Saturday, May 25, 2024

Latest Posts

Shirva School : ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

- Advertisement -

Karkala News : ಸಂತ ಮೇರಿ ಮಹಾವಿದ್ಯಾಲಯದಲ್ಲಿ 77ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಲ್ಲಿ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸರವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಇತಿಹಾಸದಲ್ಲಿ ಕೋಟ್ಯಾಂತರ ಭಾರತೀಯರ ತ್ಯಾಗ,ಬಲಿದಾನ, ಹೋರಾಟದ ಫಲವೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ.  ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ. ನವ ಸಮಾಜ ನಿರ್ಮಾಣ ಜೊತೆಗೆ ದೇಶಾಭಿವೃದ್ಧಿಗಾಗಿ ಇಂದು ಯುವಕರು ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ನೀಡಿ ದೇಶ ಪ್ರಗತಿಗೆ ಕೈಜೋಡಿಸಬೇಕು ಎಂದರು.

ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್, ಜೂನಿಯರ್ ಅಂಡರ್ ಆಫೀಸರ್  ಅನೀಶ್ ಭಟ್ ,ಪೂಜಾ,ಕ್ವಾರ್ಟರ್ ಮಾಸ್ಟರ್   ಅನುಪ್ ನಾಯಕ ಪರೇಡ್‍ನ ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ರೇಂಜರ್ಸ್ ಸ್ಕೌಟ್ ಲೀಡರ್ ಸಂಗೀತ ಪೂಜಾರಿ, ಎನ್.ಸಿ.ಸಿ, ಎನ್ ಎಸ್ ಎಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಭೋಧಕ ಹಾಗೂ ಭೋಧಕೆತರ ವೃಂದದವರು ಉಪಸ್ಥಿತರಿದ್ದರು. ಕ್ಯಾಡೆಟ್‍ಗಳಾದ  ವಿಶಾಲ್ ಟೆರೆನ್ಸ್ ವಾಜ್ ಹಾಗೂ ಆಲಿಸ್ಟರ್ ಸುಜಾಯ್ ಡಿಸೋಜ ಸಹಕರಿಸಿದರು.

ರೋವರ್ಸ್ ಸ್ಕೌಟ್ ಲೀಡರ್ ಪ್ರಕಾಶ್ ಸ್ವಾಗತಿಸಿ, ಎನ್‍ಎಸ್‍ಎಸ್ ಯೋಜನಾಧಿಕಾರಿ ಪ್ರೇಮನಾಥ್ ವಂದಿಸಿದರು. ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಸಂಯೋಜಿಸಿದರು.

School : ಕೆದಿಂಜೆ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

Hospital : ಶಿರ್ವ : ಸಮುದಾಯ ಆರೋಗ್ಯ ಕೇಂದ್ರದ ರಾತ್ರಿ ತುರ್ತು ಚಿಕಿತ್ಸೆ ಪಾಳಿಗೆ ಚಾಲನೆ ನೀಡಿದ ಶಾಸಕರು

Independence Day : ಕಾರ್ಕಳ : ಗೋಳಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

- Advertisement -

Latest Posts

Don't Miss