Saturday, July 27, 2024

Latest Posts

ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ vs ಬಿಜೆಪಿ ನಡುವೆ ಫೈಟ್

- Advertisement -

ಕಾಸರಗೋಡು : ಕೇರಳದ ಮಂಜೇಶ್ವರ ವಿಧಾನಸಭಾ ಉಪಚುನಾವಣೆ ರಂಗೇರಿದೆ. ಮುಸ್ಲಿಂ ಲೀಗ್ ನಿಂದ ಆಯ್ಕೆಯಾಗಿದ್ದ ಶಾಸಕ ಅಕಾಲಿಕ ನಿಧನದಿಂದ ತೆರವಾಗಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಇದೀಗ ಉಪಚುನಾವಣೆ ನಡೀತಿದ್ದು ಪ್ರಚಾರ ರಂಗೇರಿದೆ. ಕಳೆದ ಬಾರಿ ಮುಸ್ಲಿಂ ಲೀಗ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ನ 87 ಮತಗಳಿಂದ ಸೋಲು ಕಂಡಿದ್ರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಬಾರಿ ಕಾಸರಗೋಡು ವಿಧಾನಸಭೆಯಿಂದ ಸ್ಪರ್ಧೆ ಮಾಡಿ ಸೋತಿದ್ದ ಮಂಗಳೂರಿನ ಜೊತೆ ನಿಕಟ ಸಂಪರ್ಕ ಹೊಂದಿರು ಕುಂಟಾರು ರವೀಶ್ ತಂತ್ರಿ ಬಿಜೆಪಿ ಅಭ್ಯರ್ಥಿ ಯಾಗಿದ್ದಾರೆ. ಶತಾಯಗತಾಯ ಮಂಜೇಶ್ವರ ಕ್ಷೇತ್ರ ಗೆಲ್ಲಲು ಬಿಜೆಪಿ ಪ್ರಚಾರ ಮಾಡ್ತಿದೆ. ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಂಜೇಶ್ಚರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ರು. ಈ ವೇಳೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮನವಿ ಮಾಡಿದ್ರು. ಕೇರಳದಲ್ಲಿ ಎಡಪಕ್ಷ ಅಧಿಕಾರದಲ್ಲಿದ್ರೂ ಮಂಜೇಶ್ವರದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಮುಸ್ಲಿಂ ಲೀಗ್ ಹಾಗೂ ಬಿಜೆಪಿ ನಡುವೆ ತುರಿಸಿನ ಸ್ಪರ್ಧೆ ಇದೆ. ಇಲ್ಲಿ ಕಮ್ಯೂನಿಸ್ಟ್‌ ಪಕ್ಷ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ತಿದೆ. ಈ ಬಾರಿ ಬಿಜೆಪಿ ಮುಸ್ಲಿಂ ಲೀಗ್ ಮಣಿಸಿ ಬಿಜೆಪಿ ಗೆಲುವಿನಪತಾಕೆ ಹಾರಿಸುತ್ತಾ ಕಾದು ನೋಡಬೇಕಿದೆ.

- Advertisement -

Latest Posts

Don't Miss