ಹುಬ್ಬಳ್ಳಿ : ಲೋಕಸಭೆಯಲ್ಲಿ ದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿಗೆ ಹೆಚ್ಚಿಗೆ ಸ್ಥಾನ ಬರುತ್ತದೆ. ಸೂರ್ಯ ಚಂದ್ರಿರುವಷ್ಟೇ ಸತ್ಯ ಮೋದಿ ಪ್ರಧಾನಿ ಆಗ್ತಾರೆ ಅಂತ ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರೇಂದ್ರ ಪಾಟೀಲ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಿ ಕಾಂಗ್ರೆಸ್ ವಿಶ್ವಾಸ ದ್ರೋಹ ಮಾಡಿದೆ ಹೀಗಾಗಿ ವೀರಶೈವರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಲ್ಲ ಅಂತ ಹೇಳಿದ್ರು. ಜೊತೆ ಇಂದು ಬಹಿರಂಗ ಪ್ರಚಾರ ಅಂತ್ಯ ಹಿನ್ನೆಲೆ ಸಂಜೆ ನಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿರುವ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರನ್ನ ಕ್ಷೇತ್ರದಿಂದ ಹೊರ ಹೋಗುವಂತೆ ಸೂಚಿಸಿದ್ದೇನೆ ಅಂತ ಹೇಳಿದ್ರು.
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಟ್ವೀಟರ್ ಮುಖಾಂತರ ಕಚ್ಚಾಟ ನಡೆಸಿ, ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಅಭ್ಯರ್ಥಿಗಳು 290/ಸ್ಥಾನಗಳಲ್ಲಿ ಜಯ ಗಳಿಸ್ತಾರೆ. NDA ಒಟ್ಟಾರೆ 350 ಸ್ಥಾನ ಗಳಿಸಲಿದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಅಂತ ಹೇಳಿದ್ರು.
ಎರಡು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ತಾರೆ ಈ ಮೈತ್ರಿ ಸರ್ಕಾರ ಬಹಳ ದಿನ ಇರೋದಿಲ್ಲ ಅಂತ ಹಳೆ ಶೈಲಿಯಲ್ಲೇ ಸರ್ಕಾರ ಬೀಳುತ್ತೆ ಅಂತ ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು.