Sunday, May 19, 2024

Latest Posts

ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆಂದ ರಶೀದ್: ಕಿರುತೆರೆ ನಟ ಆತ್ಮಹತ್ಯೆಗೆ ಶರಣು: ರಿಷಬ್ ಪುತ್ರನ ಹಾಫ್ ಬರ್ತ್‌ಡೇ..

- Advertisement -

ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆ: ಸಾಜೀದ್ ರಶೀದ್ ಹೇಳಿಕೆ
ಮುಸ್ಲಿಂ ಸಂಘಟನೆಯೊಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ರಾಮಮಂದಿರವನ್ನು ಕೆಡವಿ, ಮತ್ತೆ ಮಸೀದಿ ಕಟ್ಟುತ್ತೇವೆ ಎಂದಿದ್ದಾರೆ. ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಸಾಜೀದ್ ರಶೀದ್ ಈ ಹೇಳಿಕೆ ನೀಡಿದ್ದು, ಮಸೀದಿ ಎಂದಿಗೂ ಮಸೀದಿಯಾಗಿಯೇ ಇರಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಸೀದಿ ಜಾಗದಲ್ಲಿ ಬೇರೆ ಏನನ್ನೂ ನಿರ್ಮಿಸಲು ನಾವು ಬಿಡುವುದಿಲ್ಲ. ಬಾಬ್ರಿ ಮಸೀದಿ ನಿರ್ಮಿಸುವಾಗ ಯಾವುದೇ ದೇವಾಲಯ ಕೆಡವಿರಲಿಲ್ಲ. ಆದ್ರೆ ಈಗ ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಮನೋಜ್ ಸಿನ್ಹಾ ಆಯ್ಕೆ
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಜಿ.ಸಿ.ಮುರ್ಮು ರಾಜೀನಾಮೆ ನೀಡಿದ್ದು, ಬಿಜೆಪಿಯ ಹಿರಿಯ ನಾಯಕ ಮನೋಜ್ ಸಿನ್ಹಾ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿ, ಸಂವಿಧಾನದ 370 ವಿಧಿಯನ್ನ ರದ್ದುಪಡಿಸಿ, ರಾಜ್ಯವನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಣೆ ಮಾಡಿತ್ತು. ಮೊದಲ ಗವರ್ನರ್ ಲೆಫ್ಟಿನೆಂಟ್ ಆಗಿ ಜಿ.ಸಿ.ಮುರ್ಮು ನೇಮಕಗೊಂಡಿದ್ದರು.

ಚರ್ಚೆಗೆ ಗ್ರಾಸವಾದ ಮೋದಿ ಮತ್ತು ರಾಮನ ಫೋಟೋ
ರಾಮಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ಮೊನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಲವು ತರಹದ ಫೋಟೋಗಳು ಹರಿದಾಡುತ್ತಿದ್ದವು. ಅದರಲ್ಲಿ ಮೋದಿ ಜೊತೆ ಶ್ರೀರಾಮನಿದ್ದ ಫೋಟೋ ಕೂಡ ಇತ್ತು. ಇಂಥ ಫೋಟೋಗಳಲ್ಲಿ ಬಾಲ ರಾಮನನ್ನು ಪ್ರಧಾನಿ ಮೋದಿ ಕರೆದುಕೊಂಡು ಹೋಗುತ್ತಿದ್ದ ಫೋಟೋವೊಂದನ್ನ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೋ ಈಗ ಚರ್ಚೆಗೆ ಗ್ರಾಸವಾಗಿದ್ದು, ರಾಮನಿಗಿಂತ ಮೋದಿ ದೊಡ್ಡವರೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಹಿಂದಿ ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆಗೆ ಶರಣು
ಹಿಂದಿಯ ಕಿರುತೆರೆ ನಟ ಸಮೀರ್ ಶರ್ಮಾ(44) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಪಶ್ಚಿಮ್ ಮಲಾಡ್ ಬಡಾವಣೆಯ ನೇಹಾ ಕಟ್ಟಡದ ಫ್ಲ್ಯಾಟ್‌ನಲ್ಲಿ ಸಮೀರ್ ವಾಸವಾಗಿದ್ದರು. ಮನೆಯ ಅಡುಗೆ ಕೋಣೆಯಲ್ಲಿ ಸಮೀರ್ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪುತ್ರನ ಹಾಫ್ ಬರ್ತ್‌ಡೇ ಮಾಡಿದ ರಿಷಬ್ ಶೆಟ್ಟಿ ದಂಪತಿ
ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿಯ ಆರು ತಿಂಗಳ ಮಗನಾದ ರಣ್ವಿತ್ ಶೆಟ್ಟಿಯ ಅರ್ಧ ವರ್ಷದ ಬರ್ತ್‌ಡೇಯನ್ನ ಸೆಲೆಬ್ರೇಟ್ ಮಾಡಲಾಗಿದೆ. ಪ್ರಗತಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಫೋಟೋ ಶೇರ್ ಮಾಡಿಕೊಂಡಿದ್ದು, ಬರ್ತ್‌ಡೇ ಡ್ರೆಸ್‌ನಲ್ಲಿ ರಣ್ವಿತ್ ಕ್ಯೂಟ್ ಕ್ಯೂಟ್ ಆಗಿ ಕಂಡಿದ್ದಾನೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss