Thursday, June 13, 2024

Latest Posts

ಇಂದು ಭಾರತ – ಜಿಂಬಾಬ್ವೆ  3ನೇ ಕದನ :ರಾಹುಲ್ ಪಡೆಗೆ ಕ್ಲೀನ್‍ಸ್ವೀಪ್ ಗುರಿ

- Advertisement -

ಹರಾರೆ:  ಗೆಲುವಿನ ಓಟ ಮುಂದುವರೆಸಿರುವ ಟೀಮ್ ಇಂಡಿಯಾ ಇಂದು ಆತಿಥೇಯ ಜಿಂಬಾಬ್ವೆ ವಿರುದ್ಧ  ಮೂರನೆ ಏಕದಿನ ಪಂದ್ಯದಲ್ಲಿ ಸೆಣಸಲಿದ್ದು ಕ್ಲೀನ್ ಸ್ವೀಪ್ ಮಾಡಲು ನಿರ್ಧರಿಸಿದೆ.

ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಈಗಾಗಲೇ ಸರಣಿ ಗೆದ್ದಿರುವ ಭಾರತ ತಂಡ ಮುಂದಿನ ಏಕದಿನ ವಿಶ್ವಕಪ್ ದೃಷ್ಟಿಯಿಂದ ಇಂದಿನ ಪಂದ್ಯದಲ್ಲಿ  ಪ್ರಯೋಗ ಮಾಡಲಿದೆ.

ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಯುವ ಆಟಗಾರರಿಗೆ ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಶುಭಮನ್ ಗಿಲ್ ಈವರೆಗೂ ಸರಣಿಯಲ್ಲಿ ಏನು ಮಾಡಿದ್ದಾರೆ ಅನ್ನೊದನ್ನು ನೋಡುವ ಬದಲು ಮತ್ತೊಂದು ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ.   ನಾಯಕ ರಾಹುಲ್ ಮತ್ತೆ ಆರಂಭಿಕರಾಗಿ ಕಣಕ್ಕಿಳಿದು ತಮ್ಮನ್ನು ತಾವು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಬೇಕಿದೆ. ಮೊನ್ನೆ 9 ಎಸೆತ ಎದುರಿಸಿ ಕೇವಲ 1 ರನ್ ಹೊಡೆದರು.

ಇನ್ನು ತಾರಾ ಬೌಲರ್‍ಗಳ ಅನುಪಸ್ಥಿತಿಯಲ್ಲಿ  ದೀಪಕ್ ಚಾಹರ್, ಮೊಹಮದ್ ಸೀರಾಜ್, ಶಾರ್ದೂಲ್ ಠಾಕೂರ್, ಪ್ರಸಿದ್ಧ ಕೃಷ್ಣ ಮತ್ತು ಅಕ್ಷರ್ ಪಟೇಲ್ ಅದ್ಭುತ  ಬೌಲಿಂಗ್ ಪ್ರದರ್ಶಿಸಿದ್ದಾರೆ.

ಗೆಲುವಿನ ಹುಡುಕಾಟದಲ್ಲಿ  ಆತಿಥೇಯರು

ಇನ್ನು ಆತಿಥೇಯ ಜಿಂಬಾಬ್ವೆ ತಂಡ ಕಳೆದ ಎರಡೂ ಪಂದ್ಯಗಳಲ್ಲಿ ಸೋಲಲು ಬ್ಯಾಟಿಂಗ್ ವೈಫಲ್ಯ ಕಾರಣವಾಗಿದೆ. ಬ್ಯಾಟಿಂಗ್ ವೈಫಲ್ಯಕ್ಕೆ ಪರಿಹಾರ ಹುಡುಕಬೇಕಿದೆ.  ಇನ್ನು ಬೌಲರ್‍ಗಳು ಭಾರತ ಬ್ಯಾಟರ್‍ಗಳನ್ನು ಕಟ್ಟಿಹಾಕುವಲ್ಲಿ ಎಡವುತ್ತಾ ಬಂದಿದ್ದಾರೆ. ಮೊದಲ ಪಂದ್ಯಕ್ಕಿಂತ ಎರಡನೆ ಪಂದ್ಯದಲ್ಲಿ ಸೋಲಿನ ಅಂತರವನ್ನು ಕಡಿಮೆ ಮಾಡಬಹುದಿತ್ತು. ಅಂತಿಮ ಪಂದ್ಯದಲ್ಲಿ ಸಾಮರ್ಥ್ಯ ಮೀರಿ ಆಡಬೇಕಿದೆ.

ತಂಡದ ಅತ್ಯುತ್ತಮ ಬ್ಯಾಟರ್‍ಗಳಾದ ಸಿಖಂದರ್ ರಜಾ ಹಾಗು ಸಿಯಾನ್ ವಿಲಿಯಮ್ಸ ಅವರನ್ನು  ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕಿದೆ.

ತಂಡಗಳು

ಭಾರತ ತಂಡ : ಕೆ.ಎಲ್.ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದಿಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹ್ಮದ್ ಸಿರಾಜ್, ದೀಪಕ್ ಚಾಹರ್, ಶಾಬಾಜ್ ಅಹ್ಮದ್.

ಜಿಂಬಾಬ್ವೆ :  ರೆಗಿಸ್ ಚಕಬ್ವ (ನಾಯಕ), ರಿಯಾನ್ ಬರ್ಲ, ತನಕಾ ಚಿಚಂಗಾ, ಬ್ರಾಡ್ಲಿ ಇವಾನ್ಸ್‍, ಲ್ಯೂಕ್ ಜೊಂಗ್ವೆ, ಇನೋ ಸೆಂಟ್ ಕೈಯಾ, ತಕುಸ್ಜ್ವಾನಾಶೆ ಕೈಟಾನೊ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರ, ಟೋನಿ ಮುನ್ಯೊಂಗಾ, ರಿಚರ್ಡ್ ನಾಗರವ, ವಿಕ್ಟರ್ ನ್ಯುಚಿ, ಸಿಖಂದರ್ ರಜಾ, ಮಿಲ್ಟನ್ ಶುಂಬಾ, ಡೋನಾಲ್ಡ್ ತಿರಿಪಾನೊ. 

 

 

 

 

 

- Advertisement -

Latest Posts

Don't Miss