Saturday, July 27, 2024

Latest Posts

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌- ಶಾಲು ಧರಿಸುವಂತಿಲ್ಲ- ಹೈಕೋರ್ಟ್..

- Advertisement -

ಶಾಲಾ- ಕಾಲೇಜುಗಳಲ್ಲಿ ಹಿಜಾಬ್- ಶಾಲು ಧರಿಸುವಂತಿಲ್ಲ. ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತು ಬಳಸುವಂತಿಲ್ಲ ಎಂದು ಹೈಕೋರ್ಟ್ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಮುಂದಿನ ವಿಚಾರಣೆ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.

ಹಿಜಾಬ್ ವಿವಾದದ ಬಗ್ಗೆ ಕೋರ್ಟ್ ಮೌಖಿಕ ಆದೇಶ ನೀಡಿದ್ದು, ಶಾಲಾ-ಕಾಲೇಜು ಶುರು ಮಾಡಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಲಾಗಿದೆ. ಕ್ಲಾಸ್ ಯಥಾಪ್ರಕಾರ ನಡೆಯಬೇಕು. ಧಾರ್ಮಿಕ ಗುರುತುಗಳನ್ನ ಬಳಸಬಾರದು ಎಂದು ಹೈಕೋರ್ಟ್ ಸಿಜೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಮೂಲಕ ಹಿಜಾಬ್ ಮತ್ತು ಕೇಸರಿ ಶಾಲು ಪೈಪೋಟಿಗೆ ಹೈಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದೆ.

ಇನ್ನು ಈ ವಿಷಯ ಕುರಿತಂತೆ ಸಿಎಂ ಬೊಮ್ಮಾಯಿ 6 ಗಂಟೆಗೆ ಸಭೆ ಕರೆದಿದ್ದು, ಶಾಲಾ- ಕಾಲೇಜು ಶುರು ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಶಾಲಾ- ಕಾಲೇಜಿನಲ್ಲಿ ಸಂಭ್ರಮಾಚರಣೆ ಅಥವಾ ಪ್ರತಿಭಟನೆ ನಡೆಯದಂತೆ ಪೊಲೀಸರ ಜೊತೆ ಕೂಡ ಚರ್ಚೆ ನಡೆಸುವ ಸಂಭವವಿದೆ.

- Advertisement -

Latest Posts

Don't Miss