Saturday, May 25, 2024

Latest Posts

‘ಕೆಲ ಅಧಿಕಾರಿಗಳು ನನ್ನ ಹೆಸರನ್ನ ಈ ರೀತಿ ದುರ್ಬಳಕೆ ಮಾಡುತ್ತಿದ್ದಾರೆ’

- Advertisement -

ಸಂಸದೆ ಸುಮಲತಾ ಅಂಬರೀಶ್ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದು, ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಅಧಿಕಾರಿಗಳು, ನನ್ನ ಹೆಸರು ಬಳಸಿಕೊಂಡು ಸಕ್ರಮದ ಹೆಸರನ್ನಿಟ್ಟು ಗಣಿಗಾರಿಕೆ ಮಾಡುತ್ತಿದ್ದಾರೆ. ನಿಮಗೇನಾದರೂ ಹಣದ ಬೇಡಿಕೆ ಇಟ್ಟಿದ್ದಲ್ಲಿ ನನ್ನ ಕಚೇರಿಗೆ ನೇರವಾಗಿ ಬಂದು ಈ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ. ಸುಮಲತಾ ಈ ಬಗ್ಗೆ ಬರೆದ ಲೇಖನ ಇಂತಿದೆ..

ಸಂಬಂಧಪಟ್ಟವರ ಗಮನಕ್ಕೆ

ನಾನು ಸಂಸದಳಾಗಿ ಆಯ್ಕೆಯಾದ ದಿನದಿಂದಲೂ ಈವರೆಗೂ ಮಂಡ್ಯ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದೇನೆ.

ಆದರೆ ಇದನ್ನೇ ನೆಪ ಮಾಡಿಕೊಂಡಿರುವ ಕೆಲವು ಅಧಿಕಾರಿಗಳು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಧಿಕೃತವಾಗಿ ಪರವಾನಿಗೆ ಪಡೆದು ಗಣಿಗಾರಿಕೆ ಮಾಡುತ್ತಿರುವ ಸಕ್ರಮ ಗಣಿಗಾರಿಕೆಗಳನ್ನು ಸಹ ತಡೆಯುತ್ತಿದ್ದಾರೆ ಎಂಬ ಸುದ್ದಿ ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ದಿನಾಂಕ 28/01/2022 ರಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ರೀತಿ ವರ್ತಿಸದಂತೆ ಸೂಚಿಸಿರುತ್ತೇನೆ.

ಸಕ್ರಮವಾಗಿ ಕಾನೂನಿನ ಅಡಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ನನ್ನ ವಿರೋಧ ಯಾವತ್ತಿಗೂ ಇರಲಿಲ್ಲ. ಆರ್ಥಿಕತೆಗೆ ಗಣಿಗಾರಿಕೆಯ ಕೊಡುಗೆ ಅಪಾರವಾಗಿದೆ. ನನ್ನ ಹೋರಾಟ ಇರುವುದು ಸರ್ಕಾರಕ್ಕೆ ಮೋಸ ಮಾಡುತ್ತಾ, ಪರಿಸರ ನಾಶ ಮಾಡುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಮಾತ್ರ.

ಇದನ್ನು ಮೀರಿ ಯಾವುದಾದರೂ ಅಧಿಕಾರಿಗಳು ಲಂಚ / ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅಥವಾ ಈ ರೀತಿಯ ಪ್ರಸಂಗಗಳು ಉದ್ದೇಶಪೂರ್ವಕವಾಗಿ ನಡೆದಲ್ಲಿ ಸಂಬಂಧಪಟ್ಟವರು ನೇರವಾಗಿ ನನ್ನ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ 08232 – 229944

ಶ್ರೀಮತಿ. ಸುಮಲತಾ ಅಂಬರೀಷ್,

ಸಂಸದರು, ಮಂಡ್ಯ ಲೋಕಸಭಾ ಕ್ಷೇತ್ರ,

ಮಂಡ್ಯ

- Advertisement -

Latest Posts

Don't Miss