Sunday, May 26, 2024

Latest Posts

ಕದ್ರಿ ಮಂಜುನಾಥ ದೇವಸ್ಥಾನ ಸ್ಥಾಪನೆಯಾಗಿದ್ದು ಹೇಗೆ..? ಯಾರಿಂದ..?

- Advertisement -

ದಕ್ಷಿಣ ಕನ್ನಡ ಅಂದ್ರೇನೆ ದೇವಾಲಯಗಳ ಬೀಡು. ಈಗಾಗಲೇ ನಾವು ಕಟೀಲು, ಬಪ್ಪನಾಡು ದುರ್ಗ ಪರಮೇಶ್ವರಿ ಸೇರಿ ಹಲವು ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ಕೂಡ ನಾವು ನಿಮಗೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಮಂಜುನಾಥ ಸ್ವಾಮಿ ದೇವಸ್ಥಾನ ಅಂದ್ರೆ ನಮಗೆ ಮೊದಲು ನೆನಪಿಗೆ ಬರೋದೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ. ಆದ್ರೆ ಇದೇ ಮಂಜುನಾಥ ಸ್ವಾಮಿ ಮೊದಲು ನೆಲೆಸಿದ್ದು, ಕದ್ರಿಯಲ್ಲಿ. ನಂತರ ವಾದಿರಾಜರು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನಿಗೆ ಸೇರಿದ್ದ ಲಿಂಗವನ್ನ ಕದ್ರಿಯಿಂದ, ಧರ್ಮಸ್ಥಳಕ್ಕೆ ತಂದು ಪ್ರತಿಷ್ಠಾಪಿಸಿದರು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ.

ಸುವರ್ಣ ಕದಳಿ ವನವಾಗಿದ್ದ ಕದ್ರಿ, ದಕ್ಷಿಣ ಕನ್ನಡದ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಹಲವು ದೇವಸ್ಥಾನಗಳು ಸ್ಥಾಪನೆಯಾಗುವಲ್ಲಿ ಪರಶುರಾಮರು ಕಾರಣರಾಗಿದ್ದಾರೆ. ಪರಶುರಾಮರೆಂದರೇ ಕೋಪಾಗ್ನಿಗೆ ಸಮ. ಇಂಥ ಪರಶುರಾಮರಿಂದ ಭೂಮಿಯನ್ನ ಉಳಿಸಲು, ದೇವತೆಗಳು ಕೌಶಿಕ ಮುನಿಯ ಮೊರೆ ಹೋದರು. ಆಗ ಕೌಶಿಕ ಮುನಿಗಳು ಪರಶುರಾಮನ ಬಳಿ ಇಡೀ ಭೂಮಂಡಲವನ್ನ ತನಗೆ ದಾನವಾಗಿ ನೀಡಬೇಕು ಎಂದು ಹೇಳಿದರು. ದಾನ ನೀಡಲು ಒಪ್ಪಿದ ಪರಶುರಾಮನಿಗೆ ಉಳಿದುಕೊಳ್ಳಲು ಜಾಗವಿಲ್ಲದಂತಾಯಿತು.

ನಂತರ ಪರಶುರಾಮರು ಶಿವನನ್ನು ಕುರಿತು ಘೋರ ತಪಸ್ಸು ಮಾಡುತ್ತಾರೆ. ಪ್ರತ್ಯಕ್ಷನಾದ ಶಿವ ಕದ್ರಿಯಲ್ಲಿ ದೇವಸ್ಥಾನ ಕಟ್ಟಲು ಹೇಳಿ, ತಾನು ಅಲ್ಲಿ ಬಂದು ನೆಲೆಸುವುದಾಗಿ ಹೇಳುತ್ತಾನೆ. ಶಿವನ ಮಾತಿನಂತೆ ಸಮುದ್ರ ದೇವನ ಜೊತೆ ಹೋರಾಡಿ, ವಿಶ್ವಕರ್ಮರ ಸಹಾಯದಿಂದ ಸುವರ್ಣ ಕದಳಿ ವನದಲ್ಲಿ ಶಿವನಿಗಾಗಿ ದೇವಸ್ಥಾನ ಸ್ಥಾಪಿಸಿ, ಲಿಂಗ ಪ್ರತಿಷ್ಠಾಪಿಸುತ್ತಾನೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss