Saturday, July 27, 2024

Latest Posts

ಟೀ ಟೈಮ್‌ಗೆ ಒಳ್ಳೆ ಜೋಡಿ ಈ ಮಸಾಲೆ ಚುರ್ಮುರಿ..

- Advertisement -

ಚಿಕ್ ಮಕ್ಳಿಂದ ಹಿಡ್ದು ದೊಡ್ಡೋರ ತನಕ ಇಷ್ಟ ಪಟ್ಟು ತಿನ್ನೋ ತಿಂಡಿ ಅಂದ್ರೆ ಅದು ಚುರ್ಮುರಿ. ಚುರ್ಮುರಿ ಉಸ್ಳಿ, ಭೇಲ್ ಪುರಿ, ಮಸಾಲೆ ಮಂಡಕ್ಕಿ ಇವನ್ನೆಲ್ಲಾ ನೆನ್ಸಕೊಂಡ್ರೆನೇ ಬಾಯಲ್ಲಿ ನೀರೂರತ್ತೆ. ಇಂಥ ಕರುಂ ಕುರುಂ ಮಸಾಲೆ ಚುರ್ಮುರಿನಾ ನೀವು ಸಂಜೆ ಟೀ ಟೈಮಲ್ಲಿ ಮನೇಲೇ ರೆಡಿ ಮಾಡ್ಕೊಂಡ್ ತಿಂದ್ರೆ ಅದ್ರ ಮಜಾನೇ ಬೇರೆ.

ಹಾಗಾದ್ರೆ ಮತ್ಯಾಕ್ ತಡಾ ಬನ್ನಿ ಕರುಂ ಕುರುಂ ಮಸಾಲೆ ಚುರ್ಮುರಿ ಮಾಡೋದು ಹೇಗೆ, ಅದನ್ನ ಮಾಡೋಕ್ಕೆ ಏನೇನ್ ಬೇಕು ಅನ್ನೋದನ್ನ ನೋಟ್ ಮಾಡ್ಕೊಳ್ಳಿ.

ಒಂದು ದೊಡ್ಡ ಬೌಲ್‌ ಮಂಡಕ್ಕಿ, ಹುರಿಯಲು 2ರಿಂದ3 ಸ್ಪೂನ್ ಎಣ್ಣೆ, ಒಂದು ಚಿಕ್ಕ ಸ್ಪೂನ್ ಜೀರಿಗೆ, 10 ಎಸಳು ಕರಿಬೇವು, 10 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಹುರಿದಿಟ್ಟುಕೊಂಡ ಶೇಂಗಾ ಮತ್ತು ಹುರಿಗಡಲೆ, ಚಿಟಿಕೆ ಅರಿಶಿಣ, ಚಿಟಿಕೆ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಸಕ್ಕರೆ ಅಥವಾ ಅರ್ಧ ಸ್ಪೂನ್ ಸಕ್ಕರೆ ಪುಡಿ.

ಒಂದು ಬಾಣಲೆಗೆ ಎಣ್ಣೆಹಾಕಿ, ಅದಕ್ಕೆ ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಹಾಕಿ ಹುರಿಯಿರಿ.

ಬೆಳ್ಳುಳ್ಳಿ ಕೊಂಚ ಕಂದು ಬಣ್ಣಕ್ಕೆ ತಿರುಗಿದಾಗ ಅದಕ್ಕೆ ಈಗಾಗಲೇ ಹುರಿದಿರುವ ಶೇಂಗಾ, ಹುರಿಗಡಲೆ ಮಿಶ್ರಣ ಹಾಕಿ ಮತ್ತೆ ಕೊಂಚ ಹುರಿಯಿರಿ.

ಎಲ್ಲ ಚೆನ್ನಾಗಿ ಹುರಿದುಕೊಂಡ ಮೇಲೆ ಅದಕ್ಕೆ ಅರಿಶಿಣ, ಮೆಣಸಿನ ಪುಡಿ, ಕೊಂಚ ಉಪ್ಪು ಹಾಕಿ ಹುರಿದು, ಇದಕ್ಕೆ ಚುರ್ಮುರಿ ಸೇರಿಸಿ, ಮತ್ತೆ ಕೊಂಚ, ಅರಿಶಿನ, ಖಾರದಪುಡಿ, ಉಪ್ಪು ಮತ್ತು ಅರ್ಧ ಸ್ಪೂನ್ ಸಕ್ಕರೆ, ಕೊಂಚ ಎಣ್ಣೆ ಹಾಕಿ 5 ನಿಮಿಷ ಕೈ ಬಿಡದೇ ಚೆನ್ನಾಗಿ ಹುರಿಯಿರಿ. ಈಗ ಕರಂ ಕುರುಂ ಮಸಾಲೆ ಚುರ್ಮುರಿ ರೆಡಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/uTFwkxFtgXM

- Advertisement -

Latest Posts

Don't Miss