Saturday, July 27, 2024

Latest Posts

ಲಾಕ್‌ಡೌನ್‌ಗೂ ಮೊದಲು ಮತ್ತು ನಂತರವೂ ಲಾಭ ಕಾಣುತ್ತಿರುವ ಉದ್ಯಮಗಳಿವು..!

- Advertisement -

ಜನ ಹಲವಾರು ಬ್ಯುಸಿನೆಸ್‌ಗಳನ್ನು ಮಾಡಲು ಹೋಗುತ್ತಾರೆ. ಆದ್ರೆ ಹಾಕಿದ ಬಂಡವಾಳಕ್ಕೆ ತಕ್ಕಂತೆ ಲಾಭ ಬರತ್ತಾ..? ಬರದಿದ್ರೆ ಏನಪ್ಪಾ ಮಾಡೋದು..?.. ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸುತ್ತದೆ. ಅದರಲ್ಲೂ ಈ ಕೊರೊನಾ ಲಾಕ್‌ಡೌನ್ ಎಲ್ಲ ಬಂದು ಎಲ್ಲದರಲ್ಲೂ ಲಾಸ್ ಆಗ್ತಿದೆಯಲ್ಲ..? ಯಾವ ಬ್ಯುಸಿನೆಸ್ ಕೂಡ ಪರ್ಮನೆಂಟ್ ಅಲ್ಲ. ಎಲ್ಲವೂ ಮುಳುಗಿಹೋಗೋದೇ ಅಂತಾ ನೀವು ತಿಳಿದುಕೊಂಡಿದ್ರೆ ಅದು ತಪ್ಪು.

ಲಾಕ್‌ಡೌನ್ ಮುಗಿಯೋಕ್ಕೂ ಮುನ್ನ ಮತ್ತು ಲಾಕ್‌ಡೌನ್‌ ನಡೆದ ಮೇಲೂ ಪಟ್ ಅಂತಾ ಸುಧಾರಿಸಿ, ಲಾಭ ತಂದುಕೊಡೋ ಉದ್ಯಮ ಅಂದ್ರೆ, ಹಣ್ಣು- ತರಕಾರಿ ಮಾರಾಟ, ದಿನಸಿ ಮಾರಾಟ, ಕೃಷಿ, ಸಲೂನ್ ಶಾಪ್, ಚಾಟ್ಸ್ ಬ್ಯುಸಿನೆಸ್ ಮತ್ತು ಮನೆ ಬಾಡಿಗೆ ಕೊಡುವುದು.

ಹೌದು.. ನೀವೂ ಗಮನಿಸಿರಬಹುದು. ಲಾಕ್‌ಡೌನ್ ಸಂದರ್ಭದಲ್ಲಿ ಜನ ಹೆಚ್ಚು ಟೆನ್ಶನ್ ತೊಕೊಂಡಿದ್ದು, ಹಣ್ಣು ತರಕಾರಿ ದಿನಸಿ ಸಲುವಾಗಿ. ಎಲ್ಲದಕ್ಕೂ ಮಾಲ್ , ಆನ್‌ಲೈನ್ ಶಾಪಿಂಗ್ ಎನ್ನುವವರು ಲಾಕ್‌ಡೌನ್ ವೇಳೆ, ಫ್ರೆಶ್ ತರಕಾರಿ ಹಣ್ಣು ನಮಗೆ ಸಿಗತ್ತಲ್ವಾ..? ಹತ್ತಿರದಲ್ಲೆಲ್ಲಾದ್ರೂ ದಿನಸಿ ಅಂಗಡಿ ಇದೆಯಾ..? ಅಂತಾ ಕೇಳಿದ್ರು.

ಅದೂ ಅಲ್ದೇ ನಮ್ ಗಂಡ್‌ ಹೈಕ್ಳು, ಗಡ್ಡ- ಕೂದಲು ಎಷ್ಟು ಉದ್ದವಾಗಿ ಬೆಳೆದಿದೆ, ಈ ಲಾಕ್‌ಡೌನ್ ಮುಗ್ದು, ಅದ್ಯಾವಾಗ ಹೇರ್ ಕಟಿಂಗ್ , ಶೇವಿಂಗ್ ಮಾಡಿಸ್ತೀವೋ ಅಂತಾ ಕಾಯ್ತಿದ್ರು. ಇನ್ನು ಒಮ್ಮೆ ಬಾಡಿಗೆಗೆ ಮನೆ ತೆಗೆದುಕೊಂಡು ಬಿಟ್ರೆ, ನೀವೂ ಆ ಮನೆಯಲಿ ಇರಲಿ, ಬಿಡಲಿ ಓನರ್‌ಗೆ ಬಾಡಿಗೆ ಅಂತೂ ಕೊಡ್ಲೇ ಬೇಕು. ಇನ್ನು ಎಲ್ಲಕಿಂತ ಮುಖ್ಯವಾಗಿ ಲಾಕ್ಡೌನ್ ಮುಗಿದ ಮೇಲೆ ಜನ ಫಸ್ಟ್ ಓಡಿದ್ದೇ ಪಾನೀಪುರಿ ತಿನ್ನೋಕ್ಕೆ. ಅದರಲ್ಲೂ ಮಳೆಗಾಲದಲ್ಲಿ ಜನರ ಬಾಯ್ ರುಚಿನಾ ಕೇಳ್ಬೇಕಾ..? ಬಜ್ಜಿ ಬೋಂಡಾ, ಸಮೋಸಾ ಕಚೋರಿ ಒಂದಾದ ಮೇಲೋಂದು ಚಾಟ್ಸ್ ಟೇಸ್ಟ್ ಮಾಡಿದ್ರು.

ಕೊನೆಯದಾಗಿ ಲಾಕ್‌ಡೌನ್ ಟೈಮಲ್ಲಿ ರೈತನ ಬೆಲೆ ಏನು ಅನ್ನೋದು ನಮ್ಮ ಜನರಿಗೆ ಗೊತ್ತಾಯ್ತು. ಎಷ್ಟೇ ದುಡ್ಡು ದೌಲತ್ತು ಇದ್ರು, ಹೊಟ್ಟೆಗೆ ತಿನ್ನೋಕ್ಕೆ ಅನ್ನಾನೇ ಬೇಕು ಅನ್ನೋದು ಗೊತ್ತಾಗೋಕ್ಕೆ ಕೊರೊನಾನೇ ಬರಬೇಕಾಯ್ತು.

ಹೀಗಾಗಿ ಈ ಎಲ್ಲ ಉದ್ಯಮಗಳು ಹಿಂದೆ, ಇಂದು, ಮತ್ತೆ ಮುಂದಿನ ದಿನಗಳಲ್ಲೂ ಲಾಸ್ ಕಾಣದ ಬ್ಯುಸಿನೆಸ್‌ಗಳು ಎನ್ನಬಹುದು. ಆದ್ರೆ ಮನೆ ಬಾಡಿಗೆ ಕೊಡಲು ಹೊರಡುವ ಮುನ್ನ ಆ ಮನೆ ನಗರ ಪಾಲಿಕೆಗೆ ಸೇರುವುದಿಲ್ಲವೆಂದು ಖಾತ್ರಿ ಮಾಡಿಕೊಳ್ಳಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಲೋನ್ ಅಪ್ಲೈ ಮಾಡೋದು ಹೇಗೆ..? ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಾಭ ಪಡೆಯೋದು ಹೀಗೆ..? ಯಾವ ಬ್ಯಾಂಕ್ ಸೇಫ್ ಅಲ್ಲ..? ಎಲ್ಲಾ ರೀತಿಯ ಹಣಕಾಸಿನ ಮಾಹಿತಿಗಾಗಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..

https://indianmoney.com/ffc

- Advertisement -

Latest Posts

Don't Miss