Saturday, July 27, 2024

Latest Posts

ಕಲಿಯುಗದ ಕೃಷ್ಣ ಶ್ಯಾಂ

- Advertisement -

www.karnatakatv.net : ರಾಯಚೂರು : ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಕೊಳಲನೂದಿ ಹಸುಗಳನ್ನ ಕರೆದರೆ, ಎಲ್ಲಿದ್ದರೂ ಹಸುಗಳು ಓಡೋಡಿ ಬರುತ್ತಿದ್ದವಂತೆ.. ಅಂತೆಯೇ ಈ ಕಲಿಯುಗದಲ್ಲಿ ಒಬ್ಬ ಕೃಷ್ಣನ ಗುಣಗಳನ್ನೇ ಹೋಲುವ ಆತನ ಹೆಸರನ್ನೇ ಇಟ್ಟುಕೊಂಡಿರುವ ಶ್ಯಾಂ ಎನ್ನುವ ವ್ಯಕ್ತಿಯೋರ್ವನಿದ್ದಾನೆ. ಈತನ ಬಳಿಗೂ ನಿತ್ಯ ಹಸುಗಳು ಗುಂಪು ಗುಂಪಾಗಿ ಓಡೋಡಿ ಬರುತ್ತವೆ. ಯಾಕೆ ಏನು ಅಂತೀರಾ.. ಈ ಸ್ಟೋರಿ ನೋಡಿ..

ಅದು ಸ್ಟೀಲ್ ಮತ್ತು ಕಬ್ಬಿಣದ ಅಂಗಡಿ. ಅಲ್ಲಿ ಎತ್ತ ನೋಡಿದರೂ ಗೋವುಗಳು, ಅರೆ ಸ್ಟೀಲ್ ಅಂಗಡಿಯಲ್ಲಿ ಗೋವುಗಳಿಗೆ ಏನು ಕೆಲಸ ಅಂತೀರ. ಅಲ್ಲೇ ಇರೋದು ವಿಶೇಷ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ಎನ್ನುವ ಪಟ್ಟಣದಲ್ಲಿ ಲಕ್ಷ್ಮಿ  ಸ್ಟೀಲ್ ಎನ್ನುವ ಸ್ಟೀಲ್ ಮತ್ತು ಕಬ್ವಿಣದ ಶಾಪ್ ವೊಂದಿದೆ. ಅದರ ಮಾಲೀಕ ಶ್ಯಾಂ.. ಇವರನ್ನ ಕಾಣೋದಕ್ಕೆ ನೇರವಾಗಿ ಈ ಶಾಪ್ ಗೆ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ನೂರಾರು ಹಸುಗಳು ಬೇಟಿ ನೀಡುತ್ತವೆ. ಅಕ್ಕರೆಯಿಂದ ಈತನ ಬಳಿ ಬಂದು ಅವರು‌ನೀಡುವ ಬೆಲ್ಲವನ್ನು ಸವಿದು ಮರಳುತ್ತವೆ.

ಕಳೆದ ೨೦ ವರ್ಷಗಳಿಂದ ಶ್ಯಾಂ ಈ ಕಾಯಕದಲ್ಲಿ ತೊಡಗಿದ್ದಾರೆ. ಮೂಲತಃ ಗುಜರಾತಿನವರಾದ ಶ್ಯಾಂ ಕುಟುಂಬ ಲಿಂಗಸ್ಗೂರಿಗೆ ಬಂದು ಎಂಟತ್ತು ವರ್ಷಗಳಾಗಿದೆ. ಅಲ್ಲಿಂದ ಇಲ್ಲಿಯವರೆಗೆ ದಿನಂಪ್ರತಿ ಗೋವುಗಳಿಗೆ ಅಂತಲೇ ೫ ರಿಂದ ೧೦ ಕೇಜಿಯಷ್ಟು ಬೆಲ್ಲ ನೀಡುತ್ತಿದ್ದಾರೆ. ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನ ಇವರು ಹಸುಗಳಿಗೆ ನೀಡುವ ಬೆಲ್ಲಕ್ಕಾಗಿಯೇ ವೆಚ್ಚ ಮಾಡುತ್ತಾರೆ. ಯಾಕೆ ಹೀಗೆ ಎಂದರೆ ಹಸು ನಮ್ಮ ಹಿಂದೂ ಧರ್ಮದ ಪೂಜ್ಯ ದೇವರು ಎಂಬ ಭಾವನೆಯಿಂದ‌ ಹೀಗೆ ಮಾಡುತ್ತಿರೋದಾಗಿ ಹೇಳುತ್ತಾರೆ. ಇನ್ನು ಇವರ ಕಾರ್ಯಕ್ಕೆ ಕೇವಲ ಗ್ರಾಹಕರು‌ ಮಾತ್ರವಲ್ಲದೇ ಲಿಂಗಸ್ಗೂರಿನ ಜನತೆ ಫಿದಾ ಆಗಿದ್ದಾರೆ. ಒಟ್ನಲ್ಲಿ ಬರೀ ಬಾಯಿ ಮಾತಲ್ಲಿ ಗೋವಿನ ರಕ್ಷಣೆ ಮಾಡ್ತೇವೆ ಅನ್ನುವವರು ಒಮ್ಮೆ ಈ ಸ್ಟೋರಿ ನೋಡಿ. ಶ್ಯಾಂ ರ ಗುಣಗಳನ್ನ ಅಳವಡಿಸಿಕೊಂಡು ಗೂವುಗಳ ಸಂಸತತಿ ಉಳಿವಿಗೆ ಮುಂದಾಗಬೇಕಿದೆ..

ಅನೀಲ್‌ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss