ಪದೇ ಪದೇ ಸಿದ್ದರಾಮಯ್ಯ ವಿಚಾರವಾಗಿ ವ್ಯಂಗ್ಯ ಮಾಡೋ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಗೆ ಸಿದ್ದಾರಮಯ್ಯ ಟ್ವೀಟ್ ಮಾಡೋ ಮೂಲಕ ಟಾಂಗ್ ನೀಡಿದ್ದಾರೆ. ಅಲ್ಲದೆ ಇಷ್ಟೂ ದಿವಸ ಜೆಡಿಎಸ್ ಬಗ್ಗೆ ಬಾಯ್ಬಿಚ್ಚದೆ ತಾಳ್ಮೆಯಿಂದಿದ್ದ ಸಿದ್ದು ಇದೀಗ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿಕಟ್ಟಿಹಾಕಿದೆ. ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲಾರೆ.ವಿಶ್ವನಾಥ್ ಕಿಡಿಗೇಡಿತನದ ಹೇಳಿಕೆಗೆ ಕುಖ್ಯಾತರು. ಅವರಿಗೆ ದೇವ್ರು ಒಳ್ಳೆ ಬುದ್ಧಿ ಕೊಡಲಿ. ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನ ನಾನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿದೇವೇಗೌಡ, ಈಗ ವಿಶ್ವನಾಥ್, ಮುಂದೆ ಯಾರು ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿ ನೀಡೋ ಇಂತಹ ಹೇಳಿಕೆಗಳ ಬಗ್ಗೆ ಜೆಡಿಎಸ್ ಗಮನಹರಿಸಿದರೆ ಒಳ್ಳೆದು ಅಂತ ಟ್ವೀಟ್ ಮಾಡೋ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದು ನಾನೇ ಮತ್ತೆ ಸಿಎಂ ಅನ್ನೋದು ಬಾಯಿಚಪಲಕ್ಕೆ