Saturday, July 27, 2024

Latest Posts

ಮೊದಲ ದಿನವೇ ಮನೀಶ್ ಪಡೆಗೆ ಹಿನ್ನಡೆ 

- Advertisement -

ಬೆಂಗಳೂರು:  ಸ್ಪಿನ್ನರ್ ಸೌರಭ್ ಕುಮಾರ್ ಹಾಗೂ ಶಿವಂ ಮಾವಿ ದಾಳಿಗೆ ತತ್ತರಿಸಿದ ಕರ್ನಾಟಕ ತಂಡ ರಣಜಿ ಕ್ವಾರ್ಟರ್ ಫೈನಲ್‍ನ ಪಂದ್ಯದ ಮೊದಲ ದಿನ ಹಿನ್ನಡೆ ಅನುಭವಿಸಿದೆ.

ಸೋಮವಾರ ಆಲೂರು ಮೈದಾನದಲ್ಲಿ  ಟಾಸ್ ಗೆದ್ದ  ಉತ್ತರ ಪ್ರದೇಶ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಕರ್ನಾಟಕ ಪರ ಆರಂಭಿಕರಾಗಿ ಕಣಕ್ಕಿಳಿದ ಆರ್.ಸಮರ್ಥ್  ಹಾಗೂ ಮಯಾಂಕ್ ಅಗರ್‍ವಾಲ್ ಮೊದಲ ವಿಕೆಟ್‍ಗೆ  57ರನ್‍ಗಳ ಉತ್ತಮ ಆರಂಭ ನೀಡಿದರು.

ಚೆಂಡಿನಿಂದ ಏಟು ತಿಂದು ನಿಧಾನಗತಿಯಲ್ಲಿ ಆಡುತ್ತಿದ್ದ ಮಯಾಂಕ್ ಅಗರ್‍ವಾಲ್ (10 ರನ್) ಶಿವಂ ಮಾವಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಮೂರನೆ ಕ್ರಮಾಂಕದಲ್ಲಿ ಬಂದ ಕರುಣ್ ನಾಯರ್ ಆರ್.ಸಮರ್ಥ್‍ಗೆ ಉತ್ತಮ ಸಾಥ್ ಕೊಟ್ಟರು. ಬೌಂಡರಿಗಳ ಸುರಿಮಳೆಗೈದ ಸಮರ್ಥ್ ಅರ್ಧ ಶತಕ ಸಿಡಿಸಿದರು. ನಂತರ 57 ರನ್ ಗಳಿಸಿದ್ದಾಗ ಸೌರಭ ಕುಮಾರ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ಈ ವೇಳೆ ದಾಳಿಗಿಳಿದ ವೇಗಿ ಶಿವಂ ಮಾವಿ ಕರುಣ್ ನಾಯರ್ (29 ರನ್), ನಾಲ್ಕನೆ ಕ್ರಮಾಂಕದಲ್ಲಿ ಬಂದ ಸಿದ್ದಾರ್ಥ್ (37 ರನ್) ಅವರುಗಳನ್ನು ಬೌಲ್ಡ್ ಮಾಡಿ ಆಘಾತ ನೀಡಿದರು.

ನಂತರ ಸ್ಪಿನ್ನರ್ ಸೌರಭ ಕುಮಾರ್ ದಾಳಿಗಿಳಿದು ಮಯಮ ಕ್ರಮಾಂಕದಲ್ಲಿ ಬಂದ ನಾಯಕ ಮನೀಶ್ ಪಾಂಡೆ (27 ರನ್), ಶರತ್ (0) ಅವರುಗಳನ್ನು ಬಲಿ ಪಡೆದರು. ಕೆ ಗೌತಮ್ 12 ರನ್ ಗಳಿಸಿದರು. ದಿನದಾಟದ ಅಂತ್ಯಕ್ಕೆ  ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅಜೇಯ 26 ರನ್, ವೈಶಾಕ್ ಅಜೇಯ 12 ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.  ಕರ್ನಾಟಕ ಮೊದಲ ಇನ್ನಿಂಗ್ಸ್‍ನಲ್ಲಿ  7 ವಿಕೆಟ್ ನಷ್ಟಕ್ಕೆ  213 ರನ್ ಗಳಿಸಿದೆ.  ಉತ್ತರ ಪ್ರದೇಶ ಪರ  ಸೌರ`ï ಕುಮಾರ್ 4 ವಿಕೆಟ್, ಶಿವಂ ಮಾವಿ 3 ವಿಕೆಟ್ ಪಡೆದರು.

ಸಂಕಷಿಪ್ತ ಸ್ಕೋರ್ 

ಕರ್ನಾಟಕ ಮೊದಲ ಇನ್ನಿಂಗ್ಸ್  213/7 (72 ಓವರ್) 

ಆರ್.ಸಮರ್ಥ್ 57, ಕೆ.ಸಿದ್ದಾರ್ಥ್ 37

ಸೌರ`ï ಕುಮಾರ್ 4, ಶಿವಂ ಮಾವಿ 3 ವಿಕೆಟ್

ಮೊದಲ ದಿನ ಬಂಗಾಳ ಮೇಲುಗೈ

ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಬಂಗಾಳ ಮೊದಲ ಇನ್ನಿಂಗ್ಸ್‍ನಲ್ಲಿ 1 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದೆ.  ಬಂಗಾಳ ಪರ ಸುದೀಪ್ ಕುಮಾರ್ 106 ರನ್, ಮಜುಂ`Áರ್ 85 ರನ್ ಗಳಿಸ್ದಿರು.

ಶತಕ ಸಿಡಿಸಿದ ಸುವೇದ್ ಪಾರ್ಕರ್

ಎರಡನೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಎದುರಾಳಿ ಉತ್ತರಾಖಂಡ್ ವಿರುದ್ಧ ಮೊದಲ ದಿನ ಮೇಲುಗೈ ಸಾಸಿದೆ. ಟಾಸ್ ಗೆದ್ದ  ಮುಂಬೈ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಪರ ಸುವೇದ್ ಪಾರ್ಕರ್ ಅಜೇಯ 104, ರ್ಸಾರಾಜ್ ಖಾನ್ ಅಜೇಯ 69, ಅರ್ಮಾನ್ ಜಾÀರ್ 60 ರನ್ ಗಳಿಸಿದರು. ಮುಂಬೈ ಮೊದಲ ಇನ್ನಿಂಗ್ಸ್‍ನಲ್ಲಿ  3 ವಿಕೆಟ್ ನಷ್ಟಕ್ಕೆ 304 ರನ್ ಕಲೆ ಹಾಕಿದೆ.

ಪಂಜಾಬ್ ಕಟ್ಟಿ ಹಾಕಿದ ಮಧ್ಯಪ್ರದೇಶ 

ನಾಲ್ಕನೆ ಕ್ವಾರ್ಟರ್‍ನಲ್ಲಿ ಮಧ್ಯಪ್ರದೇಶ ಪಂಜಾಬ ತಂಡದ ವಿರುದ್ಧ ಮೇಲುಗೈ ಸಾಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡವನ್ನು 219 ರನ್‍ಗಳಿಗೆ ಆಲೌಟ್ ಮಾಡಿದೆ. ಮೊದಲ ಇನ್ನಿಂಗ್ಸ್  ಆರಂಭಿಸಿರುವ ಮಧ್ಯಪ್ರದೇಶ ಯಾವುದೇ ವಿಕೆಟ್ ನಷ್ಟವಿಲ್ಲದೇ 5 ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದೆ.

 

 

- Advertisement -

Latest Posts

Don't Miss