಸ್ ಧೃವ‌ ಸರ್ಜಾ ಕ್ಲಾಪ್ ಮಾಡಿ ಚಾಲನೆ ಕೊಟ್ಟಿದ್ದ ಸಿನಿಮಾ ಕ್ಕೆ ಚಂದನವನದ ಸ್ಟಾರ್ ಚಿತ್ರಸಾಹಿತಿ ಗಳಾದ ಭರ್ಜರಿ ಚೇತನ್ ಕುಮಾರ್ ಮತ್ತು ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಚಿತ್ರವನ್ನು ಏಪ್ರಿಲ್ ನಲ್ಲಿ ತೆರೆಗೆ ತರುವ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.

ರಾಕೇಶ್ ಬಿರಾದರ್ ಮತ್ತು ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ, ಬಲರಾಜ್ ವಾಡಿ, ನಾಗೇಂದ್ರ ಅರಸ್, ಶೋಭರಾಜ್, ಶಂಕರ್ ಭಟ್, ರವೀಂದ್ರನಾಥ್, ರಮೇಶ್ ಭಟ್, ಮಂಡ್ಯ ಚಂದ್ರು, ಮನಮೋಹನ್ ರೈ,   ಯತಿರಾಜ್ , ಸಂಕಲ್ಪ್, ರವಿ, ಗಿರಿಧರ್, ಹರೀಶ್ ಅರಸು, ಇಂಚರ, ಜ್ಯೋತಿ ಮುರೂರ್ ಅಭಿನಯಿಸುತ್ತಿದ್ದಾರೆ. ರಾಘವ್ ಸುಭಾಷ್ ಸಂಗೀತ ನೀಡಿದ್ದು, ಸತೀಶ್ ಚಂದ್ರಯ್ಯ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. MMM ಗ್ರೂಪ್ ನವರು  ಪೋಸ್ಟರ್ಸ್ ಸೇರಿದಂತೆ ಪ್ರಚಾರದ ಜವಾಬ್ದಾರಿ ಹೊತ್ತಿದ್ದಾರೆ.

- Advertisement -

Latest Posts

Don't Miss