ರಾಜ್ಯದ 28 ಕ್ಷೇತ್ರಗಳಲ್ಲಿ ಯಾರು ಗೆಲ್ತಾರೋ ಯಾರು ಮನೆ ಕಡೆ ಹೆಜ್ಜೆ ಹಾಕ್ತಾರೋ ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಮೇ 23ಕ್ಕಾಗಿಯೇ ರಾಜ್ಯದ ಜನತೆ ಕಾತುರರಾಗಿದ್ದಾರೆ.
ಜಿದ್ದಾಜಿದ್ದಿನ ಕಣವಾಗಿರೋ ಮಂಡ್ಯ, ಹಾಸನ, ತುಮಕೂರು ಸೇರಿದಂತೆ ತೀವ್ರ ಕುತೂಹಲ ಕೆರಳಿಸಿರೋ ಹಲವಾರು ಕ್ಷೇತ್ರಗಳಲ್ಲಿ ಪ್ರಭುವಿಗೆ ಗೆಲ್ಲೋ ಕುದುರೆ ಯಾರು ಅನ್ನೋ ಗೊಂದಲ ಇದ್ದೇ ಇದೆ. ಈ ಬಗ್ಗೆ ಕರ್ನಾಟಕ ಟಿವಿ ನಡೆಸಿರೋ ಸಮೀಕ್ಷೆ ನಡೆಸಿದೆ.
ಸಮೀಕ್ಷೆ ಪ್ರಕಾರ ಬಿಜೆಪಿ ಒಟ್ಟು 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಟ್ಟು 6ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ 4 ಕ್ಷೇತ್ರವನ್ನಷ್ಟೇ ತನ್ನದಾಗಿಸಿಕೊಂಡ್ರೆ. ಇನ್ನು ಜೆಡಿಎಸ್ 2 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇತರೆ/ಸ್ವತಂತ್ರ ಪಕ್ಷ ಕೇವಲ ಒಂದು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಾಜ್ಯದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಯಾರು ಗೆಲುವು ಸಾಧಿಸಿದ್ದಾರೆ ಎನ್ನುವ ಕುರಿತ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ತಪ್ಪದೇ ನೋಡಿ.