Karkala News : ನಂದಳಿಕೆ ಗೋಳಿಕಟ್ಟೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿ ರಿ. ನಂದಳಿಕೆ ಹಾಗೂ ಶ್ರೀ ಗುರುದುರ್ಗಾ ಮಹಿಳಾ ಮಂಡಳಿ ವತಿಯಿಂದ ಗೋಳಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸ್ಥಳೀಯ ಹಿರಿಯರಾದ ಸುಮಾರು 92 ವರ್ಷ ಪ್ರಾಯದ ಕರ್ಗಿ ಪೂಜಾರಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ಮಣ್ ರೋಟರಿ ಕ್ಲಬ್‍ನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಮಾತನಾಡಿ ಸಾಕಷ್ಟು ತ್ಯಾಗ ಬಲಿದಾನದ ಫಲವಾಗಿ ನಾವು ಸ್ವಾತಂತ್ರರಾಗಿದ್ದೇವೆ. ಈ ದೇಶಕ್ಕಾಗಿ ಹಲವಾರು ನಾಯಕರು ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ಅಂತಹ ರಾಷ್ಟ್ರ ನಾಯಕರನ್ನು ನಾವು ಸದಾ ನೆನಪಿಸುವ ಕಾರ್ಯವಾಗಬೇಕು. ರಾಷ್ಟ್ರ ಭಕ್ತಿ ಎನ್ನುವುದು ನಮ್ಮಲ್ಲಿರಬೇಕು ಎಂದರು.
ಶ್ರೀ ಗುರುದುರ್ಗಾ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಜೋಯ್ಸ್ ಟೆಲ್ಲಿಸ್ ಮಾತನಾಡಿ ಬ್ರಿಟಿಷರಿಂದ ನಾವು ಸುಲಭದಲ್ಲಿ ಸ್ವಾತಂತ್ರ್ಯವನ್ನು ಪಡೆದಿಲ್ಲ. ಅದರ ಹಿಂದೆ ಅದೆಷ್ಟೋ ಮಹನಿಯರ ತ್ಯಾಗ ಪ್ರಾಣದ ಬಲಿದಾನವಿದೆ. ನಮ್ಮ ಕೇವಲ ಒಂದು ದಿನಕ್ಕೆ ಮಾತ್ರ ರಾಷ್ಟ್ರಪ್ರೇಮ ಮೂಡದೆ ನಿರಂತರ ನಮ್ಮ ಮನೆ ಮನಗಳಲ್ಲಿ ರಾಷ್ಟ್ರ ಪ್ರೇಮ ಮೂಡಬೇಕು. ಮಕ್ಕಳಿಗೆ ರಾಷ್ಟ್ರ ಭಕ್ತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸ ಪ್ರತೀ ಮನೆಯಿಂದ ಆರಂಭವಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಕರ್ಗಿ ಪೂಜಾರಿಯವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರ ಮಂಡಳಿಯ ಅಧ್ಯಕ್ಷ ಹರಿಪ್ರಸಾದ್ ನಂದಳಿಕೆ ವಹಿಸಿ, ಸ್ವಾಗತಿಸಿದರು. ಈ ಸಂದರ್ಭ ನಂದಳಿಕೆ ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಅಮೀನ್, ಅಂಗನವಾಡಿ ಕೇಂದ್ರದ ಶಿಕ್ಷಕಿ ಸುಶೀಲ, ಬೆಳ್ಮಣ್ ರೋಟರಿ ಕ್ಲಬ್‍ನ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ನಂದಳಿಕೆ ಗ್ರಾ.ಪಂ ಸದಸ್ಯ ಪ್ರಸಾದ್ ಶೆಟ್ಟಿ, ಮಹಿಳಾ ಮಂಡಳಿಯ ಅಧ್ಯಕ್ಷೆ ರೇಶ್ಮಾ ಹರೀಶ್, ಮತ್ತಿತರರು ಉಪಸ್ಥಿತರಿದ್ದರು.
Lakshmi Hebbalkar : ಉಡುಪಿ : ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್
Lakshmi Hebbalkar : ನಡೆದು ಬಂದ ಹಾದಿಯನ್ನು ಮೆಲುಕು ಹಾಕಿ ಮುಂದೆ ನಡೆಯಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Lakshmi Hebbalkar : ಉಡುಪಿ : ಕಿರು ಸ್ಮರಣಿಕೆ ಬಿಡುಗಡೆಗೊಳಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್