ಅವರಿಬ್ಬರು ಮೈದಾನದಲ್ಲಿ ಎದುರಾದ್ರು ಅಂದ್ರೆ, ಅಲ್ಲಿ ಹೈ ವೋಲ್ಟೇಜ್ ಕ್ರಿಯೇಟ್ ಆಗ್ತಿತ್ತು.. ಕ್ರಿಕೆಟ್ ಮೈದಾನವನ್ನೇ ರಣರಂಗ ಮಾಡಿಕೊಳ್ಳುತ್ತಿದ್ರು. ಸದ್ಯ ಇಬ್ಬರು ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರಾದ್ರು, ಇವರಿಬ್ಬರ ನಡುವಿನ ವಾಗ್ಯುದ್ದ ಮಾತ್ರ ಇನ್ನೂ ನಿಂತಿಲ್ಲ. ಆಗಿಂದಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇವರಿಬ್ಬರ ವಾರ್, ನೋಡುಗರಿಗೆ ಸಖತ್ ಖುಷಿ ನೀಡುತ್ತೆ. ಹೌದು..ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕ್ ಮಾಜಿ ಕ್ರಿಕೆಟರ್ ಬಾಯಿ ಬಿಟ್ಟಿದ್ದೇ ತಡ, ಇತ್ತ ಟೀಮ್ ಇಂಡಿಯಾ ಮಾಜಿ ಓಪನರ್ ಗೌತಮ್ ಗಂಭೀರ, ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುವವರಂತೆ, ಸದಾ ವಿವಾದಾತ್ಮ ಹೇಳಿಕೆಗಳನ್ನು ನೀಡುತ್ತ ಬಂದಿರುವ ಪಾಕ್ನ ಮಾಜಿ ಕ್ರಿಕೆಟರ್ ಶಾಹಿದಿ ಆಫ್ರಿದಿಗೆ, ದೆಹಲಿ ಸಂಸದ ಗೌತಮ್ ಗಂಭೀರ್ ಟ್ವೀಟರ್ನಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಆರ್ಟಿಕಲ್ 370 ಕಾಯ್ದೆ ರದ್ದು ಮಾಡಿದ ಹಿನ್ನೆಲೆಯಲ್ಲಿ ಟ್ವೀಟ್ ಒಂದನ್ನ ಮಾಡಿದ್ದ ಆಫ್ರಿದಿ, ವಿಶ್ವಸಂಸ್ಥೆ ನಿದ್ದೆ ಮಾಡುತ್ತಿದೆಯಾ ಅಂತ ಪ್ರಶ್ನಿಸಿದ್ರು. ಅಷ್ಟೇ ಅಲ್ಲದೇ “ಭಾರತ ಸರ್ಕಾರ ಇಂತಹ ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡುತ್ತಿರುವಾಗ ವಿಶ್ವ ಸಂಸ್ಥೆ ಏನೂ ಮಾಡುತ್ತಿದೆ ಅಂತ ವಿಶ್ವಸಂಸ್ಥೆಯನ್ನು ಕೇಳುವ ಮೂಲಕ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೋಪವನ್ನು ಹೊರ ಹಾಕಿದ್ದರು.
ಆಫ್ರಿಧಿ ಮಾಡಿದ್ದ ಪೋಸ್ಟ್ ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇನ್ನೂ ಶಾಹಿದಿ ಆಫ್ರಿದಿ ಟ್ವೀಟ್ಗೆ, ಟ್ವಿಟರ್ ಮೂಲಕವೇ ಉತ್ತರಿಸಿದ ಮಾಜಿ ಕ್ರಿಕೆಟಿಗ ಹಾಲಿ ಬಿಜೆಪಿ ಸಂಸದ ಗಂಭೀರ್, “ಅಲ್ಲಿ ಮಾನವೀಯತೆಯ ವಿರುದ್ಧದ ಅಪ್ರಚೋದಿತ ಆಕ್ರಮಣ ಮತ್ತು ಅಪರಾಧಗಳು ನಡೆಯುತ್ತಿವೆ. ಈ ಸಂಗತಿಯನ್ನು ಎತ್ತಿ ಹಿಡಿದಕ್ಕಾಗಿ ಆಫ್ರಿದಿಯನ್ನು ಶ್ಲಾಘಿಸಬೇಕು. ಆದ್ರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೆಲ್ಲವೂ ನಡೆಯುತ್ತಿದೆ ಎಂದು ನಮೂದಿಸುವುದನ್ನು ಆಫ್ರಿದಿ ಮರೆತಿದ್ದಾರೆ. ಚಿಂತಿಸಬೇಡ ಮಗನೇ ನಾವು ಪಿಓಕೆಯನ್ನು ವಿಂಗಡಣೆ ಮಾಡಿ ಎಲ್ಲವನ್ನು ಸರಿ ಮಾಡ್ತೇವೆ ಅಂತ ಗೌತಮ್ ಗಂಭೀರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.