Saturday, July 27, 2024

Latest Posts

ಮುರ್ಡೇಶ್ವರ ಪುಣ್ಯಕ್ಷೇತ್ರದ ಪುರಾಣ ಕಥೆ..

- Advertisement -

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಮತ್ತು, ಪ್ರವಾಸಿ ತಾಣಗಳಲ್ಲಿ ಮುರ್ಡೇಶ್ವರ ಕೂಡ ಒಂದು. ಇಲ್ಲಿರುವ ಶಿವನ ಮೂರ್ತಿ ಏಷ್ಯಾದಲ್ಲೇ ಅತೀ ದೊಡ್ಡ ಶಿವಮೂರ್ತಿ. ಈ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಲಂಕಾಪತಿ ರಾವಣನ ತಾಯಿ ಶಿವನ ಪರಮ ಭಕ್ತೆಯಾಗಿರುತ್ತಾಳೆ. ಆಕೆಗಾಗಿ ರಾವಣ ಶಿವನ ಆತ್ಮಲಿಂಗ ತರಲು ಶಿವನಿಗಾಗಿ ಘೋರ ತಪಸ್ಸು ಮಾಡುತ್ತಾನೆ. ರಾವಣನ ಭಕ್ತಿಗೆ ಒಲಿದ ಶಿವನು ತನ್ನ ಆತ್ಮಲಿಂಗವನ್ನ ರಾವಣನಿಗೆ ನೀಡುತ್ತಾರೆ. ಆದ್ರೆ ಆ ಆತ್ಮಲಿಂಗವನ್ನ ನೆಲದ ಮೇಲಿರಿಸಿದರೆ, ಅದು ಮತ್ತೆ ಎತ್ತುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೇಳಿರುತ್ತಾನೆ.

ರಾವಣ ಆತ್ಮಲಿಂಗ ಪಡೆದು ಬರುವಾರ ಸಂಜೆಯಾಗುತ್ತದೆ. ರಾವಣನಿಗೆ ಸಂಧ್ಯಾ ವಂದನೆ ಮಾಡಬೇಕಾಗಿರುತ್ತದೆ. ಕೈಯಲ್ಲಿದ್ದ ಲಿಂಗವನ್ನ ನೆಲಕ್ಕಿಡುವಂತಿಲ್ಲ. ಹಾಗಾಗಿ ಯಾರಾದರೂ ತನ್ನ ಸಹಾಯಕ್ಕೆ ಬರುವರೋ ಎಂದು ಕಾಯುತ್ತಾನೆ. ಆಗ ಶಿವನ ಆತ್ಮಲಿಂಗವನ್ನ ನೆಲಕ್ಕಿರಿಸಲು ಸರಿಯಾದ ಸಮಯವೆಂದು ತಿಳಿದ ಗಣಪತಿ, ವಿಷ್ಣುವಿನ ಆಜ್ಞೆಯಂತೆ ಗೊಲ್ಲನ ವೇಷದಲ್ಲಿ ಬರುತ್ತಾನೆ.

ಗೊಲ್ಲನ ವೇಷದಲ್ಲಿರುವ ಗಣಪನನ್ನು ನೋಡಿದ ರಾವಣ, ತಾನು ಸಂಧ್ಯಾವಂದನೆ ಮಾಡಿ ಬರುವ ತನಕ ಈ ಲಿಂಗವನ್ನ ಕೈಯಲ್ಲೇ ಹಿಡಿ ಎಂದು ಹೇಳುತ್ತಾನೆ. ಅದಕ್ಕೆ ಉತ್ತರಿಸಿದ ಗೊಲ್ಲ, ನಾನು ಮೂರು ಎಣಿಸುವುದರೊಳಗಾಗಿ ಬರಬೇಕು, ಇಲ್ಲದಿದ್ದರೆ ಲಿಂಗವನ್ನು ಇಟ್ಟು ಹೋಗುತ್ತೇನೆ ಎನ್ನುತ್ತಾನೆ.

ಸರಿ ಎಂದ ರಾವಣ ಸಂಧ್ಯಾವಂದನೆಗೆ ತೆರಳುತ್ತಾನೆ. ಗೊಲ್ಲ ಮೂರು ಎಣಿಸಿದರೂ ರಾವಣ ಬರದಿದ್ದಾಗ, ಗೊಲ್ಲ ಲಿಂಗವನ್ನ ನೆಲದ ಮೇಲಿಡುತ್ತಾನೆ. ನಂತರ ರಾವಣ ಆ ಲಿಂಗವನ್ನು ಎತ್ತಲು ಪ್ರಯತ್ನಿಸಿ ಆ ಲಿಂಗ ಗೋವಿನ ಆಕಾರವನ್ನ ಪಡೆದುಕೊಳ್ಳುತ್ತದೆ. ಆ ಸ್ಥಳ ಗೋಕರ್ಣವೆಂಬ ಹೆಸರು ಪಡೆಯುತ್ತದೆ. ನಂತರ ಇನ್ನೂ ಭಾರ ಹಾಕಿದಾಗ ಆ ಲಿಂಗ ಐದು ಭಾಗವಾಗಿ ಒಂದೊಂದು ಲಿಂಗದ ಭಾಗವು 5 ಜಾಗ ಸೇರುತ್ತದೆ. ಆ 5 ಪುಣ್ಯಕ್ಷೇತ್ರಗಳಲ್ಲಿ ಮುರ್ಡೇಶ್ವರ ಕೂಡ ಒಂದು.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss