Sunday, March 3, 2024

Latest Posts

ಕಾಂಗ್ರೆಸ್ ನಲ್ಲಿ ಹೀರೋಗಳಿಲ್ಲ- ಕಾಮಿಡಿಯನ್ ವಿಲನ್ ಗಳೇ ಎಲ್ಲಾ- ಆರ್.ಅಶೋಕ್ ಲೇವಡಿ

- Advertisement -

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ವಿರುದ್ಧ ಸಿಡಿದೆದ್ದಿರೋ ಬಗ್ಗೆ ಮಾಜಿ ಡಿಸಿಎಂ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಆರೋಪ ಮಾಡಿರೋದು ಬರೀ ಟ್ರೇಲರ್ ಅಷ್ಟೇ, ಇನ್ನೂ ಪಿಕ್ಚರ್ ಬಾಕಿ ಇದೆ. ಕಾಂಗ್ರೆಸ್ ಪಾರ್ಟಿ ಹೀರೋ ಇಲ್ಲದೆ ವಿಲನ್, ಕಾಮಿಡಿಯನ್ ಗಳು ಇರೋ ಪಾರ್ಟಿಯಾಗಿದೆ ಅಂತ ಮಾಜಿ ಡಿಸಿಎಂ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಸರ್ಕಾರದಲ್ಲಿ ದೊಡ್ಡ ಭೂಕಂಪ ಆಗುತ್ತೆ

ಮೇ 23 ಬಿಜೆಪಿಗೆ ಸಂಭ್ರಮದ ದಿನ. ಸಮೀಕ್ಷೆ ಕೂಡ ಬಿಜೆಪಿ ಪರ ಬಂದಿವೆ. ಆದ್ರೆ ಕಾಂಗ್ರೆಸ್ ನವರಿಗೆಲ್ಲಾ  ನಡುಕ ಶುರುವಾಗಿ ರೆಸಾರ್ಟ್ ಕಡೆ ಓಡುತ್ತಿರುತ್ತಾರೆ. ಕಾಂಗ್ರೆಸ್ ನಡೆ ಓಡುವ ಕಡೆ ಎಂದಾಗುತ್ತೆ ಅಂತ ಇದೇವೇಳೆ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಡ್ಯ, ತುಮಕೂರು ಸೇರಿದಂತೆ ರಿಸಲ್ಟ್ ಬಂದ ಮೇಲೆ ಸರ್ಕಾರದಲ್ಲಿ ದೊಡ್ಡ ಭೂಕಂಪ ಆಗಿ ಲಾವಾ ರಸ ಯಾರ ಮೇಲೆ ಹರಿಯುತ್ತೋ ಗೊತ್ತಿಲ್ಲ. ಭೂಕಂಪದಲ್ಲಿ ಸರ್ಕಾರ ಎಂಬ ಮನೆ ಬಿದ್ದುಹೋಗಲಿದೆ ಅಂತ ಮಾಜಿ ಡಿಸಿಎಂ ಅಶೋಕ್ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.

ರಾಜ್ಯದಲ್ಲಿ ಯಾವ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗುತ್ತೆ. ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

https://www.youtube.com/watch?v=XxwAR80-I2g
- Advertisement -

Latest Posts

Don't Miss