ಕರ್ನಾಟಕ ಟಿವಿ : ನಾಡು-ನುಡಿ-ಜಲ-ಜನದ ವಿಚಾರದಲ್ಲಿ ಹೋರಾಟ ಅಥವಾ ಆಂದೋಲನ ರೂಪುಗೊಂಡಾಗ ಸ್ಯಾಂಡಲ್ವುಡ್ ಯಾವಾಗಲು ಸಿದ್ದವಿರುತ್ತೆ. ಇದೀಗ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಕೈಜೋಡಿಸಿದ್ದಾರೆ. ಸೈಮಾ ಅವಾರ್ಡ್ ಪಡೆದ ಅಯೋಗ್ಯ ನಿರ್ದೇಶಕ ಮಹೇಶ್ ಗೌಡ, ನಟಿ ಕವಿತಾ ಗೌಡ, ಹೊಸ ಎಂಟ್ರಿಯಾದ್ರೂ ಪಡ್ಡೆಹೈಕಳ ಅಡ್ಡಾದಲ್ಲಿ ಧೂಳೆಬ್ಬಿಸುತ್ತಿರು ನಟ ಧನ್ವೀರ್ ಗೌಡ, ನಟಿ ಸಂಯುಕ್ತ ಹೊರನಾಡ್ ಇಂದು ಸರ್ಕಾರಿ ಶಾಲೆ ಉಳಿಸಿ ಆಂದೋಲನದಲ್ಲಿ ಭಾಗಿಯಾದ್ರು.
ಮಂಡ್ಯದ ಹಳ್ಳಿಯಲ್ಲಿ ಸ್ಯಾಂಡಲ್ವುಡ್ ಸಂದೇಶ
ಮಂಡ್ಯ ತಾಲೂಕಿನ ದ್ಯಾಪಸಂದ್ರ ಗ್ರಾಮದ ಸರ್ಕಾರಿ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಸಂದೇಶ ಕೊಟ್ರು. ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಬೇಡಿ. ಸರ್ಕಾರಿ ಶಾಲೆಗೆ ಮಕ್ಕಳನ್ನ ಸೇರಿಸಿ, ರೈತರ, ಮಧ್ಯಮದ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡೋಣ ಅಂತ ಸಂದೇಶ ಸಾರಿದ್ರು.
ತವರಲ್ಲಿ ರೈಸಿಂಗ್ ಸ್ಟಾರ್ ಡೈರೆಕ್ಟರ್ ಮಹೇಶ್ ಗೌಡ ಸವಿಸವಿನೆನಪು
ಅಯೋಗ್ಯ ಸಿನಮಾ ನಿರ್ದೇಶಕ, ಸೈಮಾ ಅವಾರ್ಡ್ ಪಡೆದ ಮಹೇಶ್ ಗೌಡ ಮಂಡ್ಯದ ಮಾರಗೌಡನಹಳ್ಳಿಯವರು. ಸರ್ಕಾರಿ ಶಾಲೆ ಉಳಿಸಿ ಆಂದೋಲನದಲ್ಲಿ ಭಾಗಿಯಾಗಿ ತಾವು ಸರ್ಕಾರಿ ಶಾಲೆಯಲ್ಲಿ ಓದಿದ ದಿನಗಳನ್ನ ಮೆಲುಕು ಹಾಕಿದ್ರು. ಸೇವ್ ಗವರ್ನಮೆಂಟ್ ಸ್ಕೂಲ್ ಎನ್ ಜಿ ಓ ನೇತೃತ್ವದಲ್ಲಿ ಈ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸ್ಥೆ ಈಗಾಗಲೇ ಇಂಥಜ ಹತ್ತಾರು ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ ಮಾಡಿದೆ. ಈ ಕಾರ್ಯಕ್ಕೆ ನಟಿ ಪ್ರಣಿತಾ ಸಹ ಸಾಥ್ ನೀಡುತ್ತಾ ಬಂದಿದ್ದಾರೆ. ಮಂಡ್ಯ ಮೂಲದ ಸುನೀಲ್ ಹಾಗೂ ಎನ್ ಜಿಓ ಮುಖ್ಯಸ್ಥ ಅನಿಲ್ ರಾಜ್ಯದಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಕಟ್ಟಿಕೊಂಡು ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ. ಇವರ ಕಾರ್ಯಕ್ರಮ ಸಕ್ಸಸ್ ಆಗಲಿ. ಸಾಧ್ಯವಾದ್ರೆ ನೀವೂ ಸಾಥ್ ನೀಡಿ.
ಸಂಪರ್ಕಿಸಿ : ಸುನೀಲ್ ಕುಮಾರ್, ರಾಜ್ಯ ಕಾರ್ಯಾಧ್ಯಕ್ಷ, ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ, 98861 36894