Saturday, March 2, 2024

Latest Posts

ಖರ್ಗೆಯನ್ನು ಹಾಡಿ ಹೊಗಳಿದ ಸಿಎಂ- ಸಿದ್ದುಗೆ ಎಚ್ಡಿಕೆ ಪರೋಕ್ಷ ಟಾಂಗ್

- Advertisement -

ಕಲಬುರಗಿ: ರಾಜಕೀಯ ಅನುಭವ ನೋಡಿದ್ರೆ ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು ಅಂತ ಸಿಎಂ ಕುಮಾರಸ್ವಾಮಿ ಮಲ್ಲಿಕಾರ್ಜುನ ಖರ್ಗೆಯವರನ್ನ ಹಾಡಿ ಹೊಗಳಿದ್ದಾರೆ.

ಪದೇ ಪದೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅನ್ನೋ ಮಾತು ಕೇಳಿಬರುತ್ತಿರೋ ಮಧ್ಯೆ ಇದೀಗ ಖರ್ಗೆ ಸಿಎಂ ಆಗಬೇಕು ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಿಎಂ ಕುಮಾರಸ್ವಾಮಿ  ಕೂಡ ಪುಷ್ಟಿ ನೀಡೋ ರೀತಿಯಲ್ಲಿ ಮಾತನಾಡಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಮೈತ್ರಿ ಅಭ್ಯರ್ಥಿ ರಾಠೋಡ್ ಪರ ಪ್ರಚಾರದ ವೇಳೆ ಮಾತನಾಡಿದ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಈ ಭಾಗದ ಮಹಾನ್ ನಾಯಕ. ರಾಜಕೀಯ ಅನುಭವ ನೋಡಿದ್ರೆ ಅವರು ಎಂದೋ ಸಿಎಂ ಆಗಬೇಕಿತ್ತು. ಆದ್ರೆ ರಾಜಕೀಯ ಕಾರಣಗಳಿಂದ ಖರ್ಗೆ ಸಿಎಂ ಆಗಲಿಲ್ಲ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ರು. ಈ ಮೂಲಕ ಸಿದ್ದರಾಮಯ್ಯಗೆ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

- Advertisement -

Latest Posts

Don't Miss