Saturday, July 27, 2024

Latest Posts

ಮಣ್ಣುಪಾಲಾಯ್ತು ನೂರಾರು ಲೀಟರ್ ಹಾಲು- ಹೀಗೆ ಮಾಡಿದ್ದೇಕೆ ಗೊತ್ತಾ?

- Advertisement -

ತುಮಕೂರು: ಹಾಲು ಉತ್ಪಾದಕರ ಸಂಘದ ರಾಜಕಾರಣಕ್ಕೆ ಸುಮಾರು 200 ಲೀಟರ್ ಹಾಲು ಮಣ್ಣುಪಾಲಾದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಹಾಲು ಡೈರಿಯಲ್ಲಿ ಸಿಬ್ಬಂದಿ ತಡವಾಗಿ ಬಂದದ್ದೇ ಈ ಘಟನೆಗೆ ಕಾರಣವಾಗಿದೆ. ಅಂದಹಾಗೆ ಈ ಹಾಲು ಉತ್ಪಾದಕರ ಸಂಘದಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ರು. ಆದ್ರೆ ಇಂದು ಓರ್ವ ಸಿಬ್ಬಂದಿ ತಡವಾಗಿ ಬಂದಿದ್ರು. ಹೀಗಾಗಿ ಸಿಬ್ಬಂದಿ ಅಲ್ಲದ ಅನಧಿಕೃತ ವ್ಯಕ್ತಿಯೊಬ್ಬರು ರೈತರಿಂದ ಹಾಲು ಸ್ವೀಕರಿಸಲು ಮುಂದಾಗಿದ್ರು. ಇದನ್ನು ಪ್ರಶ್ನಿಸಿದ ರೈತ ಧನಂಜಯ ಮತ್ತು ಆ ವ್ಯಕ್ತಿ ಜೊತೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ನೀವು ತಂದಿರೋ ಹಾಲು ಯಾರಿಗೂ ಬೇಡ ಅದನ್ನು ಚೆಲ್ಲಿಬಿಡಿ ಅಂತ ಹೇಳಿದ್ದನೆಂದು ಆರೋಪಿಸಿ ರೈತರು ಹಾಲನ್ನೆಲ್ಲಾ ನೆಲಕ್ಕೆ ಸುರಿದರು. ಸುಮಾರು 200 ಲೀಟರ್ ನಷ್ಟು ಹಾಲು ನೆಲಕ್ಕೆ ಚೆಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ರು.

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ-

- Advertisement -

Latest Posts

Don't Miss